ಸೋಮವಾರ, ಜೂನ್ 21, 2021
20 °C
ಲೋಕಸಭೆ ಚುನಾವಣೆ 2014

16ರವರೆಗೆ ಮತದಾರರ ನೋಂದಣಿಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋದ ಮತದಾರರು ತಮ್ಮ ಹೆಸರನ್ನು ಮಾ. ೧೬ರವರೆಗೆ ಆಯಾ ಮತಗಟ್ಟೆಗಳಲ್ಲಿ ಚುನಾವಣಾ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿ ಫಾರ್ಮ್‌-–೬ನ್ನು ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ.ಪ್ರಸಾದ್ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಚುನಾವಣಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾರರ ಹೆಸರು ನೋಂದಣಿಗಾಗಿ ಮಾ. ೯ರಂದು ವಿಶೇಷ ಅಭಿಯಾನವನ್ನಾಗ ಏರ್ಪಡಿಸಲಾಗಿದ್ದು, ಮತದಾರರ ಯಾದಿಯಲ್ಲಿ ತಮ್ಮ ಹೆಸರಿಲ್ಲದಿರುವುದನ್ನು ಗಮನಿಸಿ ಮತಗಟ್ಟೆಯಲ್ಲಿ ಅರ್ಜಿ ಸಲ್ಲಿಸಬೇಕು. ಸ್ವೀಕೃತ ಅರ್ಜಿಯ ವಿವರಗಳನ್ನು  ಪರಿಶೀಲಿಸಿ ಮತದಾರರ ಹೆಸರನ್ನು ಮತದಾರರ ಯಾದಿಗೆ ಸೇರಿಸಲು ಕ್ರಮ ಜರುಗಿಸಬೇಕು ಎಂದು ತಿಳಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಅಂಚೆ ಮತಪತ್ರವನ್ನು ನೀಡಲಾಗುವುದು. ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಹಾಗೂ ಪ್ರತಿಯೊಂದು ವಿಧಾನಸಭಾ ಮತಕ್ಷೇತ್ರಗಳಲ್ಲಿ ದೂರು ಪೆಟ್ಟಿಗೆಗಳನ್ನು ಸ್ಥಾಪಿಸಲಾಗುವುದು ಎಂದರು.ಪ್ರತಿಯೊಂದು ವಿಧಾನಸಭಾ ಮತಕ್ಷೇತ್ರಕ್ಕೆ ಮೂರು ಫ್ಲೈಯಿಂಗ್ ಸ್ವ್ಕಾಡ್‌ಗಳನ್ನು ರಚಿಸಲು ಆದೇಶ ನೀಡಲಾಗಿದೆ. ಪ್ರತಿ ಫ್ಲೈಯಿಂಗ್ ಸ್ವ್ಕಾಡ್‌ನಲ್ಲಿ ಪ್ಲೈಯಿಂಗ್ ಸ್ವ್ಕಾಡ್‌ ಮುಖ್ಯಸ್ಥ, ಅಬಕಾರಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜೊತೆಗೆ ಒಬ್ಬ ವಿಡಿಯೋ ಗ್ರಾಫರ್ ಒಳಗೊಂಡಿರುತ್ತಾರೆ. ಅಭ್ಯರ್ಥಿಗಳು ಕಾರ್ಯಕ್ರಮಗಳನ್ನು ಜರುಗಿಸಿದಾಗ ಅದರ ಚಿತ್ರೀಕರಣ ಮಾಡಲಾಗುವುದು.ಅಭ್ಯರ್ಥಿಗಳು ಲೋಕಸಭಾ ಮತಕ್ಷೇತ್ರವನ್ನು ಪೂರ್ತಿಯಾಗಿ ತಿರುಗಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರವಾನಿಗೆಯನ್ನು ನೀಡಲಾಗುವುದು. ಸಭೆ-ಸಮಾರಂಭ, ರ್‍ಯಾಲಿ, ಪಾದಯಾತ್ರೆಗಳಿಗಾಗಿ ಆಯಾ ತಾಲ್ಲೂಕು ತಹಶೀಲ್ದಾರ್‌ ಕಚೇರಿಗಳಲ್ಲಿರುವ ಸಹಾಯಕ ಚುನಾವಣಾಧಿಕಾರಿಗಳು ಪರವಾನಿಗೆಯನ್ನು ನೀಡುವರು. ಸಾರ್ವಜನಿಕ ಕಾರ್ಯಕ್ರಮಗಳ ಪರವಾನಿಗೆಯನ್ನು ಸಿಂಗಲ್ ವಿಂಡೋ ಮುಖಾಂತರ ನೀಡಲು ಕ್ರಮ ಜರುಗಿಸಲಾಗಿದೆ ಹಾಗೂ ಸ್ಟ್ರಾಂಗ್ ರೂಂ, ಮಸ್ಟರಿಂಗ್, ಡಿ ಮಸ್ಟರಿಂಗ್, ಟ್ರೇನಿಂಗ್ ಹಾಲ್‌ಗಳನ್ನು ೨-೩ ದಿನಗಳಲ್ಲಿ ಗುರುತಿಸಲಾಗುವುದು ಎಂದರು.ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸರ್ಕಾರಿ ಹಾಗೂ ಸಾರ್ವಜನಿ ಸ್ಥಳಗಳಲ್ಲಿ ಸರ್ಕಾರದ ವಿವಿಧ ಯೋಜನೆಜಗಳ ಬಂಟಿಂಗ್ಸ್ ಹಾಗೂ ಬ್ಯಾನರ್ಸ್‌ಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗುಲಬರ್ಗಾ ಲೋಕಸಭಾ ಚುನಾವಣಾ ನೋಡಲ್ ಅಧಿಕಾರಿಯಾದ ಟಿ.ಎಚ್.ಎಂ.ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಶೀನಾಥ ತಳಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.ಸರ್ಕಾರಿ ಅತಿಥಿ ಗೃಹಗಳಲ್ಲಿ ರಾಜಕೀಯ ಸಭೆ ನಿಷೇಧ

ಗುಲ್ಬರ್ಗ: ಲೋಕಸಭಾ ಸಾರ್ವತ್ರಿಕ ಹಿನ್ನೆಲೆಯಲ್ಲಿ ಚುನಾವಣೆಯ ದಿನಾಂಕ ನಿಗದಿಪಡಿಸಿ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ. ಸದರಿ ಅಧಿಸೂಚನೆಯನ್ವಯ ೨೦೧೪ರ ಲೋಕಸಭಾ ಸಾರ್ವತ್ರಿಕ ಚುನಾವಣೆಯು ೧೭-೪-೨೦೧೪ರಂದು ಜರುಗಲಿದೆ. ೫ರಿಂದಲೇ ದೇಶದಾದ್ಯಂತ ಜಾರಿಯಲ್ಲಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಅತಿಥಿ ಗೃಹಗಳನ್ನು ತಹಶೀಲ್ದಾರರ ವಶಕ್ಕೆ ನೀಡಲು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ ಅವರು ಆದೇಶಿಸಿದ್ದಾರೆ.ಸರ್ಕಾರಿ ಅತಿಥಿ ಗೃಹಗಳಲ್ಲಿ ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂಬ ನಾಮ ಫಲಕವನ್ನು ಅಳವಡಿಸಲು ಹಾಗೂ ಯಾವುದೇ ರಾಜಕೀಯ ಮುಖಂಡರಿಗೆ ಅತಿಥಿ ಗೃಹಗಳನ್ನು ನೀಡಬಾರದೆಂದು ಎಚ್ಚರಿಸಿದ್ದಾರೆ. ಒಂದುವೇಳೆ ಈ ಕುರಿತಂತೆ ಯಾವುದೇ ದೂರುಗಳು ಸ್ವೀಕೃತವಾದಲ್ಲಿ ಸಮಬಂಧಪಟ್ಟ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಆದೇಶಿಸಿದ್ದಾರೆ. ಈ ಕುರಿತಂತೆ ತೆಗೆದುಕೊಂಡ ಕ್ರಮವನ್ನು ಲಿಖಿತವಾಗಿ ಸಲ್ಲಿಸಲು ನಿರ್ದೇಶಿಸಿದ್ದಾರೆ.ಜಿಲ್ಲಾ ನೋಡಲ್ ಅಧಿಕಾರಿ ನೇಮಕ

ಗುಲ್ಬರ್ಗ: ಗುಲಬರ್ಗಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಹೆಚ್.ಎಂ. ಕುಮಾರ್ ಅವರನ್ನು ಗುಲಬರ್ಗಾ ಜಿಲ್ಲೆಯ ಚುನಾವಣಾ ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿ ಎಂದು ನೇಮಿಸಿ ಆದೇಶಿಸಲಾಗಿದೆ.

ನೋಡಲ್ ಅಧಿಕಾರಿಗಳು ಚುನಾವಣೆ ಸಂಬಂಧ ನಿರ್ಮಿಸಲಾದ ಫ್ಲಾಯಿಂಗ್ ಸ್ಕ್ವಾಡ್ ಟೀಮ್, ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್ ಹಾಗೂ ವಿಡಿಯೋ ವ್ಯೂವಿಂಗ್ ಟೀಮ್ ತಂಡಗಳಿಗೆ ಮೇಲ್ವಿಚಾರಕರಾಗಿರುವರು. ಈ ತಂಡಗಳಿಗೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಕಾಪಾಡುವ ಸಂಬಂಧ ಅವಶ್ಯಕವಿರುವ ಎಲ್ಲ ಸೂಕ್ತ ನಿರ್ದೇಶನಗಳನ್ನು ನೀಡುವುದು, ಒಂದು ವೇಳೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣ/ ಪ್ರಕರಣಗಳು ಕಂಡುಬಂದಿದ್ದೆಯಾದಲ್ಲಿ ಅಂತಹವರ ವಿರುದ್ಧ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ತಂಡದ ಅಧಿಕಾರಿಯವರಿಂದ ದೂರನ್ನು ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.ವಾಹನ ಹಿಂಪಡೆಯಲು ಸೂಚನೆ

ಗುಲ್ಬರ್ಗ: ಚುನಾವಣೆಯ ಮಾದರಿ ಚುನಾವಣಾ ನೀತಿ ಸಂಹಿತೆಯ ಮಾ.5ರಿಂದಲೇ ದೇಶದಾದ್ಯಂತ ಜಾರಿಯಲ್ಲಿದೆ. ಚುನಾವಣೆ ಕುರಿತಂತೆ ನಾಮ ನಿರ್ದೇಶನಗೊಂಡ ಸಂಘ ಸಂಸ್ಥೆಗಳ ಅಧ್ಯಕ್ಷ/ ಉಪಾಧ್ಯಕ್ಷರಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು,ಅಧಿಕಾರೇತರ ಸಂಘ ಸಂಸ್ಥೆಗಳ ವಾಹನಗಳನ್ನು ಚುನಾವಣೆ ಪ್ರಕ್ರಿಯೆ ಮುಗಿಯುವರೆಗೆ ತಕ್ಷಣದಿಂದಲೆ ಜಾರಿಗೆ ಬರುವಂತೆ ಅಧಿಗೃಹಿಸಿ ವಾಹನ ಚಾಲಕರೊಂದಿಗೆ ತಮ್ಮ ಅಧೀನದಲ್ಲಿ ಇರಿಸಿಕೊಂಡು ಸದರಿ ವಾಹನಗಳನ್ನು ಚುನಾವಣಾ ಕೆಲಸಕ್ಕೆ ಬಳಸಲು ಜಿಲ್ಲಾ ಚುನಾವಣಾಧಿಕಾರಿ ಸೂಚಿಸಿದ್ದಾರೆ. ನಾಮ ನಿರ್ದೇಶಿತ ಅಧಿಕಾರೇತರ ಸಂಘ ಸಂಸ್ಥೆಗಳ ಸರ್ಕಾರಿ ಕಚೇರಿಯನ್ನು ಅಧಿಗೃಹಿಸಿ ಸೀಲ್ ಮಾಡಲು ತಿಳಿಸಲಾಗಿದೆ.ಪ್ರಜಾವಾಣಿ ವಾರ್ತೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.