ಐಟಿಎಸ್ ಅಧಿಕಾರಿಗಳಿಂದ ಬಿಎಸ್‌ಎನ್‌ಎಲ್‌ಗೆ ನಷ್ಟ

7

ಐಟಿಎಸ್ ಅಧಿಕಾರಿಗಳಿಂದ ಬಿಎಸ್‌ಎನ್‌ಎಲ್‌ಗೆ ನಷ್ಟ

Published:
Updated:

ಗುಲ್ಬರ್ಗ: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್)ದಲ್ಲಿ ನಿಯೋಜನೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ `ಭಾರತ ದೂರಸಂಪರ್ಕ ಸೇವೆ(ಐಟಿಎಸ್)~ಯ ಅಧಿಕಾರಿಗಳಿಂದಾಗಿಯೆ ಕಂಪೆನಿ ನಷ್ಟದಲ್ಲಿ ಮುಳುಗಿದ್ದು, ಕೂಡಲೇ ಈ ಅಧಿಕಾರಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ  ಬಿಎಸ್‌ಎನ್‌ಎಲ್ ಕಾರ್ಮಿಕ ಸಂಘಟನೆ ಹಾಗೂ ಒಕ್ಕೂಟಗಳ ವೇದಿಕೆ ಸದಸ್ಯರು ಗುಲ್ಬರ್ಗದ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.ಸರ್ಕಾರದ ಆದೇಶದಂತೆ ಅಕ್ಟೋಬರ್ 1, 2000ರಂದು ದೂರ ಸಂಪರ್ಕ ಇಲಾಖೆ (ಡಿಒಟಿ)ಯು `ಎ~ ದರ್ಜೆಯ ಅಧಿಕಾರಿಗಳನ್ನು ಹೊರತುಪಡಿಸಿ 3.5 ಲಕ್ಷ ಉದ್ಯೋಗಿಗಳನ್ನು ಬಿಎಸ್‌ಎನ್‌ಎಲ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಬಿಎಸ್‌ಎನ್‌ಎಲ್ ಸೇರ್ಪಡೆಗೆ ಇಲ್ಲಿಯವರೆಗೂ ನಾಲ್ಕು ಅವಕಾಶ ನೀಡಿದ್ದರೂ ಈ ಕಾರ್ಯ ನೆರವೇರ‌್ತಿಲ್ಲ. ನಿಯೋಜಿತ ಅಧಿಕಾರಿಗಳ ಬೇಜಬ್ದಾರಿಯಿಂದಾಗಿ ಬಿಎಸ್‌ಎನ್‌ಎಲ್ ಸಂಪೂರ್ಣ ನಿಶ್ಚಲಗೊಂಡಿದೆ ಎಂದು ಸರ್ಕಾರಕ್ಕೆ ಕಳುಹಿಸಿದ ಮನವಿಯಲ್ಲಿ ವಿವರಿಸಲಾಗಿದೆ.ಬಿಎಸ್‌ಎನ್‌ಎಲ್‌ನಿಂದ ಐಟಿಎಸ್ ಅಧಿಕಾರಿಗಳನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದರೆ ಮೊದಲಿದ್ದಂತೆಯೆ ಎಲ್ಲ ನೌಕರರನ್ನು ಐಟಿಎಸ್‌ಗೆ ಮರುಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.ಒಂದು ವೇಳೆ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಇದೇ 26ರಂದು ಪ್ರತಿಯೊಂದು ಜಿಲ್ಲಾ ಹಾಗೂ ವೃತ್ತ ಕಚೇರಿ ಕೇಂದ್ರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು.

29ರಿಂದ ಸರ್ದಾರ್ ವಲ್ಲಭಭಾಯಿ ವೃತ್ತದ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಎಲ್.ಆರ್. ಭೋಸ್ಲೆ ಮತ್ತಿತರರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry