ಬುಧವಾರ, ಜೂನ್ 16, 2021
22 °C

ಅಧ್ಯಕ್ಷರಾಗಿ ಪರಮೇಶ್ವರ, ಉಪಾಧ್ಯಕ್ಷರಾಗಿ ಸಿದ್ದಯ್ಯಸ್ವಾಮಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಇಲ್ಲಿನ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸ್ಥಳೀಯ ಪರಮೇಶ್ವರ ಮಡಿವಾಳ ಹಾಗೂ ಉಪಾಧ್ಯಕ್ಷರಾಗಿ ರಾಜಾಪುರ ಗ್ರಾಮದ ಸಿದ್ದಯ್ಯಸ್ವಾಮಿ ಜೀವಣಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅಧಿಕಾರ ಅವಧಿಗಾಗಿ ಕಳೆದ ಭಾನುವಾರ ಮಾರ್ಚ್ 2ರಂದು ಸದಸ್ಯರ ಚುನಾವಣೆ ನಡೆದಿತ್ತು. ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೇವ ಗುತ್ತೇದಾರ ಬೆಂಬಲಿತದ ಎಂಟು ಅಭ್ಯರ್ಥಿಗಳು ಜಯಗಳಿಸಿ ಬಹುಮತ ಪಡೆದರೆ, ಬಿಜೆಪಿ ಮುಖಂಡ ಸುಭಾಷ ಕದಂ ಬೆಂಬಲಿತದ ಇಬ್ಬರು ಅಭ್ಯರ್ಥಿಗಳು ಜಯಗಳಿಸಿ ಬಹುಮತ ಕಳೆದುಕೊಂಡಿದ್ದರು. ನಂತರ ಮಾರ್ಚ್ 10ರಂದು ಸೋಮವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೇವ ಗುತ್ತೇದಾರ ಬೆಂಬಲಿತದ ಪರಮೇಶ್ವರ ಮಡಿವಾಳ ಅಧ್ಯಕ್ಷರಾಗಿ, ಹಾಗೂ ಸಿದ್ದಯ್ಯಸ್ವಾಮಿ ಜೀವಣಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಸಹಕಾರ ಸಂಘದ ನೂತನ ಸದಸ್ಯ­ರಾದ ಬಸವರಾಜ ನಿಜಲಿಂಗಪ್ಪ ಚಿಟ್ಟಾ, ಮಶಾಖ ಅಲಿ ಲಿಯಾಖತ ಅಲಿ ಹರಸೂರ, ತಿಪ್ಪಣ್ಣ ಬಸಣ್ಣ ಪೂಜಾರಿ, ಸಂತೋಷ ಹಣಮಂತ ಜಾಧವ, ದೀಪಲಾ ಧರ್ಮು, ಗಂಗಮ್ಮ ಸಾಬಣ್ಣ ಚಂದನಕೇರಿ ಇದ್ದರು.ವಿಜಯೋತ್ಸವ: ಮುಖಂಡ ಜಗದೇವ ಗುತ್ತೇದಾರ, ಜಿ.ಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ತಾ.ಪಂ ಸದಸ್ಯ ಚಂದ್ರಕಾಂತ ಜಾಧವ, ವೆಂಕಟರಾವ ಪಾಟೀಲ, ಶಿವಶರಣಪ್ಪ ಕಮಲಾಪುರ, ಗೋಟೂರ ಗ್ರಾ.ಪಂ ಅಧ್ಯಕ್ಷ ಪ್ರಭು ಭಾವಿ, ಶ್ರೀಮಂತ ನಾಮದಾರ, ಜಗನ್ನಾಥ ಚಂದನಕೇರಿ, ಗುಂಡಪ್ಪಗೌಡ ಭರತನೂರ  ನೂತನ ಅಧ್ಯಕ್ಷ–ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿ, ವಿಜಯೋತ್ಸವ ಆಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.