ಬೆಂಗಳೂರು: ಕರ್ನಾಟಕ ತಂಡವು ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದ 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಹೈದರಾಬಾದ್ ತಂಡದ ವಿರುದ್ಧ ಡ್ರಾಕ್ಕೆ ತೃಪ್ತಿಪಡಬೇಕಾಯಿತು.

ಕರ್ನಾಟಕ ತಂಡ ಮೊದಲ ಇನಿಂಗ್ಸ್ನಲ್ಲಿ ಗಳಿಸಿದ್ದ 402 ರನ್ಗಳಿಗೆ ಉತ್ತರವಾಗಿ ಹೈದರಾಬಾದ್ ತಂಡವು 55.3 ಓವರ್ಗಳಲ್ಲಿ 186 ರನ್ಗಳಿಗೆ ಕುಸಿಯಿತು. ರಾಜ್ಯ ತಂಡಕ್ಕೆ 216 ರನ್ಗಳ ಮಹತ್ವದ ಮುನ್ನಡೆ ದೊರೆಯಿತು. ಆಶಿತ್ ಸಂಜಯ್ ಗಿರೀಶ್ (23ಕ್ಕೆ3) ಹಾಗೂ ಕೃಷ್ಣಕುಮಾರ್ (45ಕ್ಕೆ4) ಪರಿಣಾಮಕಾರಿ ಎನಿಸಿದರು.

ಫಾಲೊ ಆನ್ಗೆ ಒಳಗಾದ ಹೈದರಾಬಾದ್ ತಂಡವು ಎರಡನೇ ಇನಿಂಗ್ಸ್ನಲ್ಲಿ 42 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತು. ಅದರಿಂದಾಗಿ, ಇನಿಂಗ್ಸ್ ಸೋಲಿನಿಂದ ಸ್ವಲ್ಪದರಲ್ಲಿಯೇ ಪಾರಾಯಿತು. ಆಶಿತ್, ಕೃಷ್ಣಕುಮಾರ್ ಹಾಗೂ ಆರ್ಯನ್ ನಾಗೇಶ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ಕರ್ನಾಟಕ: 85 ಓವರ್ಗಳಲ್ಲಿ 3 ವಿಕೆಟ್ಗೆ 402

ಹೈದರಾಬಾದ್: 55.3 ಓವರ್ಗಳಲ್ಲಿ 186 (ಪಿ.ವಿವಾನ್ ರೆಡ್ಡಿ 37, ವರುಣ್ ಯಾದವ್ 28; ಆಶಿತ್ ಸಂಜಯ್ ಗಿರೀಶ್ 23ಕ್ಕೆ3, ಕೃಷ್ಣಕುಮಾರ್ 45ಕ್ಕೆ4).

ಎರಡನೇ ಇನಿಂಗ್ಸ್

ಹೈದರಾಬಾದ್: 42 ಓವರ್ಗಳಲ್ಲಿ 7 ವಿಕೆಟ್ಗೆ 95 (ಯುವನ್ ಶ್ರೀಕಾಂತ್ ರಾಜ್ 29; ಆಶಿತ್ ಸಂಜಯ್ ಗಿರೀಶ್ 14ಕ್ಕೆ2, ಕೃಷ್ಣಕುಮಾರ್ 29ಕ್ಕೆ2, ಆರ್ಯನ್ ನಾಗೇಶ್ 15ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.