ಚುನಾವಣಾ ಆಯೋಗದಲ್ಲಿ ಯಾವುದೇ ಕಲಹ ಉಂಟಾಗಿಲ್ಲ: ಸುನೀಲ್‌ ಆರೋರಾ ಸ್ಪಷ್ಟನೆ

ಬುಧವಾರ, ಜೂನ್ 19, 2019
27 °C
ಚುನಾವಣಾ ನೀತಿ ಸಂಹಿತೆ ನಿರ್ವಹಣೆ ವಿಚಾರ

ಚುನಾವಣಾ ಆಯೋಗದಲ್ಲಿ ಯಾವುದೇ ಕಲಹ ಉಂಟಾಗಿಲ್ಲ: ಸುನೀಲ್‌ ಆರೋರಾ ಸ್ಪಷ್ಟನೆ

Published:
Updated:

ನವದೆಹಲಿ: ‘ಚುನಾವಣಾ ನೀತಿ ಸಂಹಿತೆ ನಿರ್ವಹಣೆ ವಿಚಾರವಾಗಿ ಆಯೋಗದ ಸದಸ್ಯರಲ್ಲಿ ಯಾವುದೇ ರೀತಿಯ ಕಲಹ ಉಂಟಾಗಿಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಆರೋರಾ ಸ್ಪಷ್ಟಪಡಿಸಿದ್ದಾರೆ. 

‘ಚುನಾವಣಾ ಆಯೋಗದಲ್ಲಿನ ಮೂವರು ಸದಸ್ಯರು ಒಂದೇ ರೀತಿ ಯೋಚಿಸಲು ಸಾಧ್ಯವಿಲ್ಲ. ಒಬ್ಬೊಬ್ಬರದ್ದು ಒಂದೊಂದು ದೃಷ್ಟಿಕೋನ ಇರುತ್ತದೆ. ಈ ಹಿಂದೆಯೂ ಬಹಳಷ್ಟು ಸರಿ ಭಿನ್ನ ನಿಲುವುಗಳು ಬಂದಿವೆ ಮತ್ತು ಅದು ಬರಲೇಬೇಕು’ ಎಂದು ಹೇಳಿದರು.

‘ಸದಸ್ಯರಲ್ಲಿನ ಈ ರೀತಿಯ ಭಿನ್ನಾಭಿಪ್ರಾಯಗಳು ಆಯೋಗದ ಪರಿಮಿತಿಯಲ್ಲಿಯೇ ಇರುತಿದ್ದವು. ಅಗತ್ಯವಿದ್ದಾಗ ಸಾರ್ವಜನಿಕ ಚರ್ಚೆಗಳಲ್ಲಿ ಪಾಲ್ಗೊಳ್ಳುವುದರಿಂದ ನಾನು ಎಂದಿಗೂ ತಪ್ಪಿಸಿಕೊಂಡಿಲ್ಲ. ಆದರೆ, ಎಲ್ಲದಕ್ಕೂ ಸಮಯ ಬರಬೇಕು’ ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಒಂದು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಕ್ಲೀನ್‌ಚಿಟ್‌ ನೀಡುವುದನ್ನು ಚುನಾವಣಾ ಆಯುಕ್ತ ಅಶೋಕ್ ಲವಾಸ ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರದಿದ್ದರು. ಆದರೆ. ಅದನ್ನು ಪರಿಗಣಿಸಿರಲಿಲ್ಲ.

ಇದಾದ ನಂತರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ವಿಷಯ ನಿರ್ಧರಿಸುವುದಕ್ಕೆ ಹಮ್ಮಿಕೊಳ್ಳುವ ಆಯೋಗದ  ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅಶೋಕ್ ಲವಾಸ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದರು. ಇದರಿಂದಾಗಿ ನೀತಿ ಸಂಹಿತೆ ಉಲ್ಲಂಘನೆ ನಿರ್ವಹಣೆಯ ವಿಷಯವಾಗಿ ಚುನಾವಣಾ ಆಯೋಗದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕವಾಗಿತ್ತು.

ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಆರೋರಾ ಮತ್ತು ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಆಯೋಗದಲ್ಲಿರುವ ಇತರ ಇಬ್ಬರು ಸದಸ್ಯರಾಗಿದ್ದಾರೆ. ಮೋದಿ, ಶಾ ವಿರುದ್ಧದ ಪ್ರಕರಣಗಳಲ್ಲಿ 2–1 ಬಹುಮತದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !