ಮಂಗಳವಾರ, ಏಪ್ರಿಲ್ 13, 2021
32 °C

ಕಲೆ ಕೈ ಹಿಡಿದು ಕಲಿಸುವಂಥದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕಲೆಯನ್ನು ಯಾರೂ ಕೈ ಹಿಡಿದು ಕಲಿಸಲು ಬರುವುದಿಲ್ಲ. ಶಿಕ್ಷಕರಾದವರು ಕೇವಲ ಆ ದಿಶೆಯಲ್ಲಿ ದಾರಿ ಮಾತ್ರ ತೋರಬಲ್ಲರು ಎಂದು ನವದೆಹಲಿಯ ಕಾಲೇಜ್ ಆಫ್‌ಆರ್ಟ್‌ನ ಪ್ರಾಚಾರ್ಯ ಪ್ರೊ. ಎಸ್.ಎನ್. ಲೆಹರಿ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಗರದ ದಿ ಐಡಿಯಲ್ ಫೈನ್ ಆರ್ಟ್ ಸೂಸೈಟಿಯಲ್ಲಿ ಮಂಗಳವಾರದಿಂದ ಆರಂಭವಾದ ಐದು ದಿನದ `ಆರ್ಟಿಸ್ಟ್-ಇನ್-ರೆಸಿಡೆನ್ಸಿ~ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಇಂದಿನ ತಂತ್ರಜ್ಞಾನಯುಗದಲ್ಲಿ ಕಲೆಯನ್ನು ಸಹ ಕಂಪ್ಯೂಟರೀಕರಣಗೊಳಿಸಿರುವುದರಿಂದ ಕಲೆಯಲ್ಲಿ ಸೃಜನಶೀಲತೆ ಹುಡುಕುವುದು ಕಷ್ಟವಾಗಿದೆ. ಚಿತ್ರಕಲೆಯಲ್ಲಿ ಪರಿಣತರಾದವರು ಎನಿಮೇಶನ್, ಅನ್ವಯಿಕ ಚಿತ್ರಕಲೆಯಲ್ಲಿ ಪರಿಣತರಾದವರು ಪೇಂಟಿಂಗ್ ಕೆಲಸದಲ್ಲಿ ತೊಡಗಿರುವುದರಿಂದ ಚಿತ್ರಕಲೆಯಲ್ಲಿ ಗುಣಮಟ್ಟ ಹಾಗೂ ಉತ್ಕೃಷ್ಟತೆ ಹುಡುಕುವುದು ತುಂಬಾ ಕಷ್ಟವಾಗುತ್ತಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳದಾವರು ಕಲೆಯ ಬಲೆ ನಿರ್ಮಾಣಕ್ಕೆ ಅಗತ್ಯ ಅಂಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಕಲಾ ಕ್ಷೇತ್ರದ ಅಭಿವೃದ್ಧಿ ಹಾಗೂ ಬೆಳವಣಿಗೆ ಬಗ್ಗೆ ವಿಸ್ತಾರವಾದ ಜ್ಞಾನವನ್ನು ಸಂಪಾದನೆ ಮಾಡುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕಲಾವಿದರಾದವರು ಚಿತ್ರಕಲೆಯ ತತ್ವ, ಸಿದ್ಧಾಂತ, ಸಂವಿಧಾನ, ಚೌಕಟ್ಟು ದಾಟದೆ ಕಿರಿದರಲ್ಲಿ ಹಿರಿದನ್ನು ತುಂಬುವ ಸಾಹಸ ಮಾಡಬೇಕು ಎಂದು ತಮ್ಮ ಅನುಭವ ಹಂಚಿಕೊಂಡರು.ದಿ ಐಡಿಯಲ್ ಫೈನ್ ಆರ್ಟ್ ಸೂಸೈಟಿ ಕಾರ್ಯದರ್ಶಿ ಪ್ರೊ. ವಿ.ಜಿ. ಅಂದಾನಿ ಸ್ವಾಗತಿಸಿದರು. ಚಂದ್ರಹಾಸ ಜಾಲಿಹಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.