ಶುಕ್ರವಾರ, ಏಪ್ರಿಲ್ 23, 2021
28 °C

ಹೊಸ ಕೋರ್ಸ್‌ಗಳ ಮಾಹಿತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಾಂಪ್ರದಾಯಿಕ ಕೋರ್ಸ್‌ಗಳ ಬೆನ್ನು ಹತ್ತಿ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್‌ಗಳ ಮಾಹಿತಿ ಅಗತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ. ಛಾಯಾ ಹೇಳಿದರು.ಭಾನುವಾರ ನಗರದ ರಿಂಗ್ ರಸ್ತೆಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಸಭಾಂಗಣದಲ್ಲಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈರ್ ಆ್ಯಂಡ್ ಸೇಪ್ಟಿ ಎಂಜಿನಿಯರಿಂಗ್ (ಎಂಐಎಫ್‌ಎಸ್‌ಇ) ಕಾಲೇಜನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಗುಣಮಟ್ಟದ ಶಿಕ್ಷಣ ಹಾಗೂ ಹೊಸ ಕೋರ್ಸ್‌ಗಳ ಕೊರತೆ ಇರುವ ಈ ಭಾಗದಲ್ಲಿ ಫೈರ್ ಆ್ಯಂಡ್ ಸೇಪ್ಟಿ ಕೋರ್ಸ್ ಆರಂಭ ವಿಶೇಷತೆ ಮೂಡಿಸಿದೆ. ಇದರಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಅಗತ್ಯ ನಮಗಿದೆ. ಆದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಹಾಗೂ ಜಾಗೃತಿ ಅಗತ್ಯ. ಮಂಗಳೂರು ವಿಶ್ವವಿದ್ಯಾಲಯವು ಫೈರ್ ಆ್ಯಂಡ್ ಸೇಪ್ಟಿ ಕೋರ್ಸ್ ಅನ್ನು ಈ ಭಾಗಕ್ಕೆ ಪರಿಚಯಿಸಿದ್ದು ಸ್ವಾಗತಾರ್ಹ. ರೂಢಿಯಲ್ಲಿರುವ ಕೋರ್ಸ್‌ಗಳಲ್ಲಿಯೇ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ಈ ಕೋರ್ಸ್‌ನ ಪರಿಚಯ ಮಾದರಿಯಾಗಲಿದೆ~ ಎಂದು ನುಡಿದರು.ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಮಾತನಾಡಿ, `ಎಲ್ಲ ಕ್ಷೇತ್ರಗಳಲ್ಲಿಯೂ ಅಸುರಕ್ಷತೆಯ ಕೊರತೆ ಎದ್ದು ಕಾಣುತ್ತಿರುವ ಇಂದಿನ ದಿನಗಳಲ್ಲಿ ಈ ಕೋರ್ಸ್‌ನ ಆರಂಭ ಈ ಭಾಗಕ್ಕೆ ಸಹಾಯವಾಗಲಿದೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮುಂದೆ ಸಾಕಷ್ಟು ಉದ್ಯೋಗಾವಕಾಶಗಳು ಇವೆ~ ಎಂದರು.ಇನ್ನೊಬ್ಬ ಅತಿಥಿ ಪಿ.ಜಿ. ರಾಠೋಡ್ ಮಾತನಾಡಿ, `ಇಂದು ಲಕ್ಷಾಂತರ ಕಾರ್ಮಿಕರು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ. ಕೈಗಾರಿಕೆಗಳು ಬೆಳೆದಂತೆ ಅಪಾಯವು ಜಾಸ್ತಿ. ಆದ್ದರಿಂದ ಕಾರ್ಮಿಕರ ಹಾಗೂ ಕೈಗಾರಿಕೆಗಳ ಸುರಕ್ಷತೆಗೆ ಈ ಕೋರ್ಸ್‌ನ ಅಗತ್ಯ ಬಹಳ ಇದೆ~ ಎಂದರು.ಮಾತಾಜಿ ಬಸಮ್ಮಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ.ಜಿ. ರಾಜು, ಗುಲ್ಬರ್ಗದ ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ, ಕರ್ನಾಟಕ ಕಾರ್ಖಾನೆ ಮತ್ತು ಉದ್ದಿಮೆಗಳ ಸಹಾಯಕ ನಿರ್ದೇಶಕ ವೆಂಕಟೇಶ ರಾಠೊಡ್, ರಾಜಶ್ರೀ ಸಿಮೆಂಟ್ ಕಂಪೆನಿಯ ಸೇಫ್ಟಿ ಆಫೀಸರ್ ಎಂ.ಐ. ಖಲೀಲ್, ಎಂಐಎಫ್‌ಎಸ್‌ಇ ಸಂಸ್ಥೆಯ ಅಧ್ಯಕ್ಷ ಆಂಡೋ ಪೌಲ್, ಶಾಖಾ ಮುಖ್ಯಸ್ಥೆ ಸ್ಮಿತಾ ಪಾಟೀಲ್ ಮತ್ತು ಶಿಕ್ಷಕ ಸಂತೋಷಕುಮಾರ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.