ವಡೋದರ: ಆರಂಭಿಕ ಬ್ಯಾಟರ್ ಬೆತ್ ಮೂನಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸ್ಪರ್ಧಾತ್ಮಕ ಮೊತ್ತ ಗಳಿಸಿತು.

ಕೋತಂಬಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪಿನ್ನರ್ ನಂದನಿ ಶರ್ಮಾ (44ಕ್ಕೆ2) ಮತ್ತು ಶಿನೆಲಿ ಹೆನ್ರಿ (35ಕ್ಕೆ3) ಅವರ ಪರಿಣಾಮಕಾರಿ ದಾಳಿಯಿಂದಾಗಿ ಗುಜರಾತ್ ತಂಡವು 59ಕ್ಕೆ4 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಈ ಹಂತದಲ್ಲಿ ಕ್ರೀಸ್ನಲ್ಲಿದ್ದ ಮೂನಿ (ಔಟಾಗದೇ 62; 51ಎ, 4X6) ಅವರ ದಿಟ್ಟ ಆಟವು ತಂಡಕ್ಕೆ ನೆರವಾಯಿತು. ಅದರಿಂದಾಗಿ ಗುಜರಾತ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 168 ರನ್ ಗಳಿಸಲು ಸಾಧ್ಯವಾಯಿತು.

ಮೂನಿ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ ಜಾರ್ಜಿಯಾ ವೆರ್ಹಾಮ್ (35; 25ಎ, 4X3, 6X1) ಅವರೊಂದಿಗೆ 61 ರನ್ ಸೇರಿಸಿದರು. ಇದು ತಂಡಕ್ಕೆ ಚೇತೋಹಾರಿಯಾಯಿತು. ಇಡೀ ಇನಿಂಗ್ಸ್ನಲ್ಲಿ ದಾಖಲಾದ ಏಕೈಕ ಸಿಕ್ಸರ್ ಅನ್ನು ಜಾರ್ಜಿಯಾ ಹೊಡೆದರು. ಅವರು ಹೆನ್ರಿ ಬೌಲಿಂಗ್ನಲ್ಲಿ ಲೌರಾ ವೊಲ್ವಾರ್ಟ್ ಅವರಿಗೆ ಕ್ಯಾಚಿತ್ತುನಿರ್ಗಮಿಸಿದರು.

ತಂಡದ ಪ್ರಮುಖ ಬ್ಯಾಟರ್ಗಳಾದ ಸೋಫಿ ಡಿವೈನ್ (6ರನ್), ಕನಿಕಾ ಅಹುಜಾ (6 ರನ್) ಹಾಗೂ ಅನುಷ್ಕಾ ಶರ್ಮಾ (16 ರನ್) ಅವರು ಬೇಗನೆ ನಿರ್ಗಮಿಸಿದರು. ನಾಯಕಿ ಆ್ಯಷ್ಲೆ ಗಾರ್ಡನರ್ ಹಾಗೂ ಭಾರತಿ ಫೂಲ್ಮಾಲಿ ಖಾತೆಯನ್ನೇ ತೆರೆಯಲಿಲ್ಲ.

ಏಳನೇ ವಿಕೆಟ್ ಜತೆಯಾಟದಲ್ಲಿ ಮೂನಿಯೊಂದಿಗೆ ಸೇರಿಕೊಂಡ ಕಶ್ವಿ ಗೌತಮ್ (18; 10ಎ) ಅವರು 38 ರನ್ ಸೇರಿಸಿದರು. ಕೊನೆಯ ಓವರ್ನಲ್ಲಿ ಕಶ್ವಿ ಅವರು ರನ್ಔಟ್ ಆದರು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್ಗಳಲ್ಲಿ 7ಕ್ಕೆ168 (ಬೆತ್ ಮೂನಿ ಔಟಾಗದೇ 62, ಜಾರ್ಜಿಯಾ ವೆರ್ಹಾಮ್ 35, ಕಶ್ವಿ ಗೌತಮ್ 18,ಶಿನೆಲಿ ಹೆನ್ರಿ 35ಕ್ಕೆ3, ನಂದನಿ ಶರ್ಮಾ 44ಕ್ಕೆ2, ಮಿನು ಮಣಿ 23ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.