ಸೋಮವಾರ, ಜನವರಿ 20, 2020
29 °C

ಎಂಎಂಕೆ ಕಾಲೇಜಿಗೆ ಕಲಾಕೃತಿಗಳ ತೋರಣ

ರವಿ ಎಸ್‌.ಬಳೂಟಗಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಎಂಕೆ ಕಾಲೇಜಿಗೆ ಕಲಾಕೃತಿಗಳ ತೋರಣ

ಗುಲ್ಬರ್ಗ: ‘ಬಿಸಿಲನಾಡು ಗುಲ್ಬರ್ಗ ದಲ್ಲಿ ಪ್ರತಿ ವರ್ಷವೂ ಬರಗಾಲ. ಆದರೆ, ಕಲೆ, ಪರಂಪರೆ ಮಾತ್ರ ಸದಾಕಾಲ ಸಂಪದ್ಭರಿತವಾಗಿದೆ’

–ನಗರದ ಎಂಎಂಕೆ ಕಲಾ ಕಾಲೇಜಿಗೆ ಭೇಟಿ ನೀಡಿದಾಗ ಹೀಗೆ ಅನಿಸುತ್ತದೆ.ಕಾಲೇಜಿನ ಅಂಗಳದ ತುಂಬಾ ಹರಡಿರುವ ಕಲಾಕೃತಿಗಳು ಈ ಭಾವ ಸ್ಫುರಿಸುತ್ತವೆ. ಕಲ್ಲಿನ ಕಟ್ಟಡದಿಂದ ತೂರಿಬಂದ ಕಂದೀಲು, ಪಿರಾಮಿಡ್‌, ಬುದ್ಧ, ಬಸವ, ಶಿವನ ಮೂರ್ತಿಗಳು, ಅವ್ಯಕ್ತ ಭಾವದ ಕಲಾಕೃತಿಗಳು ಇಲ್ಲಿನ ವಿದ್ಯಾರ್ಥಿಗಳ ಸೃಜನಶೀಲತೆಗೆ ಸಾಕ್ಷಿ.

ಕಲ್ಲು, ಮಣ್ಣು, ಸಿಮೆಂಟ್‌, ಸಿರಾಮಿಕ್‌ ಸೇರಿದಂತೆ ನಿರುಪಯುಕ್ತ ವಸ್ತುಗಳಲ್ಲಿ ಅವು ಮೈದಳೆದಿವೆ. ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಕಲೆಯ ಕುರಿತು ಸ್ಫೂರ್ತಿ ತುಂಬುವ ಉದ್ದೇಶ ಈ ಸಂಗ್ರಹದ ಹಿಂದಿದೆ. ಕ್ಯಾಂಪಸ್‌ ಅಂಗಳಕ್ಕೆ ಕಲೆಯ ಸ್ಪರ್ಶ ನೀಡಿ, ಅಲ್ಲಿಗೆ ಭೇಟಿ ನೀಡುವ ಸಾಮಾನ್ಯ ಜನರಿಗೂ ಮುದು ನೀಡುವ ವಾತಾವರಣ ಸೃಷ್ಟಿಸಲಾಗಿದೆ.ಐಡಿಯಲ್‌ ಫೈನ್‌ ಆರ್ಟ್‌ ಸೊಸೈಟಿಯ ಎಂಎಂಕೆ ದೃಶ್ಯಕಲಾ ಕಾಲೇಜು ೪೦ಕ್ಕೂ ಹೆಚ್ಚು ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಬೆಳೆಸುತ್ತಿದೆ. ಕಲಾ ವಿಭಾಗದಲ್ಲಿ ಡಿಪ್ಲೊಮಾ ದಿಂದ ಪಿ.ಎಚ್‌ಡಿವರೆಗೆ ಶಿಕ್ಷಣ ನೀಡುತ್ತಿದೆ. ಎಸ್‌ಎಸ್‌ ಎಲ್‌ಸಿ ಹಾಗೂ ಪಿಯುಸಿ ಉತ್ತೀರ್ಣರಾದವರು ಇಲ್ಲಿಗೆ ಪ್ರವೇಶ ಪಡೆಯುತ್ತಾರೆ. ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ಪ್ರತಿ ವರ್ಷವೂ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಪ್ರವೇಶ ಪಡೆದವರು ಚಿತ್ರಕಲೆ, ಅನ್ವಯಿಕ ಕಲೆ, ಗ್ರಾಫಿಕ್‌, ಛಾಯಾಚಿತ್ರ ಹಾಗೂ ಶಿಲ್ಪಕಲೆಯ ಅಭ್ಯಾಸ ಮಾಡುತ್ತಾರೆ. ಎಂ.ಫಿಲ್‌, ಪಿ.ಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಹೀಗೆ ಕಲಿಯಲು ಬಂದವರ ಕಲಾಸಕ್ತಿಯ ಬಿಂಬ ಈ ಕಲಾಕೃತಿಗಳು.ಪ್ರಾಯೋಗಿಕ ಕಲಿಕೆಯ ಭಾಗವಾಗಿ ಪ್ರತಿವರ್ಷ ಶಿಬಿರ, ಕಾರ್ಯಾಗಾರ ಹಮ್ಮಿಕೊಳ್ಳ ಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿ, ಕೇಂದ್ರ ಸರ್ಕಾರದ ಪ್ರಾಯೋಜಕತ್ವ ದಲ್ಲಿ ಇಂತಹ ಶಿಬಿರಗಳು ನಡೆಯು ತ್ತವೆ. ಕ್ಷೇತ್ರ ಪರಿಣತರು ಅತಿಥಿಗಳಾಗಿ ಬಂದು ಕಲಾಶಿಬಿರ ನಡೆಸಿ ಕೊಡುತ್ತಾರೆ. ಆಗ ತಯಾರಿ ಸಲ್ಪಟ್ಟ ಕಲಾಕೃತಿಗಳನ್ನು ಗೋಡೆ, ಮುಖ್ಯಕಟ್ಟಡದ ಸುತ್ತ ಇರಿಸ ಲಾಗಿದೆ. ಕಾಲೇಜು ಕಾರಿಡಾರ್‌ನ ಖಾಲಿ ಸ್ಥಳವನ್ನೂ ಅವು ಆಕ್ರಮಿಸಿವೆ.ಶಿಬಿರ ಆಯೋಜಿಸಲು ಪ್ರಾಂಶು ಪಾಲರು ವಿವಿಧ ಇಲಾಖೆಗೆ ಪತ್ರ ಬರೆಯುತ್ತಾರೆ. ಶಿಬಿರಕ್ಕೆ ಬೇಕಾದ ಕಚ್ಚಾವಸ್ತು ಪೂರೈ ಸುವ ಭರವಸೆ ನೀಡುತ್ತಾರೆ. ಪರಿಣತರ ಆಯ್ಕೆ ಹಾಗೂ ಇತರ ವೆಚ್ಚವನ್ನು ಆಯಾ ಇಲಾಖೆ ಭರಿಸ ಬೇಕು. ಇಲ್ಲಿಗೆ ಬರುವ ಪರಿಣತರು ವಿದ್ಯಾರ್ಥಿ ಗಳೊಂದಿಗೆ ನಿರ್ದಿಷ್ಟ ಪರಿಕಲ್ಪನೆ ಮೇಲೆ ಕುಸುರಿ ಕೆಲಸ ಮಾಡುತ್ತಾರೆ. 3ರಿಂದ 1 ವಾರದ ವರೆಗೆ ಮಾರ್ಗದರ್ಶನ ಶಿಬಿರ ನಡೆಯುತ್ತದೆ. ಸಿದ್ಧವಾದ ಕಲಾಕೃತಿ ಯನ್ನು ಕಲಾಸಕ್ತರಿಗೆ ಮಾರಾಟವೂ ಮಾಡಬಹುದು. ಆದರೆ, ಬಹುತೇಕರು ಈ ಕಾಲೇಜಿನ ಮೇಲಿನ ಪ್ರೀತಿ ಯಿಂದ ಇಲ್ಲಿಯೇ ಇರಿಸುತ್ತಾರೆ. ಹೀಗೆ ಸಂಗ್ರಹ ವಾದ ಕಲಾಕೃತಿಗಳು ದೊಡ್ಡ ರಾಶಿ ಇಲ್ಲಿದೆ.ಕಟ್ಟಡದ ಮೇಲಿನ ಕಂದೀಲು, ಭಿತ್ತಿಚಿತ್ರ, ಗೋಡೆ ಮೇಲಿನ ಚಿತ್ರಕಲೆ, ತುಳಸಿಕಟ್ಟೆ, ಗಡಿಯಾರ, ದೇವರ ಮೂರ್ತಿಗಳು ಅವುಗಳಲ್ಲಿ ಪ್ರಮುಖ ವಾಗಿವೆ. ವಿದ್ಯಾರ್ಥಿಗಳು ಸಿಮೆಂಟ್‌ ಹಾಗೂ ಟೈಲ್ಸ್‌ ಕಾರ್ಖಾ ನೆಗೆ ತೆರಳಿ ನಿರುಪಯುಕ್ತ ವಸ್ತು ಸಂಗ್ರಹಿಸಿ ತಂದು ಕಲೆಯ ಆಕಾರ ನೀಡುತ್ತಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಇಂಥ ಕಲಾಕೃತಿ ತಯಾರಿಸುವುದು ಹೆಚ್ಚು. ಉಪನ್ಯಾಸಕರು, ಪ್ರಾಂಶುಪಾಲರ ಮಾರ್ಗದರ್ಶನವೂ ಇರುತ್ತದೆ. ವಿದ್ಯಾರ್ಥಿ ರೂಪಿಸಿದ ಪರಿಕಲ್ಪನೆಗೆ ಶಿಕ್ಷಕರು, ಪ್ರಾಂಶುಪಾಲರು ಸಲಹೆ ನೀಡಿ ಕೃತಿಗಿಳಿಸುತ್ತಾರೆ. ಅಲ್ಪ ಪ್ರಮಾ ಣದ ಆರ್ಥಿಕ ನೆರವೂ ನೀಡುತ್ತಾರೆ.ನಮ್ಮ ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿ

ಕಾಲೇಜು ಆವರಣವನ್ನು ಸುಂದರವಾಗಿಸುವ ಅಭಿಲಾಷೆಯಿಂದ ಈ ಯೋಜನೆ ರೂಪಿಸಲಾಗಿದೆ. ಬಹುತೇಕ ಕಲಾಕೃತಿಗಳನ್ನು ನಮ್ಮ ವಿದ್ಯಾರ್ಥಿಗಳ ತಯಾರಿಸಿದ್ದಾರೆ. ಹೊಸಬರಿಗೆ ಹಳೆಯ ವಿದ್ಯಾರ್ಥಿಗಳ ಸಾಧನೆ ಅರಿಯಲು ಅವು ಸಹಾಯಕ. ಕಲಾಕೃತಿಗಳನ್ನು ಜೋಪಾನ ಮಾಡಿಕೊಂಡು ಬರಲಾಗಿದೆ. ನಾಡಿನ ಖ್ಯಾತನಾಮರು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಚಂದ್ರಶೇಖರ ಕಂಬಾರ, ಪಾಟೀಲ ಪುಟ್ಟಪ್ಪ, ಎಂ.ಎಂ. ಕಲಬುರ್ಗಿ, ಖಾದ್ರಿ ಶಾಮಣ್ಣ ಮುಂತಾದವರು ಭೇಟಿ ನೀಡಿದ್ದಾರೆ. ಅವುಗಳ ಮಾರಾಟದಿಂದ ಕೆಲ ವಿದ್ಯಾರ್ಥಿಗಳ ಆದಾಯವೂ ಗಳಿಸಿದ್ದಾರೆ.

–ಡಾ.ವಿ.ಜಿ. ಅಂದಾನಿ, ಪ್ರಾಂಶುಪಾಲರು

ಪ್ರತಿಕ್ರಿಯಿಸಿ (+)