ಮಂಗಳವಾರ, ಏಪ್ರಿಲ್ 13, 2021
32 °C

ವಯೋವೃದ್ಧೆಗೆ ಒಲಿದ ಅಧ್ಯಕ್ಷೆ ಪಟ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕಿನ ಮೋಘಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಇಬ್ಬರು ಮಹಿಳೆಯರ ಅವಿರೋಧ ಆಯ್ಕೆ ನಡೆದಿದೆ.ಅಧ್ಯಕ್ಷರಾಗಿ ಸುಮಾರು 65 ವರ್ಷದ ಪಾರಮ್ಮ ಭೀಮಣ್ಣ ಮಾಳಗೆ ಮತ್ತು ಉಪಾಧ್ಯಕ್ಷರಾಗಿ ರಕಲಿಬಾಯಿ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿತಾಲ್ಲೂಕು ಪಂಚಾಯಿತಿ  ಕಾರ್ಯ ನಿರ್ವಹಣಾಧಿಕಾರಿ ವೈ.ಎನ್.ಚಂದ್ರಮೌಳಿ ಘೋಷಿಸಿದರು.ಹಿಂದುಳಿದ ವರ್ಗ(ಅ)ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೋಘಾ ಗ್ರಾಮದ ಪಾರಮ್ಮ ಭೀಮಣ್ಣ ಮಾಳಗೆ, ಮೈನೋದ್ದಿನ್ ಮಹ್ಮದ್ ಪಟೇಲ್ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಕ್ರು ನಾಯಕ್ ತಾಂಡಾದ ರಕಲಿಬಾಯಿ ತುಕಾರಾಮ ಅವರು ನಾಮಪತ್ರ ಸಲ್ಲಿಸಿದ್ದರು.ಆದರೆ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರಗಳ ಪೈಕಿ ಮೈನೋದ್ದಿನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಅವಿರೋಧ ಆಯ್ಕೆಗೆ ದಾರಿ ಸುಗಮವಾಯಿತು.ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಸನ್ಮಾನಿಸಿ ಅಭಿನಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ, ಕಾರ್ಯದರ್ಶಿ ವಿಜಯಕುಮಾರ ದಸ್ತಾಪೂರ ಉಪಸ್ಥಿತರಿದ್ದರು.ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ ಇನಾಂದಾರ್ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಕಂಟೆಪ್ಪ ಡೋಣಿ ಮತ್ತು ಡಿ.ಬಿ ಕಟ್ಟೀಮನಿ ಸೂಕ್ತ ಪೊಲೀಸ್ ಬಂದೋಬಸ್ತ್‌ನಿಂದಾಗಿ ಚುನಾವಣೆ ಶಾಂತಿಯುತವಾಗಿ ನಡೆಯಿತು.ವಿಜಯೋತ್ಸವ: ಚುನಾವಣೆಯ ನಂತರ ತಾ.ಪಂ. ಅಧ್ಯಕ್ಷ ರಾಮರಾವ್ ಪಾಟೀಲ್ ಹಾಗೂ ಚನ್ನಪ್ಪ ಪಾಟೀಲ್, ಚನ್ನಪ್ಪ ಪಾರೇಶ ಮತ್ತಿತರರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ವಿಜಯೋತ್ಸವ ಆಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.