ಶಿಕ್ಷಕರ ವರ್ಗಾವಣೆ: ಪರಿಷ್ಕೃತ ಕೌನ್ಸೆಲಿಂಗ್
ಗುಲ್ಬರ್ಗ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಗಾವಣೆಗಳನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2007ರಂತೆ ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು. ವರ್ಗಾವಣೆಗೆ ಸಂಬಂಧಿಸಿದಂತೆ ಬದಲಾವಣೆಯಾದ ಹೊಸ ದಿನಾಂಕಗಳಂದು ಕೌನ್ಸೆಲಿಂಗ್ ಈ ಮುಂದೆ ತೋರಿಸಲಾಗಿದೆ.
ಘಟಕದೊಳಗಿನ ಕೋರಿಕೆ ವರ್ಗಾವಣೆಗೆ ಕೌನ್ಸೆಲಿಂಗ್ (ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಕರು/ ವಿಶೇಷ ಶಿಕ್ಷಕರು) 01 ರಿಂದ ಮುಗಿಯುವವರೆಗೆ ಜು.8ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು.
ಘಟಕದೊಳಗಿನ ಕೋರಿಕೆಯ ಸಹ ಶಿಕ್ಷಕರ ವರ್ಗಾವಣೆಯ ಅಂತಿಮ ಪಟ್ಟಿಯ ಕ್ರಮ ಸಂಖ್ಯೆ 01 ರಿಂದ 300ರವರೆಗೆ ಜು.8ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು. ಘಟಕದೊಳಗಿನ ಕೋರಿಕೆಯ ಸಹ ಶಿಕ್ಷಕರ ವರ್ಗಾವಣೆಯ ಅಂತಿಮ ಪಟ್ಟಿಯ ಕ್ರಮ ಸಂಖ್ಯೆ 301ರಿಂದ 650ರವರೆಗೆ ಜು.9ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು.
ಘಟಕದೊಳಗಿನ ಕೋರಿಕೆಯ ಸಹ ಶಿಕ್ಷಕರ ವರ್ಗಾವಣೆಯ ಅಂತಿಮ ಪಟ್ಟಿಯ ಕ್ರಮ ಸಂಖ್ಯೆ 651 ರಿಂದ 1050ರವರೆಗೆ ದಿ: 10-7-2013 ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು. ಘಟಕದೊಳಗಿನ ಕೋರಿಕೆಯ ಸಹ ಶಿಕ್ಷಕರ ವರ್ಗಾವಣೆಯ ಅಂತಿಮ ಪಟ್ಟಿಯ ಕ್ರಮ ಸಂಖ್ಯೆ 1051 ರಿಂದ ಪೂರ್ಣ ಮುಗಿಯುವರೆಗೂ ಜು.11ರಂದು ಬೆಳಿಗ್ಗೆ 10 ಗಂಟೆಯಿಂದ ಕೌನ್ಸೆಲಿಂಗ್ ನಡೆಸಲಾಗುವುದು.
ವರ್ಗಾವಣೆ ಬಯಸಿ ಅರ್ಜಿ ಹಾಕಿದ ಎಲ್ಲ ಶಿಕ್ಷಕರ ಅರ್ಜಿ ಪ್ರತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮೋದನೆ ಪ್ರತಿ ಹಾಗೂ ಅಗತ್ಯ ದಾಖಲೆಗಳನ್ನು ಕೌನ್ಸೆಲಿಂಗ್ ಸಂದರ್ಭದಲ್ಲಿ ಕಡ್ಡಾಯವಾಗಿ ತರಬೇಕೆಂದು ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.