ಬೆಂಗಳೂರು: ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತ ಇಲ್ಲವೇ ನಕ್ಷೆಗೆ ವಿರುದ್ಧವಾಗಿ ನಿರ್ಮಿಸಿದ ಕಟ್ಟಡ, ಹೆಚ್ಚುವರಿಯಾಗಿ ನಿರ್ಮಿಸಿದ ಅಂತಸ್ತುಗಳನ್ನು ತೆರವುಗೊಳಿಸುವ ಕಾರ್ಯ ಶನಿವಾರವೂ ಮುಂದುವರಿಯಿತು.

ಹೆಬ್ಬಾಳ ವಿಭಾಗದ ಜೆ.ಸಿ. ನಗರ ಉಪನಗರ ವಿಭಾಗದಲ್ಲಿ ದೊಡ್ಡಮ್ಮ ಬಡಾವಣೆಯ ಮನೋರಾಯನಪಾಳ್ಯದಲ್ಲಿ ನಿರ್ಮಿಸುತ್ತಿದ್ದ ಕಟ್ಟಡ, ವಿದ್ಯಾರಣ್ಯಪುರ ವಿಭಾಗದ ವ್ಯಾಪ್ತಿಯ ಕೊಡಿಗೇಹಳ್ಳಿ ಉಪ ವಿಭಾಗದ ಕಾಟೇರಮ್ಮ ದೇವಸ್ಥಾನ ಹತ್ತಿರದ ನಿವೇಶನದಲ್ಲಿದ್ದ ಕಟ್ಟಡ, ರಾಜೀವ್ ಗಾಂಧಿನಗರದ ಕೊಡಿಗೇಹಳ್ಳಿಯ ನಿವೇಶನದ ಕಟ್ಟಡ, ಕುವೆಂಪುನಗರ ಉಪ ವಿಭಾಗದ ಡಿಫೆನ್ಸ್ ಬಡಾವಣೆಯ ನಿವೇಶನದ ಕಟ್ಟಡಗಳ ಹೆಚ್ಚುವರಿ ಭಾಗ ತೆರವುಗೊಳಿಸಲಾಯಿತು.

ಯಲಹಂಕ ವಿಭಾಗದ ಶಿವನಹಳ್ಳಿ ಗ್ರಾಮದ ಕಟ್ಟಡ, ಎ.ಎಂ.ಎಸ್ ಬಡಾವಣೆಯ ಎರಡು ಕಟ್ಟಡ, ಬ್ಯಾಟರಾಯನಪುರ ವಿಭಾಗದ ಕೋಗಿಲು ಉಪವಿಭಾಗದ ಕಟ್ಟಿಗೇಹಳ್ಳಿಯ ರೇವಾ ಕಾಲೇಜಿನ ಎದುರಿನ ಕಟ್ಟಡ, ಜಕ್ಕೂರು ಉಪ-ವಿಭಾಗದ ಸಹಕಾರನಗರದ ಕಟ್ಟಡಗಳ ಹೆಚ್ಚುವರಿ ಭಾಗಗಳನ್ನು ತೆರವು ಮಾಡಲಾಯಿತು.

ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ನಿರ್ದೇಶನದಂತೆ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ತೆರವಿಗೆ ತಗಲುವ ವೆಚ್ಚವನ್ನು ದಂಡದ ಸಮೇತ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.