ಗುರುವಾರ , ಮೇ 19, 2022
25 °C

ಅಫಜಲಪುರ ತಾ.ಪಂ. : ಮೊದಲ ಸಲ ಬಿಜೆಪಿ ಮಡಿಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಅಫಜಲಪುರ: ಇಲ್ಲಿನ ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೊದಲನೇ ಅವಧಿಗಾಗಿ ಅಧ್ಯಕ್ಷರಾಗಿ ಮಾಶಾಳದ ಕಾಶಿಬಾಯಿ ರೇವಣಸಿದ್ದ ನ್ಯಾಮಗೊಂಡ, ಉಪಾಧ್ಯಕ್ಷರಾಗಿ ಮಲ್ಲಾಬಾದಾದ ಶಿವಾನಂದ ಗಾಡಿ ಸಾಹುಕಾರ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದವು. ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಚುನಾವಣೆ ಅಧಿಕಾರಿ ಸಹಾಯಕ ಸಂಗಪ್ಪ ನಾಮಪತ್ರ ಪರಿಶೀಲಿಸಿ ನಾಮಪತ್ರ ಹಿಂದಕ್ಕೆ ಪಡೆಯಲು ಕಾಲಾವಕಾಶ ನೀಡಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ತಾಲ್ಲೂಕು ಪಂಚಾಯತಿಯಲ್ಲಿ 17 ಸ್ಥಾನಗಳ ಪೈಕಿ 11 ಬಿಜೆಪಿ, 5 ಕಾಂಗ್ರೆಸ್, 1 ಜೆಡಿಎಸ್ ಪಡೆದುಕೊಂಡಿದೆ. ಚುನಾವಣೆಯ ಸಮಯದಲ್ಲಿ 11 ಜನ ಬಿಜೆಪಿ ಸದಸ್ಯರು ಮತ್ತು ಒಬ್ಬರು ಜೆಡಿಎಸ್ ಸದಸ್ಯರು ಹಾಜರಾಗಿದ್ದರು. ಜೆಡಿಎಸ್ ಸದಸ್ಯರು ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್‌ನಿಂದ ಯಾವ ಸದಸ್ಯರು ಚುನಾವಣೆ ಸಮಯದಲ್ಲಿ ಭಾಗವಹಿಸಲಿಲ್ಲ. ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ ಇಸ್ಮಾಯಿಲ ಶಿರಹಟ್ಟಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸಂಪತ್ ಪಾಟೀಲ ಭಾಗವಹಿಸಿದ್ದರು.ನಂತರ ವಿಜಯೋತ್ಸವದಲ್ಲಿ ಮಾಜಿ ಶಾಸಕ ಎಂ.ವೈ.ಪಾಟೀಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡಿದ, ಮತೀನ ಪಟೇಲ, ಅರುಣಕುಮಾರ ಪಾಟೀಲ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಬಾಬಾಸಾಹೇಬಗೌಡ ಪಾಟೀಲ, ಮಲ್ಲಿಕಾರ್ಜುನ ನಿಂಗದಳ್ಳಿ, ಸಿದ್ಧು ಸಾಲಿಮನಿ, ಮಡಿವಾಳಪ್ಪ ಗೋಳಸಾರ, ರಾಜು ಜಿಡ್ಡಗಿ, ಶಿವು ಪ್ಯಾಟಿ, ಭೀಮಾಶಂಕರ ಬುಯ್ಯಾರ, ಗುಂಡಪ್ಪ ಹೊಸಮನಿ, ಶ್ರೀಶೈಲ ಚಿನ್ನಮಳ್ಳಿ ಮುಂತಾದವರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.