`ಎಸ್‌ಬಿಎಂ ಸೇವೆ ಶ್ಲಾಘನೀಯ'

7

`ಎಸ್‌ಬಿಎಂ ಸೇವೆ ಶ್ಲಾಘನೀಯ'

Published:
Updated:
`ಎಸ್‌ಬಿಎಂ ಸೇವೆ ಶ್ಲಾಘನೀಯ'

ಅಫಜಲಪುರ: `ನೂರು ವರ್ಷಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಮಾಡುತ್ತಿರುವ ಸೇವೆ ಶ್ಲಾಘನೀಯವಾದುದು' ಎಂದು ಜಿಲ್ಲಾಧಿಕಾರಿ ಎನ್. ಎಸ್. ಪ್ರಸನ್‌ಕುಮಾರ ತಿಳಿಸಿದರು.ಅಫಜಲಪುರದ ಮಲ್ಲಿಕಾರ್ಜುನ ವೃತ್ತದ ಪುರೋಹಿತ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, `ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು ಸಕಾಲಕ್ಕೆ ಗ್ರಾಹಕರ ಸೇವೆ ಒದಗಿಸುತ್ತಿದೆ' ಎಂದರು.`ಬ್ಯಾಂಕು ರೈತರ ಬಗ್ಗೆ ಕಾಳಜಿ ಹೊಂದಬೇಕು. ಗೋದಾಮುಗಳಲ್ಲಿ ರೈತರು ಸಂಗ್ರಹಿಸಿ ಇಟ್ಟಿರುವ ಕೃಷಿ ಹುಟ್ಟುವಳಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ ಸಾಲ ನೀಡಬೇಕು. ಅಭಿವೃದ್ಧಿ ಹೊಂದುತ್ತಿರುವ ಅಫಜಲಪುರ ತಾಲ್ಲೂಕಿಗೆ ಬ್ಯಾಂಕಿನ ಸಹಾಯ ಸಹಕಾರ ಅವಶ್ಯ' ಎಂದರು.`ಪ್ರತಿ ಕ್ವಿಂಟಲ್ ತೊಗರಿಗೆ 4 ಸಾವಿರ ರೂಪಾಯಿ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಮಾಡಿದ್ದು, ಇಷ್ಟರಲ್ಲಿಯೆ ತೊಗರಿ ಖರೀದಿಗಳು ಆರಂಭವಾಗಲಿವೆ. ಅದರ ಬಗ್ಗೆ ರೈತರಲ್ಲಿ ಅನುಮಾನ ಬೇಡ' ಎಂದರು.ಹೈದರಾಬಾದ್ ವಲಯ ಪ್ರಧಾನ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, `ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಯಾಗಿ ಇಂದಿಗೆ ನೂರು ವರ್ಷಗಳಾದವು. ಬ್ಯಾಂಕು ಲಾಭದಲ್ಲಿಯೇ ಇದೆ. ನಮ್ಮ ಬ್ಯಾಂಕು ರೈತರಿಗೆ ವಾರ್ಷಿಕ 7ರ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ ನೀಡಲಿದೆ. ಅದರಂತೆ ರೈತರಿಗೆ ಬೆಳೆ ಸಾಲ ಮತ್ತು ಕೃಷಿ ಅಭಿವೃದ್ಧಿಗಾಗಿ, ವ್ಯಾಪಾರಸ್ಥರಿಗೆ ಬ್ಯಾಂಕ್ ಸಾಲ ನೀಡಲಿದೆ' ಎಂದರು.ಸಭೆಯಲ್ಲಿ ವರ್ತಕರಾದ ಮಹಾಂ ತೇಶ ನೂಲಾ ಹಾಗೂ ರೈತ ಮುಖಂಡರಾದ ಕುಲಭೂಷಣ ವರ್ದಮಾನ ಮಾತನಾಡಿ, `ರೈತರಿಗೆ ಸಕಾಲಕ್ಕೆ ಬೆಳೆ ಸಾಲ ಕೊಡಿ ಮತ್ತು ಗೋದಾಮುಗಳಲ್ಲಿ ರೈತರು ಸಂಗ್ರಹ ಮಾಡಿಟ್ಟಿರುವ  ಹುಟ್ಟುವಳಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಬೇಕು' ಎಂದರು.ಸಮಾರಂಭದಲ್ಲಿ ರೈತ ಮುಖಂಡರಾದ ಸಿದ್ದಯ್ಯ ಹಿರೇಮಠ, ಪುರುಷೋತ್ತಮ ಪುರೋಹಿತ, ಮಲ್ಲಿನಾಥ ಲೋಣಿ, ಹಾಗೂ ತಹಸೀಲ್ದಾರ ರಾಜಾ ಪಟೇಲ, ತಾ.ಪಂ. ಅಧಿಕಾರಿ ಶಿವಶರಣಪ್ಪ ನಂದಗಿರಿ, ಶಿವಪ್ಪ ಕಂಟೋಳಿ ಮತ್ತಿತರು ಭಾಗವಹಿಸಿದ್ದರು. ಶಾಖಾ ವ್ಯವಸ್ಥಾಪಕ ಡಿ. ಮಧು ಸೂದನರಾವ ಸ್ವಾಗತಿಸಿದರು. ಗಣಪತಿ ಪೋಳ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry