ಜಪಾನ್: 400 ವರ್ಷ ಹಳೆಯ ಬೊನ್ಸಾಯ್ ಮರ ಕಳವು

7
ನೀರುಣಿಸಿ ಕಾಳಜಿ ಮಾಡಿ: ಕಳ್ಳರಿಗೆ ಮಾಲಿಕ ಮನವಿ

ಜಪಾನ್: 400 ವರ್ಷ ಹಳೆಯ ಬೊನ್ಸಾಯ್ ಮರ ಕಳವು

Published:
Updated:
Prajavani

ಟೋಕಿಯೊ (ಎಎಫ್‌ಪಿ): ಉತ್ತರ ಟೊಕಿಯೊದ ಕವಗುಚಿಯಲ್ಲಿ ಮನೆಯ ಉದ್ಯಾನದಿಂದ, ಬೆಲೆಬಾಳುವ 7 ಬೊನ್ಸಾಯ್ ಮರಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ 400 ವರ್ಷ ಹಳೆಯದಾದ ಜುನಿಪರ್ ಮರವೂ ಸೇರಿದೆ. 

‘ಬೊನ್ಸಾಯ್ ಮರಗಳನ್ನು ಕದ್ದವರನ್ನು ನಾನು ದ್ವೇಷಿಸುತ್ತೇನೆ. ಆದರೆ ದಯವಿಟ್ಟು ಅವುಗಳಿಗೆ ನೀರುಣಿಸಿ ಕಾಳಜಿ ಮಾಡಿ ಎಂದು ಅವರಿಗೆ ಕೋರುತ್ತೇನೆ’ ಎಂದು ಉದ್ಯಾನದ ಮಾಲಿಕ ಸೈಜಿ ಲಿಮುರ ಫೇಸ್‌ಬುಕ್‌ನಲ್ಲಿ ಕಳ್ಳರಿಗೆ ಮನವಿ ಮಾಡಿದ್ದಾರೆ. ‌

ಐದು ತಲೆಮಾರಿನ ಇತಿಹಾಸ: ಲಿಮುರ ತಮ್ಮ ಮನೆಯ 5 ಸಾವಿರ ಚದರ ಅಡಿ ಉದ್ಯಾನದಲ್ಲಿ ಸುಮಾರು 3 ಸಾವಿರ ಬೊನ್ಸಾಯ್ ಮರಗಳನ್ನು ಪೋಷಿಸುತ್ತಿದ್ದು, ಇವರ ಕುಟುಂಬ ಐದು ತಲೆಮಾರಿನಿಂದ ಈ ಕಾರ್ಯದಲ್ಲಿ ತೊಡಗಿದೆ. 

‘ಈ ‍ಪುಟ್ಟ ಪುಟ್ಟ ಮರಗಳನ್ನು ನಾವು ಮಕ್ಕಳಂತೆ ಭಾವಿಸಿಪೋಷಿಸುತ್ತಿದ್ದೆವು. ಇವುಗಳು ಕಳವಾಗಿರುವುದು ನಮ್ಮ ದೇಹದ
ಅಂಗಗಳನ್ನೇ ಕತ್ತರಿಸಿದಂತೆ ಅನಿಸುತ್ತಿದೆ’ ಎಂದು ಲಿಮುರ ಪತ್ನಿ ಫುಯುಮಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.  ಜಪಾನ್‌ನಿಂದ ರಫ್ತಾಗುವ ಬೊನ್ಸಾಯ್ ಮರಗಳು ವಿದೇಶಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !