ನವದೆಹಲಿ: ಕೆನಡಾ ಮತ್ತು ಅಮೆರಿಕ ಸೇರಿದಂತೆ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರ ದಂಡೇ ಇದ್ದು, ಅವರು ‘ತವರು ನೆಲ’ದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ಹೊಂದಿದ್ದಾರೆ. ಭಾರತ ಮತ್ತು ಶ್ರೀಲಂಕಾದಲ್ಲಿ ಇದೇ 7 ರಿಂದ ವಿಶ್ವಕಪ್ ನಡೆಯಲಿದೆ.

ಅಮೆರಿಕ ತಂಡದಲ್ಲಿರುವ ಮುಂಬೈ ಸಂಜಾತ ವೇಗಿ ಸೌರಬ್ ನೇತ್ರಾವಲ್ಕರ್ ಅವರು ಈಗ ಹಲವು ವರ್ಷಗಳ ನಂತರ ತವರು ನೆಲದಲ್ಲಿ ಬೌಲಿಂಗ್ ಮಾಡಲಿದ್ದಾರೆ. ಉದ್ಯೋಗದ ಅವಕಾಶ ಅರಸಿ ಅಮೆರಿಕಕ್ಕೆ ಹೋಗಿದ್ದ ಟೆಕ್ಕಿ ಸೌರಬ್ ಅವರಿಗೆ ಇದು ಭಾವನಾತ್ಮಕ ಸಂದರ್ಭ.

ಇಟಲಿ ತಂಡದಲ್ಲಿರುವ ವೇಗದ ಬೌಲರ್ ಜಸ್ಪ್ರೀತ್ ಸಿಂಗ್ ಹುಟ್ಟಿದ್ದು ಪಂಜಾಬಿನ ಫಗ್ವಾಡಾದಲ್ಲಿ. ಅವರೂ ಹದಿಹರೆಯದಲ್ಲೇ ಕ್ರಿಕೆಟ್ ಅವಕಾಶ ಅರಸಿಕೊಂಡು ಇಟಲಿಯಲ್ಲಿ ನೆಲೆಕಂಡುಕೊಂಡರು. ಈಗ ಆ ದೇಶದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನೆದರ್ಲೆಂಡ್ಸ್ ತಂಡದಲ್ಲಿರುವ ಆಫ್ ಸ್ಪಿನ್ನರ್, 22 ವರ್ಷ ವಯಸ್ಸಿನ ಆರ್ಯನ್ ದತ್ ಅವರು ಭಾರತದಲ್ಲಿ ಜನಿಸಿದವರಲ್ಲ. ಆದರೆ ಅವರ ಕುಟುಂಬ ಭಾರತದ ಬೇರುಗಳನ್ನು ಹೊಂದಿದೆ.

ವಿಶ್ವಕಪ್ನಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಕೆನಡಾ ತಂಡದಲ್ಲಿ 11 ಮಂದಿ ಭಾರತ ಮೂಲದ ಆಟಗಾರರು ಇದ್ದಾರೆ. ಅಮೆರಿಕ ತಂಡದಲ್ಲಿ 9 ಮಂದಿ, ಒಮಾನ್ ಮತ್ತು ಯುಎಇ ತಂಡದಲ್ಲಿ ತಲಾ ಏಳು ಮಂದಿ ಭಾರತೀಯ ಮೂಲದ ಆಟಗಾರರಿದ್ದಾರೆ.

ಸೌರಭ್ ನೇತ್ರಾವಲ್ಕರ್: 19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಆಡಿದ್ದ ಎಡಗೈ ವೇಗಿ ಸೌರಭ್ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. 34 ವರ್ಷ ವಯಸ್ಸಿನ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಸೌರಭ್ ಅವರು 2024ರ ಆವೃತ್ತಿಯಲ್ಲಿ ಅಮೆರಿಕ ತಂಡ ಸೂಪರ್ 8 ಹಂತ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ವಿಶ್ವಕಪ್ನಲ್ಲಿ ಜಂಟಿ ಆತಿಥೇಯ ಅಮೆರಿಕವು, ಪಾಕಿಸ್ತಾನಕ್ಕೆ ಸೋಲಿನ ಆಘಾತ ನೀಡಿದ್ದು ಮರೆಯುವಂತಿಲ್ಲ.

ಈಗ ಭಾರತ ತಂಡದ ನಾಯಕರಾಗಿರುವ ಸೂರ್ಯಕುಮಾರ್ ಅವರ ಜೊತೆಗೇ ಸೌರಭ್ ಮುಂಬೈ ತಂಡದಲ್ಲಿ ಆಡಿದ್ದರು. ಈಗ ವಿಶ್ವಕಪ್ನ ಮೊದಲ ದಿನವೇ (ಫೆ. 7) ಇವರಿಬ್ಬರು ಮುಖಾಮುಖಿಯಾಗಿ ಆಡಲಿದ್ದಾರೆ.

‘ಏನು ಪ್ರತಿಕ್ರಿಯಿಸಬೇಕೊ ತಿಳಿಯುತ್ತಿಲ್ಲ. ಆದರೆ ಇದು ಭಾವನಾತ್ಮ ಗಳಿಗೆ. ನಾನು ಕ್ರೀಡೆ ಬಿಟ್ಟುಬಿಟ್ಟು ಅಮೆರಿಕಕ್ಕೆ ಉದ್ಯೋಗಕ್ಕೆಂದು ತೆರಳಿದೆ. ಮತ್ತೆ ಕ್ರಿಕೆಟ್ ಆಡುತ್ತೇನೆಂದು ಯೋಚಿಸಿಯೇ ಇರಲಿಲ್ಲ. ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಬಗ್ಗೆ ಯೋಚಿಸುವುದು ದೂರದ ಮಾತಾಗಿತ್ತು’ ಎಂದು ಅವರು ಪಿಟಿಐಗೆ ತಿಳಿಸಿದರು.

ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್ ಗುಜರಾತ್ನ ಆನಂದ್ ಪಟ್ಟಣದಲ್ಲಿ ಜನಿಸಿದವರು. ಪಾಕ್ ವಿರುದ್ಧ ಗೆದ್ದ ತಂಡದಲ್ಲಿ 32 ವರ್ಷವ ವಯಸ್ಸಿನ ಪಟೇಲ್ ಅರ್ಧ ಶತಕ ಬಾರಿಸಿದ್ದರು. 19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಮೊನಾಂಕ್ ಮತ್ತು ಬೂಮ್ರಾ ಗುಜರಾತ್ ತಂಡದಲ್ಲಿ ಜೊತೆಯಾಗಿ ಆಡಿದವರು. ಈಗ ಅವರು ವಿಶ್ವಶ್ರೇಷ್ಠ ದರ್ಜೆಯ ವೇಗದ ಬೌಲರ್ ಆಗಿರುವ ಬೂಮ್ರಾ ಅವರನ್ನು ಎದುರಿಸಬೇಕಾಗಿದೆ!

ಜಸ್ಪ್ರೀತ್ ಸಿಂಗ್: ಇಟಲಿ ತಂಡದ ಜಸ್ಪ್ರೀತ್ ಸಿಂಗ್ ಮೇಲೆ ಎಲ್ಲರ ಗಮನ ನೆಟ್ಟಿದೆ. 32 ವರ್ಷ ವಯಸ್ಸಿನ ಬೌಲರ್, 2006ರಲ್ಲಿ ಕುಟುಂಬದ ಜೊತೆ ಮಿಲಾನ್ ಬಳಿಯ ಊರಿಗೆ ಬಂದು ನೆಲೆಸಿದ್ದರು. 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.

ಕೆಲವು ವರ್ಷಗಳ ಹಿಂದಿನವರೆಗೆ ಹೊಟ್ಟೆಪಾಡಿಗೆ ಅವರು ಉಬರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ದಿಲ್ಪ್ರೀತ್ ಬಾಜ್ವಾ: ಗುರುದಾಸಪುರದಲ್ಲಿ (ಪಂಜಾಬ್) ಜನಿಸಿದ ಬಾಜ್ವಾ ಅವರು 2020ರಲ್ಲಿ ಕೆನಡಾಕ್ಕೆ ವಲಸೆ ಹೋದವರು. ಆರು ವರ್ಷಗಳ ನಂತರ ಅವರು ಕೆನಡಾ ತಂಡದ ನಾಯಕರಾಗಿ ಈ ಆಫ್ ಸ್ಪಿನ್ನರ್ ಭಾರತಕ್ಕೆ ಆಡಲು ಬರುತ್ತಿದ್ದಾರೆ. 23 ವರ್ಷ ವಯಸ್ಸಿನ ಬಾಜ್ವಾ ಅವರು 2024ರ ಟಿ20 ತಂಡದಲ್ಲೂ ಆಡಿದ್ದರು.

ಜತಿಂದರ್ ಸಿಂಗ್: ಪಂಜಾಬಿನ ಲುಧಿಯಾನದಲ್ಲಿ ಜನಿಸಿದ ಜತಿಂದರ್ ಅವರು ಒಮಾನ್ ತಂಡಕ್ಕೆ ನಾಯಕರಾಗಿದ್ದಾರೆ. 36 ವರ್ಷ ವಯಸ್ಸಿನ ಈ ಆಫ್ಬ್ರೇಕ್ ಬೌಲರ್ ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿದ್ದರೂ, ಭಾರತದಲ್ಲಿ ಆಡುವ ಹಿಂದೆಂದೂ ಆಡುವ ಅವಕಾಶ ಪಡೆದಿರಲಿಲ್ಲ. ಹಾಲಿ ವಿಶ್ವಕಪ್ನಲ್ಲಿ ಒಮಾನ್ನ ಎಲ್ಲ ಪಂದ್ಯಗಳೂ ಶ್ರೀಲಂಕಾದಲ್ಲಿ ನಡೆಯುವ ಕಾರಣ ಈ ಬಾರಿಯೂ ಅವರಿಗೆ ಭಾರತದಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.