ಬುಧವಾರ, ಜನವರಿ 20, 2021
25 °C

ಅಮೆರಿಕ: ರೈತರ ಪ್ರತಿಭಟನೆಗೆ ವಿಸ್ಕನ್‌ಸಿನ್‌ ಸ್ಪೀಕರ್‌ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ದೆಹಲಿಯ ಗಡಿ ಪ್ರದೇಶದಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಅಮೆರಿಕದ ವಿಸ್ಕನ್‌ಸಿನ್‌ ರಾಜ್ಯದ ಅಸೆಂಬ್ಲಿಯ ಸ್ಪೀಕರ್‌ ಬೆಂಬಲ ಸೂಚಿಸಿದ್ದಾರೆ. ಭಾರತ ಸರ್ಕಾರವು ರೈತರ ಸಮಸ್ಯೆಗಳನ್ನು ಆಲಿಸಿ, ಮೂರು ಕೃಷಿ ಕಾಯ್ದೆಗಳ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಅಮೆರಿಕದ ಭಾರತೀಯ ರಾಯಭಾರಿ ತರಣ್‌ಜೀತ್‌ ಸಿಂಗ್‌ ಸಂಧು ಮತ್ತು ಭಾರತದ ಅಮೆರಿಕನ್‌ ರಾಯಭಾರಿ ಕೇನ್‌ ಜಸ್ಟರ್‌ ಅವರಿಗೆ ಸ್ಫೀಕರ್‌ ರಾಬಿನ್ ಜೆ ವೋಸ್ ಅವರು ಪತ್ರ ಬರೆದಿದ್ದಾರೆ.

‘ಭಾರತದ ಆರ್ಥಿಕತೆಯಲ್ಲಿ ಕೃಷಿ ದೊಡ್ಡ ಪಾತ್ರವನ್ನು ಹೊಂದಿದೆ. ರೈತರು ನಮ್ಮ ಆರ್ಥಿಕತೆಯ ಬಹುದೊಡ್ಡ ಪಾಲು. ರೈತರಿಂದ ಮಾಹಿತಿ ಸಂಗ್ರಹಿಸದೆ, ಕೃಷಿ ಕಾನೂನುಗಳನ್ನು ಜಾರಿಗೆ ತರುವುದು ಸರಿಯಲ್ಲ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿಗೆ ಧಕ್ಕೆ ಉಂಟು ಮಾಡುವುದು ಕೂಡ ತಪ್ಪು’ ಎಂದು ವಿಸ್ಕನ್‌ಸಿನ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ, ರೈತರ ಸಮಸ್ಯೆಗಳ ಸಮಸ್ಯೆಗಳನ್ನು ಆಲಿಸಿ, ಮೂರು ಕೃಷಿ ಕಾಯ್ದೆಗಳ ಬಗ್ಗೆ ಮರು ಚಿಂತನೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು