ಶನಿವಾರ, ಮೇ 21, 2022
25 °C

ರೈತರಿಂದ ಎಕರೆಗೆ ರೂ.9 ಲಕ್ಷ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ:  ಓರಿಯಂಟ್ ಸಿಮೇಂಟ್ ಕಂಪೆನಿಯವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡುತ್ತಿದ್ದಾರೆ. ರೈತರಿಂದ ಅಮೂಲ್ಯ ಭೂಮಿಯನ್ನು ಪಡೆಯುತ್ತಿರುವ ಕಂಪೆನಿ ಪ್ರತಿ ಎಕರೆ ಭೂಮಿಗೆ ರೂ,9 ಲಕ್ಷ ಬೆಲೆ ನೀಡಬೇಕು ಎಂದು ತಾಲ್ಲೂಕಿನ ಇಟಗಾ ಗ್ರಾಮದ ರೈತರು ಬೇಡಿಕೆ ಇಟ್ಟಿದ್ದಾರೆ.ತಾಲ್ಲೂಕಿನ ರಾವೂರು ಹತ್ತಿರ ಕಂಪೆನಿಯೊಂದರ ಸ್ಥಾಪನೆಗೆ ರೈತರಿಂದ ಪಡೆಯುತ್ತಿರುವ ಭೂಮಿಗೆ ಎಕರೆಗೆ ರೂ,9 ಲಕ್ಷ ಕೊಡುತ್ತಿದ್ದಾರೆ. ಸೇಡಂ ತಾಲ್ಲೂಕಿನಲ್ಲಿ ಬರುವ ಮಳಖೇಡದ ರಾಜೇಶ್ರೀ ಸಿಮೇಂಟ್ ಕಂಪೆನಿಯವರು ಸಹ ಎಕರೆಗೆ ರೂ,9 ಲಕ್ಷ ಬೆಲೆ ನೀಡಿ ರೈತರಿಂದ ಭೂಮಿ ಖರೀದಿ ಮಾಡುತ್ತಿದ್ದಾರೆ ಎಂದು ರೈತರು  ಹೇಳಿದ್ದಾರೆ.ಆದರೆ, ಓರಿಯಂಟ್ ಸಿಮೇಂಟ್ ಕಂಪೆನಿ ರೈತರಿಗೆ ಎಕರೆಗೆ ರೂ,3.50 ಲಕ್ಷ ಬೆಲೆ ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಗ್ರಾಮದ ರೈತರಾದ ಮಹಾದೇವ ಅಮಲಪ್ಪ ಡಿಗ್ಗಿ, ಮಹಾದೇವಪ್ಪ ದ್ಯಾವಪ್ಪ ಮುಗಟಿ, ಸೂರಪ್ಪ ದೇವಿಂದ್ರ ನಾಯ್ಕಲ್, ಇನ್ನಿತರರು ಆರೋಪಿಸಿದ್ದಾರೆ.ನಿವೃತ್ತ ಗ್ರಾಮ ಲೇಖಪಾಲಕರೊಬ್ಬರು ಕಂಪೆನಿ ಪರವಾಗಿ ಕೆಲಸ ಮಾಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ರೈತರಿಗೆ ಭೂಮಿ ಖರೀದಿ ಮಾಡಿಸುತ್ತಿದ್ದಾರೆ. ಇದರಿಂದ ರೈತರು ನಿವೃತ್ತ ಗ್ರಾಮ ಲೇಖಪಾಲಕರಿಂದ ಮೋಸಕ್ಕೆ ಒಳಗಾಗಿದ್ದಾರೆ ಎಂದು ಇಟಗಾ ರೈತರು ದೂರಿದ್ದಾರೆ.ಈ ಸಂಬಂಧ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿರುವ ರೈತರು, ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡುತ್ತಿರುವ ಕಂಪೆನಿ ಮತ್ತು ಸಹಕರಿಸುತ್ತಿರುವ ನಿವೃತ್ತ ಗ್ರಾಮ ಲೇಖಪಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಪ್ರತಿ ಎಕರೆ ಭೂಮಿಗೆ ಕಂಪೆನಿಯಿಂದ ರೂ.9 ಲಕ್ಷ ಬೆಲೆ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.ಕಂಪೆನಿ ಸ್ಥಾಪನೆಗಾಗಿ ಭೂಮಿ ಖರೀದಿ ಮಾಡುವ ಸಂಬಂಧ ಕಂಪೆನಿ ಆಡಳಿತ ರೈತರ ಸಭೆ ನಡೆಸಿಲ್ಲ. ರೈತರ ಸಮ್ಮುಖದಲ್ಲಿ ಬೆಲೆ ನಿಗಧಿ ಮಾಡಿಲ್ಲ. ರೈತರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಕಂಪೆನಿ ಆಡಳಿತ ದಲ್ಲಾಳಿಯನ್ನು ಇಟ್ಟುಕೊಂಡು ಅತ್ಯಂತ ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡುತ್ತಿದೆ. ಈಗಾಗಲೇ ಕೆಲವು ಜನ ರೈತರ ಭೂಮಿಯನ್ನು ಎಕರೆಗೆ ರೂ,3.50 ಲಕ್ಷದಂತೆ ಬೆಲೆ ನೀಡಿ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.ಭೂಮಿ ನೊಂದಣಿಯಾದ ರೈತರ ಕುಟುಂಬದ ಸದಸ್ಯರು ಓರಿಯಂಟ್ ಸಿಮೇಂಟ್ ಕಂಪೆನಿ ಆಡಳಿತ ನೀತಿಯನ್ನು ಖಂಡಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.