ಪಾಕಿಸ್ತಾನ: ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ

7

ಪಾಕಿಸ್ತಾನ: ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ (ಸೆ.4) ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷದವರು ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸದಿದ್ದರೆ ಪಾಕಿಸ್ತಾನ ತೆಹ್ರಿಕ್‌ ಐ ಇನ್ಸಾಫ್‌ (ಪಿಟಿಐ) ಪಕ್ಷದ ಅಭ್ಯರ್ಥಿ ಆರಿಫ್‌ ಅಲ್ವಿ ಗೆಲ್ಲುವ ನಿರೀಕ್ಷೆಯಿದೆ. 

ಪಾಕಿಸ್ತಾನದ ಚುನಾವಣಾ ಆಯೋಗವು (ಇಸಿಪಿ) ಸೋಮವಾರ ಚುನಾವಣಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ನ್ಯಾಷನಲ್ ಅಸೆಂಬ್ಲಿ ಜೊತೆಗೆ ನಾಲ್ಕು ಪ್ರಾಂತ್ಯಗಳಲ್ಲಿ (ಅಸೆಂಬ್ಲಿ) ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸರ್ದಾರ್ ರಝಾ ಖಾನ್ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. 

ಹಾಲಿ ಅಧ್ಯಕ್ಷ ಮಾಮ್‌ನೂನ್‌ ಹುಸೇನ್‌ ಅವರ ಐದು ವರ್ಷಗಳ ಅವಧಿ ಸೆಪ್ಟೆಂಬರ್‌ 8ಕ್ಕೆ ಪೂರ್ಣಗೊಳ್ಳಲಿದೆ. ಅವರು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. 

ಪಾಕಿಸ್ತಾನ ಪೀಪಲ್ಸ್ ಪಕ್ಷದ ಚೌಧರಿ ಇಟ್ಜಾಜ್‌ ಎಹಸಾನ್‌ ಮತ್ತು ಜಮಾತ್‌ ಇ ಉಲೆಮಾ (ಎಫ್‌) ಮುಖ್ಯಸ್ಥ ಮೌಲಾನ ಫಜಲ್‌– ಉರ್‌– ರೆಹಮಾನ್‌ ಕಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !