ಸರಕು ಸಾಗಣೆ ವಾಹನಕ್ಕೆ ₹ 46 ಲಕ್ಷ ದಂಡ..!

7

ಸರಕು ಸಾಗಣೆ ವಾಹನಕ್ಕೆ ₹ 46 ಲಕ್ಷ ದಂಡ..!

Published:
Updated:

ವಿಜಯಪುರ: ಬೆಂಗಳೂರಿನಿಂದ ನವದೆಹಲಿಗೆ ಕ್ರಮಬದ್ಧವಾದ ದಾಖಲೆಗಳಿಲ್ಲದೆ 10.88 ಟನ್‌ ಸರಕು ಸಾಗಿಸುತ್ತಿದ್ದ ‘ಕರ್ನಾಟಕ ರಾಜಧಾನಿ ಕ್ಯಾರಿಯರ್‌’ ಸರಕು ಸಾಗಣೆ ಸಂಸ್ಥೆಯ ಟ್ರಕ್‌ವೊಂದಕ್ಕೆ, ವಿಜಯಪುರ ಜಾರಿ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿಗಳು ₹ 46,08,440 ದಂಡ ವಿಧಿಸಿದ್ದಾರೆ.

ಸರಕು ಸಾಗಣೆ ಸಂಸ್ಥೆ, ಅಧಿಕಾರಿಗಳು ವಿಧಿಸಿದ ದಂಡದ ಮೊತ್ತವನ್ನು ಶುಕ್ರವಾರ ಆನ್‌ಲೈನ್‌ ಮೂಲಕ ಪಾವತಿಸಿದೆ. ಜಿಎಸ್‌ಟಿ ಜಾರಿಗೊಂಡ ಬಳಿಕ ಒಂದೇ ವಾಹನಕ್ಕೆ ಬೃಹತ್‌ ಮೊತ್ತದ ದಂಡ ವಿಧಿಸಿರುವುದು ಇದೇ ಮೊದಲು ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

‘ಸೆ 25ರಂದು ಟ್ರಕ್‌ವೊಂದರಲ್ಲಿ ‘ಕಾಪರ್‌ ಸ್ಕ್ರ್ಯಾಪ್‌/ಅಲ್ಯೂಮಿನಿಯಂ/ಬ್ರಾಸ್‌, 35 ಟನ್ ಪಾನ್‌ ಮಸಾಲ ಹಾಗೂ 2.4 ಇ–ವೇಸ್ಟ್’ ಸರಕು ಸಾಗಣೆ ಮಾಡುತ್ತಿದ್ದ ‘ಕರ್ನಾಟಕ ರಾಜಧಾನಿ ಕ್ಯಾರಿಯರ್‌’ ಸರಕು ಸಾಗಣೆ ಸಂಸ್ಥೆಯ ಟ್ರಕ್‌ವೊಂದನ್ನು ವಿಜಯಪುರ ಹೊರ ವಲಯದ ಟೋಲ್‌ನಾಕಾ ಬಳಿ ತಡೆದು ಪರಿಶೀಲನೆಗೊಳಪಡಿಸಲಾಯಿತು.

ದಾಖಲೆಗಳಲ್ಲಿ ಅನುಮಾನ ಕಂಡು ಬಂದಿದ್ದರಿಂದ ಸರಕು ಖರೀದಿ ಮತ್ತು ವಿಕ್ರಿಯ ವಿವರಗಳನ್ನು ಬೆಂಗಳೂರು ಜಾರಿ ವಿಭಾಗದ ಅಧಿಕಾರಿಗಳ ಸಹಕಾರದೊಂದಿಗೆ ಕೂಲಂಕಷ ತಪಾಸಣೆ, ತನಿಖೆಗೊಳಪಡಿಸಿದಾಗ, ಮಾರಾಟಗಾರ ಹಾಗೂ ಖರೀದಿಗಾರರ ಹೆಸರು, ವಿಳಾಸ ಖೊಟ್ಟಿಯಿರುವುದು ಖಚಿತಪಟ್ಟಿತು.

ಇದಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಕಾಯ್ದೆ–2017ರ ಪ್ರಕಾರ ನೋಟಿಸ್‌ ಜಾರಿ ಮಾಡಿ, ತೆರಿಗೆ, ಸೆಸ್‌, ದಂಡವನ್ನು ‘ಕರ್ನಾಟಕ ರಾಜಧಾನಿ ಕ್ಯಾರಿಯರ್‌’ ಸರಕು ಸಾಗಣೆ ಸಂಸ್ಥೆಯಿಂದ ಸಂಗ್ರಹಿಸಲಾಗಿದೆ’ ಎಂದು ವಾಣಿಜ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !