ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವಿದೇಶಾಂಗ ಇಲಾಖೆಯ ದೈನಂದಿನ ಪತ್ರಿಕಾಗೋಷ್ಠಿ ನಡೆಸಿದ ವೇದಾಂತ್ ಪಟೇಲ್

Last Updated 7 ಸೆಪ್ಟೆಂಬರ್ 2022, 14:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಅಮೆರಿಕ ವಿದೇಶಾಂಗ ಇಲಾಖೆಯಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಅವರು ವಿದೇಶಾಂಗ ಇಲಾಖೆಯ ದೈನಂದಿನಪತ್ರಿಕಾಗೋಷ್ಠಿ ನಡೆಸುವ ಮಹತ್ವದ ಹೊಣೆಗಾರಿಕೆ ಪಡೆದಿದ್ದಾರೆ. ತನ್ಮೂಲಕ ಈ ಸ್ಥಾನಕ್ಕೇರಿದ ಮೊಟ್ಟ ಮೊದಲ ಭಾರತ ಮೂಲದ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಮಂಗಳವಾರ ವಿದೇಶಾಂಗ ಇಲಾಖೆ ವಕ್ತಾರ ನೆಡ್‌ ಪ್ರಿನ್ಸ್ ಅವರು ರಜೆಯಲ್ಲಿದ್ದ ಕಾರಣ ಪಟೇಲ್‌ ಅವರು ಇಲಾಖೆಯ ಪತ್ರಿಕಾಗೋಷ್ಠಿ ನಡೆಸಿದರು.

ಪಟೇಲ್‌ ಅವರು ಈ ಮೊದಲು, ಅಮೆರಿಕದ ಶ್ವೇತಭವನದಲ್ಲಿಸಹಾಯಕ ಮಾಧ್ಯಮ ಕಾರ್ಯದರ್ಶಿ ಮತ್ತು ಅಧ್ಯಕ್ಷ ಜೊ ಬೈಡನ್‌ ಅವರ ವಕ್ತಾರರಾಗಿದ್ದರು. ಗುಜರಾತ್‌ ಮೂಲದ ಪಟೇಲ್‌ ಅವರು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT