ಶನಿವಾರ, ಮೇ 8, 2021
26 °C

ಎಷ್ಟೇ ಅಲೆದಾಡಿದರೂ ಸೌಲಭ್ಯ ಶೂನ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: `ಮಡಿಲು ಕಿಟ್‌ಗಾಗಿ ನಾಲ್ಕುವರೆ ತಿಂಗಳಿಂದ ತಿರುಗುತ್ತಿದ್ದೇನೆ. ಇವತ್ತು ಬಾ, ನಾಳೆ ಬಾ ಎಂದು ಹಾರಿಕೆ ಮಾತುಗಳೇ ಆಡುತ್ತಿದ್ದಾರೆ ವಿನಾ ಕಿಟ್ ಮಾತ್ರ ಕೈಗೆ ಕೊಡುತ್ತಿಲ್ಲ. ದಿನಾ ಓಡಾಡಿ ಸುಸ್ತಾಗಿದ್ದೇನೆ. ಆದರೂ ಪ್ರಯೋಜನ ಮಾತ್ರ ಶೂನ್ಯ..~- ಇದು 13ಕಿ.ಮೀ ದೂರದ ಮಂಗಲಗಿ ಗ್ರಾಮದ ಗುರಾನ್‌ಬೀ ನರನಾಳ ಎಂಬ ಮಹಿಳೆಯ ನೋವಿನ ನುಡಿ.ನಾನು ಮೂರು ತಿಂಗಳಿಂದ ಓಡಾಡಿ ಸಾಕಾಗಿದೆ. ಗರ್ಭಿಣಿ ಇದ್ದಾಗ ಕೊಡಬೇಕಾದ ಹಣ ಕೊಡಲಿಲ್ಲ. ಹೆರಿಗೆಯಾಗಿ ಕಾಲ ಕಳೆದರೂ ಮಡಿಲು ಕಿಟ್ ಸಿಗುತ್ತಿಲ್ಲ. ಒಬ್ಬರಾದರೂ ಮೈಗೆ ಹಚ್ಕೊಂಡು ಮಾತಾಡುತ್ತಿಲ್ಲ.

 

ತಾಯಿ ಕಾರ್ಡ್ ಹಿಡ್ಕೊಂಡು ಸುಮ್ನೇನೆ ತಿರುಗುವಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ ಗೋಟೂರ್ ಚಾಂದಬೀ, ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲೇಂಡ್ರಿ ಎನ್ನುತ್ತಾಳೆ. ಹೀಗೆ ಒಬ್ಬರಿಬ್ಬರಲ್ಲದೇ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರು ತಮಗಾದ ನೋವು ಹೊರಹಾಕುತ್ತ ಬಾಯಿಗೆ ಬಂದಂತೆ ಹಿಡಿಶಾಪ ಮಳೆಗರೆಯುತ್ತಿದ್ದ ಸನ್ನಿವೇಶ ಕಾಣಿಸಿದ್ದು ಸೋಮವಾರ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಾಗಿಲು ಮುಂದೆ.ಸುತ್ತಲಿನಿಂದ ನಿತ್ಯ ಬರುವ ನೂರಾರು ರೋಗಿಗಳಿಗೆ ಚಿಕಿತ್ಸೆಗಿಂತ ಶಿಕ್ಷೆಯೇ ಮೇಲಾಗಿ ಜನರು ಪರದಾಡುತ್ತಿದ್ದಾರೆ. ಇಷ್ಟಾದರೂ ಮೇಲಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುತ್ತಾರೆ ಡಾ.ರಾಜೀವ್ ದಿಕ್ಷಿತ್ ಯುವ ಸೈನ್ಯದ ಕಾರ್ಯದರ್ಶಿ ಸೂರ್ಯಕಾಂತ ಕಟ್ಟಿಮನಿ, ಉಪಾಧ್ಯಕ್ಷ ಪ್ರಭು ಡೋಂಗರೆ, ದಶರಥ ಡೋಂಗರೆ, ಭೀಮರಾಯ ಮಲಘಾಣ ಅವರು. ಶೀಘ್ರದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ಆಸ್ಪತ್ರೆಗೆ ಬೀಗ ಜಡಿದು ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಯುವ ಸೈನ್ಯ ಎಚ್ಚರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.