ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ಗೆ ಟ್ಯಾಂಕ್‌ ನಿಗ್ರಹ ವ್ಯವಸ್ಥೆ ಮಾರಾಟ ಮಾಡಲಿರುವ ಅಮೆರಿಕ

Last Updated 29 ಡಿಸೆಂಬರ್ 2022, 11:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದಿಂದ ಬೆದರಿಕೆ ಎದುರಿಸುತ್ತಿರುವ ತೈವಾನ್‌ಗೆ ಟ್ಯಾಂಕ್‌ ನಿಗ್ರಹ ವ್ಯವಸ್ಥೆಯನ್ನು ಮಾರಾಟ ಮಾಡಲು ಅಮೆರಿಕದ ವಿದೇಶಾಂಗ ಸಚಿವಾಲಯ ಅನುಮೋದನೆ ನೀಡಿದೆ.

ಅಂದಾಜು ₹1,491 ಕೋಟಿ ಮೌಲ್ಯದ ‘ವಾಲ್ಕೆನೊ’ ಟ್ಯಾಂಕ್‌ ನಿಗ್ರಹ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ವಾಹನ ಮತ್ತು ಹೆಲಿಕಾಪ್ಟರ್‌ಗಳಲ್ಲಿ ಅಳವಡಿಸಬಹುದಾಗಿದ್ದು, ವಾಹನದಲ್ಲಿ ಅಳವಡಿಸುವ ವ್ಯವಸ್ಥೆಯನ್ನು ತೈವಾನ್‌ ಖರೀದಿಸಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಇದು ವಿರೋಧಿಗಳ ಟ್ಯಾಂಕ್‌ಗಳನ್ನು ಮತ್ತು ನೆಲಬಾಂಬ್‌ಗಳನ್ನು ನಿಗ್ರಹಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದೂ ಹೇಳಿದೆ.

ಚೀನಾವು 71 ಯುದ್ಧ ವಿಮಾನಗಳನ್ನು ಮತ್ತು ಏಳು ಯುದ್ಧನೌಕೆಗಳನ್ನು ತೈವಾನ್‌ ಸಮೀಪಕ್ಕೆ ಕಳುಹಿಸಿದೆ ಎಂದು ತೈವಾನ್‌ನ ರಕ್ಷಣಾ ಸಚಿವಾಲಯವು ಈಚೆಗೆ ಹೆಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT