ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಸಾಸ್‌ನಲ್ಲಿ ಹೆಚ್ಚಿದ ಚಳಿ; ಹಲವೆಡೆ ವಿದ್ಯುತ್‌ ಕಡಿತ

Last Updated 16 ಫೆಬ್ರುವರಿ 2021, 7:13 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಟೆಕ್ಸಾಸ್‌ನಲ್ಲಿ ಚಳಿ ಬಹಳ ಜೋರಾಗಿದ್ದು, ಇದರಿಂದಾಗಿ ಹ್ಯೂಸ್ಟನ್‌ನಹಲವೆಡೆ ವಿದ್ಯುತ್‌ ಕಡಿತವೂ ಉಂಟಾಗಿದೆ.

‘ಗುರುವಾರ ಬೆಳಿಗ್ಗೆ 6 ಗಂಟೆಯ ತನಕ ಟೆಕ್ಸಾಸ್‌ನಲ್ಲಿ ಚಳಿಯ ತೀವ್ರತೆ ಹೆಚ್ಚಿರಲಿದೆ’ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವಾನಿರತರು ಎಚ್ಚರಿಸಿದ್ದಾರೆ.

‘ಈ ಸಮಯದಲ್ಲಿ ಅತಿ ಹೆಚ್ಚು ಚಳಿಯ ಜತೆಗೆ ಮಳೆಯಾಗುವ ಸಾಧ್ಯತೆಯು ಇದೆ’ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಭಾನುವಾರ ಟೆಕ್ಸಾಸ್‌ನಲ್ಲಿ ತುರ್ತು ವಿಪತ್ತು ಘೋಷಣೆ ಮಾಡಿದ್ದಾರೆ.

‘ಅನೇಕ ವಿದ್ಯುತ್ ಕಂಪನಿಗಳು ಅತಿಯಾದ ಚಳಿಯಿಂದಾಗಿ ವಿದ್ಯುತ್‌ ಉತ್ಪಾದಿಸುವಲ್ಲಿ ವಿಫಲವಾಗಿದೆ. ಈ ಹವಾಮಾನದಲ್ಲಿ ಕಲ್ಲಿದ್ದಲು, ನೈಸರ್ಗಿಕ ಅನಿಲ ಅಥವಾ ಗಾಳಿಯಿಂದಾಗಲಿ ವಿದ್ಯುತ್‌ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಗವರ್ನರ್‌ಗ್ರೆಗ್ ಅಬಾಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT