ಬೆಂಗಳೂರು: ಇದೇ ತಿಂಗಳ 7 ಮತ್ತು 8ರಂದು ಇಲ್ಲಿನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಡೇವಿಸ್ ಕಪ್ ಕ್ವಾಲಿಫೈಯರ್ಸ್ ಮೊದಲ ಸುತ್ತಿನ ಪಂದ್ಯ ಆಡಲಿರುವ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಮಂಗಳವಾರ ಇಲ್ಲಿನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದವು.

ಭಾರತ ತಂಡವು ಆಟವಾಡದ ನಾಯಕ ರೋಹಿತ್ ರಾಜಪಾಲ್ ಅವರ ಉಸ್ತುವಾರಿಯಲ್ಲಿ ಸೋಮವಾರವೂ ಅಭ್ಯಾಸದಲ್ಲಿ ಭಾಗಿಯಾಗಿತ್ತು. ವಿಶ್ವದ ಮಾಜಿ ಅಗ್ರಮಾನ್ಯ ಡಬಲ್ಸ್ ಆಟಗಾರ ಪಾಲ್ ಹಾರೂಯಿಸ್ ಅವರು ಕೋಚ್ ಆಗಿರುವ ಡಚ್ ತಂಡ ಇಬ್ಬರು ಪ್ರಮುಖ ಆಟಗಾರರ ಅಲಭ್ಯತೆಯಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಇಬ್ಬರು ಪ್ರಮುಖ ಸಿಂಗಲ್ಸ್ ಆಟಗಾರರಾದ ಟಾಲೊನ್ ಗ್ರೀಕ್ಸ್ಪೂರ್ (ವಿಶ್ವ ಕ್ರಮಾಂಕದಲ್ಲಿ 29ನೇ ಸ್ಥಾನ) ಮತ್ತು ಬಾಟಿಕ್ ವಾನ್ ಡಿ ಝಂಡ್ಶುಲ್ಪ್ (67ನೇ ಸ್ಥಾನ) ಅವರು ಆರನೇ ಕ್ರಮಾಂಕದ ನೆದರ್ಲೆಂಡ್ಸ್ ತಂಡದಲ್ಲಿಲ್ಲ. ನೆದರ್ಲೆಂಡ್ಸ್ ತಂಡ 2024ರಲ್ಲಿ ಫೈನಲ್ ತಲುಪಿತ್ತು.

‘ಇದು ಎರಡೂ ತಂಡಗಳಿಗೆ ಮಹತ್ವದ ಪಂದ್ಯ. ಸೆಪ್ಟೆಂಬರ್ನಲ್ಲಿ ನಡೆಯುವ ವಿಶ್ವಗುಂಪಿನ ಪ್ರಧಾನ ಸುತ್ತಿನಲ್ಲಿ ಆಡಲು ಎಲ್ಲರೂ ಬಯಸು ತ್ತಾರೆ. ಭಾರತ ತಂಡ ಉತ್ತಮವಾಗಿ ಆಡಿ ಈ ಹಂತಕ್ಕೆ ತಲುಪಿದೆ. ನಮ್ಮ ತಂಡಕ್ಕೆ ಅವರು ಪ್ರಬಲ ಎದುರಾಳಿಗಳು. ಇಲ್ಲಿ ಕಠಿಣ ಪಂದ್ಯ ನೀರಿಕ್ಷಿಸುತ್ತಿದ್ದೇನೆ’ ಎಂದು ಹಾರೂಯಿಸ್ ಹೇಳಿದರು. 59 ವರ್ಷ ವಯಸ್ಸಿನ ಹಾರೂಯಿಸ್ ಅವರು ಆರು ಗ್ರ್ಯಾನ್ಸ್ಲಾಮ್ (ಡಬಲ್ಸ್) ಪ್ರಶಸ್ತಿಗಳನ್ನು ಗೆದ್ದುಕೊಂಡ ಅನುಭವಿ.

‘ಈ ಇಬ್ಬರು ಆಟಗಾರರು ತಮ್ಮ ತವರು ದೇಶದ ರೋಟರ್ಡ್ಯಾಮ್ನಲ್ಲಿ ಮುಂದಿನ ವಾರ ಆರಂಭವಾಗುವ ಎಟಿಪಿ 500 ಟೂರ್ನಿಯಲ್ಲಿ ಆಡಲಿದ್ದಾರೆ. ಹೀಗಾಗಿ ಅವರು ಇಲ್ಲಿಗೆ ಬಂದಿಲ್ಲ’ ಎಂದು ಕೋಚ್ ಹೇಳಿದರು.

ಒಂದೆಡೆ ಪ್ರವಾಸಿ ತಂಡ, 2025ರ ಸೆಪ್ಟೆಂಬರ್ನಲ್ಲಿ ಅರ್ಜೆಂಟೀನಾ ಎದುರು 1–3 ಸೋಲನುಭವಿಸಿದರೆ, ಇನ್ನೊಂದೆಡೆ ಆತಿಥೇಯ ಭಾರತ, ವಿಶ್ವ ಗುಂಪು 1ರ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡಕ್ಕೆ 3–1 ರಿಂದ ಆಘಾತ ನೀಡಿ ಕ್ವಾಲಿಫೈಯರ್ಸ್ಗೆ ಅರ್ಹತೆ ಪಡೆದಿತ್ತು. ಸುಮಿತ್ ನಾಗಲ್, ದಕ್ಷಿಣೇಶ್ವರ ಸುರೇಶ್ ಅವರನ್ನು ಒಳಗೊಂಡ ತಂಡ 1993ರ ನಂತರ ಮೊದಲ ಬಾರಿ ಯುರೋಪಿನ ತಂಡದ ಮೇಲೆ ಜಯಗಳಿಸಿತ್ತು.

25 ವರ್ಷ ವಯಸ್ಸಿನ ಜೆಸ್ಪರ್ ಡಿ ಜಾಂಗ್ (88ನೇ ಕ್ರಮಾಂಕ) ಡಚ್ ಸವಾಲನ್ನು ಮುನ್ನಡೆಸಲಿದ್ದಾರೆ. 23 ವರ್ಷ ವಯಸ್ಸಿನ ಗಯ್ ಡೆನ್ ಆಡೆನ್ (162ನೇ ಕ್ರಮಾಂಕ) ಎರಡನೇ ಸಿಂಗಲ್ಸ್ ಆಟಗಾರರಾಗಿದ್ದಾರೆ. ಡೇವಿಡ್ ಪೆಲ್ ಮತ್ತು ಸ್ಯಾಂಡರ್ ಅರೆಂಡ್ಸ್ (ಕ್ರಮವಾಗಿ 29 ಮತ್ತು 40ನೇ ಕ್ರಮಾಂಕ) ಡಬಲ್ಸ್ ಆಟಗಾರರಾಗಿದ್ದಾರೆ.

ಭಾರತ ತಂಡವು ಸುಮಿತ್ ನಾಗಲ್, ದಕ್ಷಿಣೇಶ್ವರ ಸುರೇಶ್, ಯುಕಿ ಭಾಂಬ್ರಿ, ಕರಣ್ ಸಿಂಗ್ ಮತ್ತು ಋತ್ವಿಕ್ ಬೊಲ್ಲಿಪಲ್ಲಿ ಅವರನ್ನು ಒಳಗೊಂಡಿದೆ.

ಪೃಷ್ಟದ ನೋವಿನಿಂದ ಚೇತರಿಕೆ ಯಲ್ಲಿದ್ದ, 28 ವರ್ಷ ವಯಸ್ಸಿನ ಸುಮಿತ್ ನಾಗಲ್ ಅವರು ಮಂಗಳವಾರ ಅಭ್ಯಾಸದಲ್ಲಿ ಭಾಗಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.