ಬುಧವಾರ, ಮೇ 18, 2022
27 °C
ವಿವಿಧ ಸಂಘಟನೆ ಸಭೆಯಲ್ಲಿ ಪ್ರಮುಖರ ನಿರ್ಧಾರ

ಐಐಐಟಿ ಬರುವವರೆಗೂ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಕಾಲೇಜು ಸ್ಥಾಪಿಸುವವರೆಗೂ ಹೋರಾಟ ನಡೆಸಲು ವಿವಿಧ ಸಂಘಟನೆಗಳ ಪ್ರಮುಖರು ತೀರ್ಮಾನಿಸಿದರು.ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ (ಎಚ್‌ಕೆಸಿಸಿ)ಯ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.ಫಜಲ್ ಅಲಿ ವರದಿ ಪ್ರಕಾರ ರಾಯಚೂರಿನಲ್ಲಿ ಹಾಗೂ ಡಾ. ನಂಜುಂಡಪ್ಪ ವರದಿ ಪ್ರಕಾರ ಗುಲ್ಬರ್ಗದಲ್ಲೊಂದು ಐಐಐಟಿ ಸ್ಥಾಪನೆಯಾಗ                   ಬೇಕಿತ್ತು.ಆದರೆ ಮಧ್ಯೆ ಕರ್ನಾಟಕ ಹಾಗೂ ಮೈಸೂರು ಪ್ರಾಂತ್ಯದ ಜಿಲ್ಲೆಗಳ ಶಾಸಕರ ಒತ್ತಡಕ್ಕೆ ಸರ್ಕಾರ ಮಣಿದಿದೆ. ಇದೀಗ ಐಐಐಟಿ ಕಾಲೇಜನ್ನು ಧಾರವಾಡದಲ್ಲಿ ಸ್ಥಾಪಿಸಲಾಗುತ್ತಿದೆ. ಕೂಡಲೇ ಸರ್ಕಾರ ಈ ನಿರ್ಧಾರ ಬದಲಿಸಬೇಕು ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ                        ಅಗ್ರಹಿಸಿದರು.ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಐಐಐಟಿ ಸ್ಥಾಪಿಸಲು ಗುಲ್ಬರ್ಗದಲ್ಲಿ ಜಾಗವಿಲ್ಲ ಎಂದು ಸಬೂಬು ಹೇಳಿ, ಕಾಲೇಜನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರು.ಪ್ರೊ. ಸಂಗೀತಾ ಕಟ್ಟಿಮನಿ ಮಾತನಾಡಿ, `ಐಐಐಟಿ ಬೆಂಗಳೂರು ಕಾಲೇಜಿನ ಘಟಕವೊಂದು ಧಾರವಾಡದಲ್ಲಿ ಈಗಾಗಲೇ ಸ್ಥಾಪನೆಯಾಗಿದೆ.

ಡಾ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಧಾರವಾಡ ಹಾಗೂ ಗುಲ್ಬರ್ಗಕ್ಕೆ ಬಹಳಷ್ಟು ವ್ಯತ್ಯಾಸವಿದೆ.ಹೀಗಾಗಿ ನ್ಯಾಯವಾಗಿ ಗುಲ್ಬರ್ಗದಲ್ಲಿ ಕಾಲೇಜು ಸ್ಥಾಪಿಸಬೇಕಿತ್ತು' ಎಂದು ವಿವರಿಸಿದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೆ ಈ ಭಾಗದಲ್ಲಿ ಐಐಐಟಿ ಸ್ಥಾಪನೆಯಾಗಬೇಕಿತ್ತು. ಆದರೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಸೇರಿ ಅದನ್ನು ಧಾರವಾಡದಲ್ಲಿ ಸ್ಥಾಪಿಸುವ ಬಗ್ಗೆ ಯೋಜನೆ ರೂಪಿಸಿದರು ಎಂದು  ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ದಯಾನಂದ ಅಗಸರ ಮಾತನಾಡಿ, `ಈ ಭಾಗದ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಲ್ಲಿನ ಜನರು ಕೂಡಾ ಆತ್ಮವಿಶ್ವಾಸ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.ಶಿಕ್ಷಣ ಸಂಸ್ಥೆಗಳು ಹೆಚ್ಚು ಸ್ಥಾಪನೆಯಾದರೆ ಮಾತ್ರ ಈ ಭಾಗದಲ್ಲಿ ಅವಕಾಶಗಳು ಹೆಚ್ಚುತ್ತವೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.