ದಿನ ಭವಿಷ್ಯ: ಜನರ ಭಾವನೆಗಳಿಗೆ ತಕ್ಕಂತೆ ಪ್ರತಿಕ್ರಿಯಿಸುವುದನ್ನು ಅರಿತಿದ್ದೀರಿ
Published 2 ಫೆಬ್ರುವರಿ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಸ್ತುತ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವುದರಿಂದ ಬೀಗದಿರುವುದು ಒಳ್ಳೆಯದು. ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವ ಘಟನೆಗಳು ನಡೆಯಲಿವೆ. ವಿಶೇಷ ಆಸಕ್ತಿಯನ್ನು ತೋರುವಿರಿ.
02 ಫೆಬ್ರುವರಿ 2026, 19:30 IST
ವೃಷಭ
ಗೃಹನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಹೆಂಡತಿಯ ತವರು ಮನೆಯ ಕಡೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಬಂಧಗಳು ಗಟ್ಟಿಗೊಳ್ಳುತ್ತವೆ.
02 ಫೆಬ್ರುವರಿ 2026, 19:30 IST
ಮಿಥುನ
ಸಲಹೆಯನ್ನು ಎಷ್ಟು ಜನರಲ್ಲಿ ಕೇಳಿದರೂ ಕೊನೆಯ ತೀರ್ಮಾನ ಸ್ವಂತದ್ದಾಗಿರಲಿ. ಕೆಲಸವನ್ನು ಬೇಗ ಮುಗಿಸಬೇಕೆಂಬ ಆತುರವು ಅಚಾತುರ್ಯವನ್ನು ಉಂಟುಮಾಡುವುದು.
02 ಫೆಬ್ರುವರಿ 2026, 19:30 IST
ಕರ್ಕಾಟಕ
ಯಾವುದಾದರು ಕೆಲಸ ಮಾಡಿದರೆ ಲಾಭ ಬರುವುದಿಲ್ಲವೆಂದಾರೆ ಒಳ್ಳೆಯ ಕೆಲಸವಾದರೂ ಮಾಡುವುದಿಲ್ಲ. ಜನರ ಭಾವನೆಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದು ಅರಿತುಕೊಂಡಿದ್ದೀರಿ.
02 ಫೆಬ್ರುವರಿ 2026, 19:30 IST
ಸಿಂಹ
ವ್ಯವಹಾರ ರಂಗದಲ್ಲಿ ಆತ್ಮೀಯರ ಸಲಹೆ ಸ್ವೀಕರಿಸಿದ ಪರಿಣಾಮ ನಷ್ಟವು ತೋರಿಬರುವುದು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಕಾರಣದಿಂದ ತೂಕವನ್ನು ಕಡಿಮೆ ಮಾಡುಕೊಳ್ಳುವ ಸಾಹಸಕ್ಕೆ ಕೈಹಾಕುವಿರಿ.
02 ಫೆಬ್ರುವರಿ 2026, 19:30 IST
ಕನ್ಯಾ
ಪ್ರೀತಿ ಹಾಗೂ ನಂಬಿಕೆಯ ಪದಗಳಿಗೆ ಅರ್ಥವಿಲ್ಲ ಎಂದು ಒಂದು ಕ್ಷಣ ಎನಿಸಿದರೂ ತಕ್ಷಣ ಆ ನಿರ್ಧಾರಕ್ಕೆ ಬರಬೇಡಿ. ಇನ್ನಿತರೇ ವಿಷಯಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ.
02 ಫೆಬ್ರುವರಿ 2026, 19:30 IST
ತುಲಾ
ಐಷಾರಾಮಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆಯನ್ನು ವಹಿಸಿ. ಏನೇ ಸಮಸ್ಯೆಗಳಿದ್ದರೂ ಅದನ್ನು ಮಾತಿನ ಮುಖಾಂತರ ಬಗೆಹರಿಸಿಕೊಳ್ಳುವಿರಿ. ಸ್ವಂತ ವ್ಯವಹಾರಗಳು ಇದ್ದಲ್ಲಿ ಅವು ಲಾಭವನ್ನು ತಂದುಕೊಡುತ್ತವೆ.
02 ಫೆಬ್ರುವರಿ 2026, 19:30 IST
ವೃಶ್ಚಿಕ
ಬೇರೆಯವರ ಸಹಾಯ ಪಡೆಯದೆ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಲಾಭದಾಯಕ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾದವರು ಅದನ್ನು ನಿರ್ಲಕ್ಷಿಸಬೇಡಿ.
02 ಫೆಬ್ರುವರಿ 2026, 19:30 IST
ಧನು
ಮಾಡುವ ಕೆಲಸಗಳೆಲ್ಲವೂ ನಿಮಗೆ ಸರಿಯಾಗಿಯೇ ಕಂಡರೂ ಅವೆಲ್ಲವೂ ಸರಿಯಾಗಿಯೇ ಇರುವುದಿಲ್ಲ. ಕಷ್ಟ ನಷ್ಟಗಳನ್ನೇ ಯೋಚಿಸುತ್ತ ಕೂರದಿರಿ. ಅವೆಲ್ಲವೂ ಸದ್ಯದ ಮಟ್ಟಿಗೆ ಕ್ಷಣಿಕವೇ ಆಗಿರುತ್ತದೆ.
02 ಫೆಬ್ರುವರಿ 2026, 19:30 IST
ಮಕರ
ನಿರ್ಮಲವಾದ ಮನಸ್ಸಿನ ಕಾರಣಕ್ಕೆ ಎಷ್ಟೇ ಸಣ್ಣ ತಪ್ಪು ನಿಮ್ಮದಾದರೂ ಅಧಿಕವಾಗಿ ಪಶ್ಚಾತಾಪ ಪಡುತ್ತೀರಾ. ದಿನದ ಅಂತ್ಯದಲ್ಲಿ ಯಾರಿಂದಲಾದರು ಶುಭಸುದ್ದಿ ಕೇಳುವಿರಿ. ವೃತ್ತಿ ಬದುಕಿನಲ್ಲಿ ಗೆಲುವು ದೊರೆಯಲಿದೆ.
02 ಫೆಬ್ರುವರಿ 2026, 19:30 IST
ಕುಂಭ
ನೋಂದಾಯಿತ ದಾಖಲೆಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಿ. ಹಣಕಾಸಿನ ಅವಶ್ಯಕತೆಯನ್ನು ಪೂರೈಸುವ ಕಾರಣದಿಂದ ಅಧಿಕ ಸಮಯ ಕೆಲಸ ಮಾಡುವಿರಿ.
02 ಫೆಬ್ರುವರಿ 2026, 19:30 IST
ಮೀನ
ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ. ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುವಿರಿ.
02 ಫೆಬ್ರುವರಿ 2026, 19:30 IST