ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಹೆಚ್ಚಿದ ಜಾಗೃತಿಯಿಂದಾಗಿ ಚಿಯಾ ಬೀಜಗಳು ದೈನಂದಿನ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ಚಿಕ್ಕ ಬೀಜಗಳು ದೇಹದ ತೂಕ ಇಳಿಕೆ, ಜೀರ್ಣಕ್ರಿಯೆ ಸುಧಾರಿಸುವುದು ಸೇರಿದಂತೆ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತವೆ. ಆದರೆ ಕೆಲವರಿಗೆ ಚಿಯಾ ಬೀಜಗಳು ದೇಹಕ್ಕೆ ಒಗ್ಗಿಕೊಳ್ಳುವುದಿಲ್ಲ. ಹೀಗಾಗಿ ಅಂತವರು ಚಿಯಾ ಬೀಜ ಸೇವಿಸುವಾಗ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯ.
.ಇನ್ಸುಲಿನ್ಗೆ 104 ವರ್ಷ: ಜೀವರಕ್ಷಕ ಜೀವನಪರ್ಯಂತ ಬೇಕೇ ಎಂಬುದರ ಸತ್ಯ, ಮಿಥ್ಯ.ಉಪವಾಸ ಒಳ್ಳೆಯದೇ? ಯಾರೆಲ್ಲಾ ಉಪವಾಸ ಮಾಡಬಹುದು...
1. ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಇರುವವರು ಅವುಗಳನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆ ಉಬ್ಬರ, ಅಥವಾ ಹೊಟ್ಟೆ ನೋವಿನಂತಹ ಸಮಸ್ಯೆ ಎದುರಾಗಬಹುದು. ಆದ್ದರಿಂದ ಇಂತಹವರು ಕಡಿಮೆ ಪ್ರಮಾಣದಿಂದ ಆರಂಭಿಸುವುದು ಒಳಿತು.

2. ರಕ್ತದೊತ್ತಡ ಕಡಿಮೆ ಮಾಡುವ ಔಷಧಗಳು ಅಥವಾ ರಕ್ತವನ್ನು ತೆಳ್ಳಗಾಗಿಸುವ ಔಷಧಗಳನ್ನು ಸೇವಿಸುವವರು ಚಿಯಾ ಬೀಜಗಳನ್ನು ನಿಯಮಿತವಾಗಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ಚಿಯಾ ಬೀಜಗಳಲ್ಲಿರುವ ಒಮೆಗಾ–3 ಫ್ಯಾಟಿ ಆ್ಯಸಿಡ್ಗಳು ರಕ್ತದೊತ್ತಡವನ್ನು ಇನ್ನಷ್ಟು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.

3. ಅಲರ್ಜಿಯ ಸಮಸ್ಯೆ ಇದ್ದರೆ ಚಿಯಾ ಬೀಜಗಳನ್ನು ಸೇವಿಸಿದ ನಂತರ ಚರ್ಮದ ಉರಿ, ತುರಿಕೆ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸೇವನೆ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

4. ಗಂಟಲು ಸಮಸ್ಯೆ ಅಥವಾ ನುಂಗುವಲ್ಲಿ ತೊಂದರೆ ಇರುವವರು ಚಿಯಾ ಬೀಜಗಳನ್ನು ಯಾವತ್ತೂ ಒಣಗಿದ ಸ್ಥಿತಿಯಲ್ಲಿ ಸೇವಿಸಬಾರದು. ನೆನೆಸದೇ ಸೇವಿಸಿದ ಚಿಯಾ ಬೀಜಗಳು ನೀರನ್ನು ಹೀರಿಕೊಂಡು ಗಂಟಲಿನಲ್ಲಿ ಅಂಟಿಕೊಳ್ಳುವ ಅಪಾಯವಿದೆ.

5. ಅದೇ ರೀತಿಯಲ್ಲಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಯಾವುದೇ ಹೊಸ ಆಹಾರವನ್ನು ತಮ್ಮ ದೈನಂದಿನ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಸರಿಯಾದ ರೀತಿಯಲ್ಲಿ ಸೇವಿಸಿದರೆ ಚಿಯಾ ಬೀಜಗಳು ದೇಹಕ್ಕೆ ಅಪಾರ ಲಾಭಗಳನ್ನು ನೀಡುತ್ತವೆ.

ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಣೆ, ತೂಕ ನಿಯಂತ್ರಣ, ಹೃದಯ ಆರೋಗ್ಯದ ಸುಧಾರಣೆ, ರಕ್ತದಲ್ಲಿನ ಸಕ್ಕರೆ ಮಟ್ಟದ ಸಮತೋಲನ ಮತ್ತು ಎಲುಬುಗಳಿಗೆ ಬಲ ದೊರಕುತ್ತದೆ.

ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಮ್ಯಾಗ್ನೀಷಿಯಂ ಮತ್ತು ಒಮೆಗಾ–3 ಫ್ಯಾಟಿ ಆ್ಯಸಿಡ್ಗಳು ಸಮೃದ್ಧವಾಗಿವೆ. ಒಟ್ಟಾರೆ, ಚಿಯಾ ಬೀಜಗಳು ಆರೋಗ್ಯಕ್ಕೆ ಉತ್ತಮವಾದ ಆಹಾರವಾದರೂ, ಸರಿಯಾದ ಪ್ರಮಾಣ, ಸರಿಯಾದ ವಿಧಾನ ಮತ್ತು ವೈಯಕ್ತಿಕ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೇವಿಸುವುದು ಅತ್ಯಂತ ಮುಖ್ಯ. ಎಚ್ಚರಿಕೆಯಿಂದ ಸೇವಿಸಿದರೆ ಚಿಯಾ ಬೀಜಗಳು ಆರೋಗ್ಯದ ಉತ್ತಮ ಸಂಗಾತಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.