ವಿಜಯಪುರ ಡೆಕ್ಕನ್‌ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌: ₹6 ಕೋಟಿ ಅವ್ಯವಹಾರ; ದೂರು

7

ವಿಜಯಪುರ ಡೆಕ್ಕನ್‌ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌: ₹6 ಕೋಟಿ ಅವ್ಯವಹಾರ; ದೂರು

Published:
Updated:

ವಿಜಯಪುರ: ವಿಜಯಪುರದ ಡೆಕ್ಕನ್‌ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ₹ 6 ಕೋಟಿ ಅವ್ಯವಹಾರ ನಡೆದಿದೆ ಎಂದು ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಹಕಾರ ಬ್ಯಾಂಕ್‌ನ ಈ ಹಿಂದಿನ ವ್ಯವಸ್ಥಾಪಕ ಮುಷ್ತಾಕ್ ಬೆಕನಾಳಕರ ಗ್ರಾಹಕರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಆಡಿಟ್‌ ರಿಪೋರ್ಟ್‌ನಲ್ಲಿ ವರದಿಯಾಗಿತ್ತು. ತಕ್ಷಣವೇ ಬ್ಯಾಂಕ್‌ನ ಆಡಳಿತ ಮಂಡಳಿ ಮುಷ್ತಾಕ್‌ನನ್ನು ಕೆಲಸದಿಂದ ವಜಾಗೊಳಿಸಿತ್ತು.

ಹೊಸದಾಗಿ ಅಧಿಕಾರ ವಹಿಸಿಕೊಂಡ ವ್ಯವಸ್ಥಾಪಕ ಡಿಗ್ಗಿ, ಮುಷ್ತಾಕ್ ವಿರುದ್ಧ ಇಲ್ಲಿನ ಎಪಿಎಂಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.

ಮುಷ್ತಾಕ್‌ ಗ್ರಾಹಕರು ಬ್ಯಾಂಕ್‌ನಲ್ಲಿಟ್ಟ ಹಣವನ್ನು ರಿಯಲ್ ಎಸ್ಟೇಟ್‌ ದಂಧೆ, ಬಡ್ಡಿ ದಂಧೆ ಸೇರಿದಂತೆ ಇನ್ನಿತರೆಡೆ ವಿನಿಯೋಗಿಸಿ, ದುರ್ಬಳಕೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಇದರಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯವೂ ಅಡಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !