ಗುರುವಾರ , ಜುಲೈ 29, 2021
27 °C

ಕೋಟಿ ಹಣ ಬಿಡುಗಡೆಗೆ ವಾಲೀಕಾರ ಒತ್ತಾಯ

-ಆರ್.ಚೌಡರೆಡ್ಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಯಚೂರು ಹರಿದಾಸ ಸಾಹಿತ್ಯ ಅಧ್ಯಯನ ಸಂಸ್ಥೆಗೆ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹಿರಿಯ ಸಾಹಿತಿ ಚೆನ್ನಣ್ಣ ವಾಲೀಕಾರ ಹೇಳಿದರು.ಗುಲ್ಬರ್ಗದ ಸಂಗಮೇಶ್ವರ ಸಭಾಗೃಹದಲ್ಲಿ ಹರಿದಾಸ ಸಾಹಿತ್ಯ ವಿಚಾರ ವಾಹಿನಿ, ಸ್ವರಮಾಧುರಿ ಸಂಗೀತ  ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ ಹರಿದಾಸ ಹಾಡುಗಳ ಸಂಗೀತ ಸಂಭ್ರಮದ  `ಹರಿದಾಸ ವೈಭವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಶರಣರಂತೆ ದಾಸರೂ ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಹರಿದಾಸ ಸಾಹಿತ್ಯ ಅಧ್ಯಯನ ಹಾಗೂ ಸಂಶೋಧನೆ ಅವಶ್ಯಕವಾಗಿದೆ. ಈ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯವು ಸರ್ಕಾರಕ್ಕೆ ಒತ್ತಾಯಿಸಬೇಕು' ಎಂದು ಸಲಹೆ ನೀಡಿದರು. ಗಂಗಾವತಿ ಪವನಕುಮಾರ ಜಿ. ಮಾತನಾಡಿ, ಉದಾರೀಕರಣ, ಜಾಗತೀಕರಣ, ಖಾಸಗೀಕರಣದಿಂದ ಅಂತ:ಕರಣ ಕಳೆದು ಹೊಗಿದ್ದು, ಇದಕ್ಕೆ ಪರಿಹಾರ ದಾಸ ಸಾಹಿತ್ಯದಲ್ಲಿದೆ ಎಂದರು.ಗುಲ್ಬರ್ಗ ಆಕಾಶವಾಣಿ ಕೇಂದ್ರದ ನಿರ್ದೇಶಕಿ ಅಂಜನಾ ಯಾತನೂರ, ಜಯಮಾಲಾ ಕಮಲಾಪುರಕರ್ ಅವರನ್ನು ಸನ್ಮಾನಿಸಲಾಯಿತು.

ಮಂತ್ರಾಲಯ ಮಠ  ಪ್ರಕಟಿಸಿರುವ `ಶ್ರೀರಾಮದಾಸರ ಬದುಕು, ಸಾಹಿತ್ಯ' ಕೃತಿಯನ್ನು ಹಿರಿಯ ಸಾಹಿತಿ ಚೆನ್ನಣ್ಣ ವಾಲಿಕಾರ ಬಿಡುಗಡೆ ಮಾಡಿದರು.

ಗುಲ್ಬರ್ಗ ವಿವಿ ಕನ್ನಡ ಪ್ರಧ್ಯಾಪಕ ಡಾ.ಡಿ.ಬಿ. ನಾಯಕ,ಹರಿದಾಸ ಸಾಹಿತ್ಯ ವಿಚಾರ ವಾಹಿನಿ ಅಧ್ಯಕ್ಷ ಸ್ವಾಮಿರಾವ  ಕುಲಕರ್ಣಿ, ಕಾರ್ಯದರ್ಶಿ ವ್ಯಾಸರಾಜ ಸಂತೆಕೆಲ್ಲೂರ, ಸ್ವರಮಾಧುರಿ ಸಂಗೀತ  ವಿದ್ಯಾಲಯದ ಅಧ್ಯಕ್ಷ ಮಹೇಶಕುಮಾರ ಬಡಿಗೇರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.