ಬೆಂಗಳೂರು: ಡಿ.ಆಕಾಶ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರು ವಾರಿಯರ್ಸ್ ತಂಡವು ಬಿಡಿಎಫ್ಎ ಬಿ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ಮಂಗಳವಾರ 3–2ರಿಂದ ಎಂಪೈರ್ ಎಫ್ಸಿ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಕಾಶ್ ಅವರು 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಬಳಿಕ, ದ್ವಿತೀಯಾರ್ಧದಲ್ಲಿ (63ನೇ ಹಾಗೂ 78ನೇ ನಿ.) ಎರಡು ಗೋಲು ಗಳಿಸಿದರು. ಎಂಪೈರ್ ತಂಡದ ವಿಷ್ಣುಪ್ರಸಾದ್ ಕೆ. (73ನೇ ನಿ.) ಹಾಗೂ ಸಚಿನ್ ಕುಮಾರ್ ಎಸ್. (74ನೇ ನಿ.) ತಲಾ ಒಂದು ಗೋಲು ಹೊಡೆದರು.

ದಿನದ ಇನ್ನೊಂದು ಪಂದ್ಯದಲ್ಲಿ ಜುನೊ ಎಫ್ಸಿ ತಂಡವು 5–0ಯಿಂದ ರಿವೈವ್ ಎಫ್ಸಿ ವಿರುದ್ಧ ಸುಲಭ ಜಯ ಸಾಧಿಸಿತು. ಜುನೊ ತಂಡದ ಎಸ್.ಶ್ರೀಕಾಂತ್ ಸಿಂಗ್ (20ನೇ ಹಾಗೂ 56ನೇ ನಿ.) ಎರಡು ಗೋಲು ಗಳಿಸಿದರೆ, ಚಕ್ರೇಶ್ ಆಚಾರ್ಯ (30ನೇ ನಿ.), ಸಾತ್ವಿಕ್ ಶ್ರೀಧರ (47ನೇ ನಿ.) ಹಾಗೂ ಎ.ಮಧುಸೂದನ (74ನೇ ನಿ.) ತಲಾ ಒಂದು ಗೋಲು ಹೊಡೆದರು.

ಕೆಎಸ್ಪಿಎಫ್ ತಂಡವು 2–1ರಿಂದ ಯಂಗ್ ಬ್ಲ್ಯೂಸ್ ಎಫ್ಸಿ ತಂಡವನ್ನು ಮಣಿಸಿತು. ಬೆಂಗಳೂರು ಗನ್ನರ್ಸ್ ಎಫ್ಸಿ ಹಾಗೂ ಇನ್ಫೈನೈಟ್ ಬೆಳಗಾವಿ ಎಫ್ಸಿ ನಡುವಣ ಪಂದ್ಯ 1–1 ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.