ಕ್ಷುಲ್ಲಕ ಕಾರಣಕ್ಕೆ ಜಗಳ: ಯುವಕನ ಕೊಲೆ

ಶುಕ್ರವಾರ, ಮೇ 24, 2019
22 °C

ಕ್ಷುಲ್ಲಕ ಕಾರಣಕ್ಕೆ ಜಗಳ: ಯುವಕನ ಕೊಲೆ

Published:
Updated:

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಯುವಕನೊಬ್ಬ ಕೊಲೆಯಾದ ಪ್ರಕರಣ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ನಗರದ ಉಪ್ಪಾರ ಬಡಾವಣೆ ನಿವಾಸಿ ಗಣೇಶ ಎಂಬುವವರ ಪುತ್ರ ಮಹೇಶ್‌ (19) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅದೇ ಬಡಾವಣೆಯ ಮಹೇಶ್‌ ಮತ್ತು ಕಿರಣ್‌ ಎಂಬುವವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಗುರು ಮತ್ತು ಲೋಕೇಶ್‌ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹೇಶ್‌ ದೇವರಗುಡ್ಡರಾಗಿದ್ದರು (ಪೂಜೆ ಮಾಡುವವರು). ಉಳಿದ ನಾಲ್ವರು ಆರೋಪಿಗಳೂ ದೇವರಗುಡ್ಡರಾಗಿದ್ದರು. ಪೂಜೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್‌ ಹಾಗೂ ನಾಲ್ವರ ನಡುವೆ ಜಗಳವಾಗಿದೆ. ನಾಲ್ವರು ಮಹೇಶ್‌ ಅವರಿಗೆ ಹೊಡೆದಿದ್ದಾರೆ. ಆಗ ಮಹೇಶ್ ಅವರು ಮೃತಪಟ್ಟರು ಎನ್ನಲಾಗಿದೆ.

ಮಹೇಶ್‌ ತಾಯಿ ಭಾನುವಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿರುವ ಸಬ್‌ ಇನ್‌ಸ್ಪೆಕ್ಟರ್‌ ರವಿಕಿರಣ್‌ ಹಾಗೂ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !