ಶನಿವಾರ, ಅಕ್ಟೋಬರ್ 1, 2022
20 °C

ಪೂರ್ವ ಅಲ್ಜೀರಿಯಾದಲ್ಲಿ ಕಾಳ್ಗಿಚ್ಚು: 26 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಅಲ್ಜೀರ್ಸ್‌ (ಎಪಿ): ಪೂರ್ವ ಅಲ್ಜೀರಿಯಾದ ಕಾಡುಗಳಲ್ಲಿ ಹಬ್ಬಿರುವ ಕಾಳ್ಗಿಚ್ಚು 26 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಒಳಾಡಳಿತ ಸಚಿವ ಕಾಮೆಲ್ ಬೆಲ್ಡ್‌ಜೌಡ್ ಹೇಳಿದ್ದಾರೆ.

ಉತ್ತರ ಅಲ್ಜೀರಿಯಾ-ಟ್ಯುನೇಶಿಯಾ ಗಡಿಯ ಸಮೀಪವಿರುವ ಎಲ್ ಟಾರ್ಫ್‌ನ ವಿಲಯಾ ಪ್ರದೇಶದಲ್ಲಿ ಕಾಳ್ಗಿಚ್ಚಿಗೆ 24 ಮಂದಿ ಸತ್ತಿದ್ದಾರೆ. ಸೆಟಿಫ್ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ ಆರಂಭದಿಂದ 3,200 ಹೆಕ್ಟೇರ್‌ನಷ್ಟು ಕಾಡು ಪ್ರದೇಶ ಹಾಗೂ ಹುಲ್ಲುಗಾವಲು ಬೆಂಕಿಯಿಂದ ನಾಶವಾಗಿವೆ ಎಂದು ಅವರು ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು