ಆಟಿಸಂ ನರ ಬೆಳವಣಿಗೆಗೆ ಸಂಬಂಧಿಸಿದ ವಿಕಲತೆ. ಇದು ಸಂವಹನಕ್ಕೆ ದೊಡ್ಡ ಕಂಟಕ. ಆದರೆ, ಇಪ್ಪತ್ತು ವರ್ಷದ ಅದಿತಿ ಸೌಮ್ಯ ನಾರಾಯಣನ್ ತಾಯಿಯ ಬೆಂಬಲದೊಂದಿಗೆ ಆಟಿಸಂ ಅನ್ನು ಮೆಟ್ಟುನಿಂತು ಪ್ರೇರಕ ಶಕ್ತಿಯಾಗಿದ್ದಾರೆ.

ಒಂದಕ್ಷರವನ್ನು ಉಚ್ಚರಿಸಲು ಕಷ್ಟಪಡುತ್ತಿದ್ದ ಹೆಣ್ಣುಮಗಳೊಬ್ಬರು ತನ್ನ ಕಲ್ಪನಾ ಸಾಮರ್ಥ್ಯದಿಂದಲೇ ನರ ಬೆಳವಣಿಗೆಗೆ ಸಂಬಂಧಿಸಿದ ವಿಕಲತೆಯನ್ನು ಮೆಟ್ಟಿ ನಿಂತು, ಆಟಿಸಂ ಬಾಧಿತರಿಗೆಲ್ಲ ದೊಡ್ಡ ಪ್ರೇರಕಶಕ್ತಿಯಾಗಿದ್ದಾರೆ.

ಅದಿತಿ ಸೌಮ್ಯ ನಾರಾಯಣನ್ ಎಂಬ ಸುಕೋಮಲೆ ಬರವಣಿಗೆಯಷ್ಟೆ ಅಲ್ಲದೇ, ಸಂವಹನದಲ್ಲಿಯೂ ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡಿದ್ದಾರೆ. ಅಳೆದು ತೂಗಿ ಮಾಡಿದ ನವಿರೆಳೆಯ ನೇಯ್ಗೆಯಂತೆ ಸಹಜವಾಗಿ ಸಂವಹನಕ್ಕೆ ಇಳಿಯುವ ಅವರು ತಾವೊಬ್ಬ ಲೇಖಕಿ, ಕಥೆಗಾರ್ತಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಷ್ಟಪಡುತ್ತಾರೆ.

‘ಆಟಿಸಂ ಎಂಬುದು ಸಂವಹನಕ್ಕೆ ದೊಡ್ಡ ಕಂಟಕವಲ್ಲವೇ’ ಎಂಬ ಪ್ರಶ್ನೆ ಕೇಳುವ ಮುನ್ನವೇ, ತಮ್ಮ ಮನಸ್ಸಿನೊಳಗೆ ಹಲವು ವರ್ಷಗಳಿಂದ ಕಟ್ಟಿಕೊಂಡಿರುವ ಅನೂಹ್ಯ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಬೆಂಗಳೂರಿನ 20 ವರ್ಷದ ಅದಿತಿ.

ದೃಢ ಮನಸ್ಸು ಇದ್ದರೆ, ಕಲ್ಪನಾ ಸಾಮರ್ಥ್ಯವನ್ನು ಬೆಳೆಸಿಕೊಂಡರೆ, ಸಹನಶೀಲತೆಯನ್ನು ರೂಢಿಸಿಕೊಂಡು ಬಿಟ್ಟರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅದಿತಿ ಚಂದದ ಉದಾಹರಣೆ. ಅಕ್ಷರಗಳನ್ನು ಪ್ರೀತಿಸುತ್ತಲೇ ನ್ಯೂರೋಡೈವರ್ಸಿಟಿ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿಯೂ ತಮ್ಮನ್ನು ರೂಪಿಸಿಕೊಂಡಿರುವುದು ಅವರ ವ್ಯಕ್ತಿತ್ವದ ವಿಶೇಷ.

‘ಬಾಲ್ಯ ಹೇಗಿತ್ತು’ ಎಂಬ ಪ್ರಶ್ನೆಗೆ ಸಹಜವಾಗಿ ‘ಸಂತೋಷಕರ’ವಾಗಿತ್ತು ಎಂಬ ಉತ್ತರವನ್ನೇ ನೀಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ತಮ್ಮ ಸುತ್ತಲಿನ ಮಕ್ಕಳಿಗಿಂತ ತಾನು ವಿಭಿನ್ನ ಎಂಬ ಅರಿವು ಅವರಿಗೆ ಇತ್ತು. ಬೇರೆ ಮಕ್ಕಳಿಗೆ ಪದಗಳು ಸಹಜವಾಗಿ ಹರಿದುಬಂದರೆ, ತಮಗೆ ಒಂದು ಅಕ್ಷರವನ್ನು ಹೊರಹಾಕಲು ಕಷ್ಟವಾಗುತ್ತಿದ್ದ ಅನುಭವಗಳನ್ನು ಈಗ ಸಶಕ್ತವಾಗಿ ಹೇಳಬಲ್ಲರು. ಚಿಕ್ಕವರಿದ್ದಾಗಲೇ ಅವರ ಕಿವಿ ಮೇಲೆ ಪದೇ ಪದೇ ಬೀಳುತ್ತಿದ್ದ ಪದ ‘ಆಟಿಸಂ’. ಸುಮಾರು ಎಂಟು ವರ್ಷವಿದ್ದಾಗ ತಾನೊಬ್ಬ ಆಟಿಸ್ಟಿಕ್ ಎಂಬುದನ್ನು ಅಧಿಕೃತವಾಗಿ ಹೇಳಲಾಯಿತು ಎಂಬುದನ್ನೂ ಅವರು ಮರೆತಿಲ್ಲ.

‘ಕೆಲವೊಮ್ಮೆ ಈ ಆಟಿಸಂ ಇರದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಅನಿಸಿದ್ದು ಇದೆ. ಆದರೆ, ನನ್ನ ಕುಟುಂಬ, ಅದರಲ್ಲಿಯೂ ನನ್ನ ತಾಯಿ ಈ ವಿಚಾರದಲ್ಲಿ ನನ್ನನ್ನು ಕೈಬಿಡಲಿಲ್ಲ. ನಾನು ಸೋತಂತೆ ಕಂಡಾಗೆಲ್ಲ, ನೀನು ಸೋತಿಲ್ಲ, ಸೋಲುವುದೂ ಇಲ್ಲ. ಸೋಲುವುದಕ್ಕೆ ಬಿಡುವುದೂ ಇಲ್ಲ ಎಂಬಂತೆ ನನ್ನನ್ನು ಹುರಿದುಂಬಿಸಿದ್ದಾರೆ. ಅವರು ನನ್ನಲ್ಲಿ ತುಂಬಿದ ಉತ್ಸಾಹದಿಂದ ನಾನು ವಿಭಿನ್ನವಾಗಿರುವುದಕ್ಕೇ ವಿಶಿಷ್ಟವಾಗಿದ್ದೇನೆ ಎಂಬ ಅರಿವನ್ನೂ ಗಳಿಸಿದ್ದೇನೆ’ ಎಂದು ಬಹಳ ಹೆಮ್ಮೆ ಬೆರೆತ ಖುಷಿಯನ್ನು ವ್ಯಕ್ತಪಡಿಸುತ್ತಾರೆ ಅದಿತಿ.

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್(ASD) ಎಂಬುದು ಒಂದು ನರ ಬೆಳವಣಿಗೆಯಲ್ಲಿ ಆಗುವ ತೊಂದರೆ. ಇದನ್ನು ಅನುಭವಿಸುವವರಿಗೆ ಸಾಮಾಜಿಕ ಸಂವಹನ ಅಷ್ಟು ಸುಲಭದ ಮಾತಾಗಿರುವುದಿಲ್ಲ. ಇದು ಒಟ್ಟಾರೆ ದೈನಂದಿನ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಅದಿತಿಯ ಆರಂಭಿಕ ಜೀವನ ಬಹುಬೇಗ ಮಾತುಗಳೇ ಇರದ ನಿಶ್ಯಬ್ದ ಪಥದಲ್ಲಿಯೇ ಸಾಗಿತು. ಆದರೆ, ಸೂಕ್ಷ್ಮಗ್ರಾಹಿ ಅದಿತಿ ಎಲ್ಲವನ್ನೂ ಗಮನಿಸುತ್ತಾ, ಆದರೆ, ಏನನ್ನೂ ಸರಿಯಾಗಿ ವ್ಯಕ್ತಪಡಿಸಲು ಆಗದೇ ಸಂಕಟಪಟ್ಟರು. ಈ ಸಂಕಟವನ್ನೆಲ್ಲ ಹೀರಿಕೊಂಡ ಅವರ ಆಂತರಿಕ ಲೋಕ ಸೃಜನಶೀಲ ಶಕ್ತಿಯ ಮೂಲವಾಯಿತು. ಇದೇ ಮುಂದೆ ಅವರ ಬದುಕನ್ನು ರೂಪಿಸುತ್ತಾ ಹೋಯಿತು.

‘ಶಾಲಾ ದಿನಗಳು ಹೇಗಿದ್ದವು?’ ಎಂಬುದಕ್ಕೆ ‘ಅಲ್ಲಿಯೂ ಸಂತೋಷ ಹಾಗೂ ಪೂರ್ವಗ್ರಹದಿಂದ ನೋಡುವ ಮನಸ್ಸುಗಳು ಇದ್ದವು’ ಎಂಬ ಮಿಶ್ರ ಭಾವವನ್ನು ವ್ಯಕ್ತಪಡಿಸುತ್ತಾರೆ. ಮೊದಲ ಬಾರಿಗೆ ಶಾಲೆಯ ವೇದಿಕೆಯಲ್ಲಿ ಪ್ರದರ್ಶನ ನೀಡಿದ ಕ್ಷಣ, ಶಾಲೆ ಕೈಗೊಂಡ ಪ್ರವಾಸದಲ್ಲಿ ಭಾಗಿಯಾಗಿದ್ದು ಇವೆಲ್ಲವೂ ನೆನಪಿನಲ್ಲಿ ಇಟ್ಟುಕೊಳ್ಳುವಂತಾದರೆ, ಅವರ ಕಲಿಕಾ ಸಾಮರ್ಥ್ಯವನ್ನು ಓರೆನೋಟದಿಂದ ನೋಡಿದ ದೃಷ್ಟಿಗಳನ್ನು ಅವರು ಇನ್ನು ಮರೆತಿಲ್ಲ.

‘ನಾನು ಬೇರೆಯವರ ನಿರೀಕ್ಷೆಗೆ ತಕ್ಕಂತೆ ನನ್ನ ಕಲಿಕಾ ಸಾಮರ್ಥ್ಯವನ್ನು ತೋರಿಸಲು ಅಶಕ್ತಳಾಗಿದ್ದೆ. ಆಗ ನನ್ನ ಓರಗೆಯವರು ಇವಳಿಗೆ ಇದು ಅರ್ಥವಾಗುವುದಿಲ್ಲವೆಂದೇ ಊಹಿಸುತ್ತಿದ್ದರು’ ಎಂಬುದನ್ನು ಹೇಳಲು ಅವರು ಮರೆಯಲಿಲ್ಲ.

ಮಹತ್ವದ ತಿರುವು

ಈಶಾನ್ಯ ಇಂಡಿಯಾ ಫೌಂಡೇಷನ್ ಒದಗಿಸಿದ ತಂತ್ರಜ್ಞಾನವು ಅದಿತಿ ಅವರ ಬದುಕಿನಲ್ಲಿ ಮಹತ್ವದ ತಿರುವನ್ನು ತಂದಿತು. ‘ಅವಾಜ್’ನಂಥ ಆಗ್ಗ್ಮೆಂಟೇಟಿವ್ ಮತ್ತು ಆಲ್ಟರ್ನೇಟಿವ್ ಕಮ್ಯುನಿಕೇಶನ್ (AAC) ಸಾಧನಗಳು ಅವರ ಸಂವಹನ ಕಲೆಯನ್ನು ಓರಗೆ ಹಚ್ಚಿದವು. ಟೈಪಿಂಗ್ ಕಲಿಯಲು ನೆರವಾಯಿತು. ಇದು ಜಗತ್ತಿನೊಂದಿಗೆ ಸಂಪರ್ಕವನ್ನು ಸಾಧಿಸುವ ದಾರಿಯನ್ನು ಸುಗಮವಾಗಿ ತೆರೆಯಿತು. ಅದಿತಿ ಅವರ ಮನಸ್ಸಿನೊಳಗಿದ್ದ ಒಂದೊಂದೇ ಪಾತ್ರಗಳು ಕಾಗದದ ಮೇಲೆ ಜೀವಂತಗೊಂಡವು.

ತನ್ನ ತಾಯಿ ಪ್ರತಿ ಕ್ಷಣವೂ ನೀಡಿದ ಬೆಂಬಲವೇ ಈ ಮಟ್ಟಕ್ಕೆ ತನ್ನನ್ನು ನಿಲ್ಲಿಸಿರುವುದಾಗಿ ಹೇಳಿಕೊಳ್ಳುವ ಅವರು, ತಮ್ಮ ಮೇಲೆ ಅಪಾರ ನಂಬಿಕೆ ಇಟ್ಟು, ತಮ್ಮ ಮಿತಿಗಳನ್ನು ಮೃದುವಾಗಿ ಅರ್ಥೈಸಿ, ಆ ಮಿತಿಗಳನ್ನು ಮೀರುವುದು ಹೇಗೆ ಎಂದು ಕಲಿಸಿಕೊಟ್ಟ ಶಿಕ್ಷಕರಾದ ಶಾಹೇಲಿ ಮುಖರ್ಜಿ ಮತ್ತು ವರ್ಷಾ ರಾಮದಾಸ್ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಅದಿತಿ ಅವರ ಕಾರ್ಯಚಟುವಟಿಕೆಗಳು ಅವರ ಮಿತಿಯನ್ನು ಮೀರಲು ದೊಡ್ಡ ಬುನಾದಿ ಹಾಕಿರುವುದಲ್ಲದೇ ಆಟಿಸಂನಿಂದ ಬಳಲುತ್ತಿರುವ ಇತರರನ್ನು ಚಟುವಟಿಕೆಯತ್ತ ತರಲು ಪ್ರೇರೇಪಿಸಿವೆ. ‘ಅವಾಜ್’, ‘ಸೋಲ್ಸ್ ಆರ್ಕ್’ ಮತ್ತು ‘ಇಂಡಿಯಾ ಆಟಿಸಂ’ ಸೆಂಟರ್ಗಳ ಬ್ಲಾಗ್ಗಳಿಗೆ ನಿಯಮಿತವಾಗಿ ಬರೆಯುತ್ತಾರೆ. ಆಟಿಸಂ ಕುರಿತು ವೆಬಿನಾರ್ಗಳನ್ನು ನಡೆಸುತ್ತಾರೆ. ಇದಲ್ಲದೇ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಡೈವರ್ಸಿಟಿಯ ಗ್ಲೋಬಲ್ ಸ್ಟೀರಿಂಗ್ ಸಮಿತಿಯ ಸದಸ್ಯೆಯೂ ಆಗಿದ್ದಾರೆ.

ಅದಿತಿಯನ್ನು ಹಲವು ವರ್ಷಗಳಿಂದ ಬಲ್ಲ ಆಲ್ ಇನ್ಕ್ಲೂಸಿವ್ ಫೌಂಡೇಷನ್ ಸಂಸ್ಥೆಯ ಸಹ–ಸ್ಥಾಪಕಿ ಚಿತ್ರಾ ಪಾಲ್ ಹೇಳುವಂತೆ, ‘ಆಟಿಸಂ ಕುರಿತ ಪೂರ್ವನಿರ್ಧರಿತ ಯೋಚನೆಗಳ ಬಗ್ಗೆ ಮರುಚಿಂತಿಸುವಂತೆ ಮಾಡುವಲ್ಲಿ ಅದಿತಿ ಅವರ ಕೊಡುಗೆ ಇದೆ. ಆಟಿಸಂ ಅನ್ನು ಈವರೆಗೆ ಸಂಪೂರ್ಣವಾಗಿ ಅರ್ಥೈಸಲು ಆಗಿಲ್ಲ. ಮಾತನಾಡದೇ ಇರುವುದೇ ಬೌದ್ಧಿಕ ಅಸಮರ್ಥತೆ ಎಂಬ ಕಲ್ಪನೆಗೆ ಅದಿತಿಯಂಥ ಯುವ ಮನಸ್ಸು ಪೆಟ್ಟು ಕೊಟ್ಟಿದೆ’.

ಚಿತ್ರಾ ಪಾಲ್ ಅವರು ಸಂಪಾದಿಸಿರುವ ‘ಟಾಕಿಂಗ್ ಫಿಂಗರ್ಸ್’ ಪುಸ್ತಕದಲ್ಲಿ ಅದಿತಿ ಅವರ ಬರಹವೂ ಇದೆ. ಈ ಪುಸ್ತಕದಲ್ಲಿ ಮಾತನಾಡದ ಹದಿನಾರು ಲೇಖಕರು, 20 ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಜಗತ್ತನ್ನು ತಾವು ಕಂಡ ಬಗೆಯನ್ನು ಚಿತ್ರಿಸಿರುವ ಸಂಕಲನವಿದು. ಈ ಎಲ್ಲದರ ನಡುವೆಯೂ ಅದಿತಿ ತಮ್ಮ ಮುಂದಿನ ಕಾದಂಬರಿಗಳಾದ ‘ಫೀಟ್ ಆನ್ ಗ್ರೌಂಡ್’, ‘ಹೆಡ್ ಇನ್ ದಿ ಏರ್’ ಹೊರತರುತ್ತಿದ್ದಾರೆ. ಈಗಾಗಲೇ ಇವರೆಡೂ ಕಾದಂಬರಿಗಳು ಪ್ರಕಾಶಕರ ಸುಪರ್ದಿಯಲ್ಲಿವೆ.

ದಿನಚರಿ ಹೀಗಿರುತ್ತದೆ

ಅದಿತಿಯ ದಿನಚರಿ ಬೆಳಿಗ್ಗೆ ನಡಿಗೆಯಿಂದ ಆರಂಭಗೊಳ್ಳುತ್ತದೆ. ನಂತರ ಬರವಣಿಗೆ ಮತ್ತು ಸಂಸ್ಥೆಗಳ ಚಟುವಟಿಕೆಗಳು. ಮಧ್ಯಾಹ್ನ ಮೇಲೆ ಶಿಕ್ಷಕರೊಂದಿಗೆ ಅಧ್ಯಯನ. ಸಾಮಾಜಿಕ ಆತಂಕವನ್ನು ನಿಭಾಯಿಸಲು ವಾರಕ್ಕೆ ಒಮ್ಮೆ ಸಂವೇದಿ ವರ್ತನಾ ಚಿಕಿತ್ಸೆಗೆ (CBT) ಹಾಜರಾಗುತ್ತಾರೆ. AAC ತಂತ್ರಜ್ಞಾನ ಬಳಸಿ ಅವರು ಆನ್ಲೈನ್ನಲ್ಲಿ ಆರ್ಡರ್ ಮಾಡುವಷ್ಟು ನಿಪುಣರಾಗಿದ್ದಾರೆ.

‘ಶ್ರದ್ಧೆ ವಹಿಸಿ ಮಿತಿಗಳನ್ನು ಮೀರಲು ಪ್ರಯತ್ನಿಸಿದರೆ, ಮುಂದೆ ಫಲ ನೀಡುತ್ತದೆ. ಸ್ವಾವಲಂಬನೆಯೆಂಬುದು ಹಂತ ಹಂತವಾಗಿ ನಿರ್ಮಾಣವಾಗುತ್ತದೆ’ ಎಂದು ಹೊಸ ಹೊಳಹನ್ನು ತೆರೆದಿಡುತ್ತಾರೆ ಅದಿತಿ.

ರೋಗದಿಂದ ವ್ಯಕ್ತಿಯ ಸಾಮರ್ಥ್ಯವನ್ನು ನಿರ್ಣಯಿಸಬೇಡಿ. ಮಿತಿಗಳಿರುವ ಮನುಷ್ಯನೆಡೆಗೆ ಸದಾ ತೆರೆದ ಮನಸ್ಸು ಇಟ್ಟುಕೊಳ್ಳಿ. ಇಂಥ ವ್ಯಕ್ತಿಗಳಿಗಿರುವ ಸವಾಲುಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ಎದುರಿಸಲು ಸೂಕ್ತ ವಾತಾವರಣವನ್ನು ರೂಪಿಸಲು ಸಹಾಯ ಮಾಡಿ. ಅಂಗವೈಕಲ್ಯವು ಸಮೃದ್ಧ ಜೀವನಕ್ಕೆ ಎಂದೂ ತೊಂದರೆಯಾಗದು ಎಂಬ ಭರವಸೆ ಪ್ರತಿ ಆಟಿಸ್ಟಿಕ್ ವ್ಯಕ್ತಿಗಳಲ್ಲಿ ತುಂಬಿದರೆ ಅದಕ್ಕಿಂತ ದೊಡ್ಡದು ಏನೂ ಇಲ್ಲ. ಯಾವುದೇ ತೀರ್ಪಿನ ಭಯವಿಲ್ಲದೇ, ತಮ್ಮ ಮಿತಿಗಳನ್ನು ಮೀರಲು ದೊರೆಯುವ ಸಹಕಾರವೇ ಸ್ನೇಹ ಎಂದು ಹೇಳುವುದನ್ನು ಅದಿತಿ ಮರೆಯುವುದಿಲ್ಲ.

ಟಾಕಿಂಗ್ ಫಿಂಗರ್ಸ್ನ ಸಹಲೇಖಕ ತರುಣ್, ಆಟಿಸ್ಟಿಕ್ ಅನಿಕೇತ್ ಹಾಗೂ ಅದಿತಿ ಸೇರಿ ‘ಸೈಲೆಂಟ್ ಎಕ್ಸ್ಪ್ರೆಶನ್ಸ್’ ಎಂಬ ವಾಟ್ಸ್ ಆ್ಯಪ್ ಗುಂಪನ್ನು ರಚಿಸಿ, ಅಲ್ಲಿ ಆಟಿಸ್ಟಿಕ್ ಇರುವವರಿಗೆ ಸಂವಹನದ ಕಲೆಯನ್ನು ಸರಾಗವಾಗಿಸಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಾರೆ.

ಅನುವಾದ: ರೂಪಾ ಕೆ.ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.