ಗುರುವಾರ , ಡಿಸೆಂಬರ್ 12, 2019
24 °C

ಪ್ರೊ ಕಬಡ್ಡಿ: ಮುಂಬಾ ಜಯಭೇರಿ

Published:
Updated:

ವಿಶಾಖಪಟ್ಟಣ: ಈ ಬಾರಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ  ಮಿಂಚಿನ ಸಂಚಲನ ಮೂಡಿಸುತ್ತಿರುವ ಸಿದ್ಧಾರ್ಥ್ ದೇಸಾಯಿ ಮಂಗಳವಾರ ಮತ್ತೊಮ್ಮೆ ಮಿಂಚಿದರು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿದ್ಧಾರ್ಥ್ ಅವರು ಗಳಿಸಿದ 12 ಅಂಕಗಳ ಬಲದಿಂದ ಯು ಮುಂಬಾ ತಂಡವು 44–19 ರಿಂದ ದಬಂಗ್ ಡೆಲ್ಲಿ ತಂಡದ ವಿರುದ್ಧ ಗೆದ್ದಿತು. ಮುಂಬಾ ತಂಡವು ಗಳಿಸಿದ ಒಟ್ಟು 23 ರೇಡಿಂಗ್‌ ಪಾಯಿಂಟ್‌ಗಳಲ್ಲಿ ಸಿದ್ಧಾರ್ಥ್ ಅವರದ್ದೇ ಸಿಂಹಪಾಲು. ಅವರಿಗೆ ಉತ್ತಮ ಜೊತೆ ನೀಡಿದ ರೋಹಿತ್ ಬಲಿಯಾನ್ ಎಂಟು, ಅರ್ಜುನ್ ದೇಶವಾಲ್ ನಾಲ್ಕು ಅಂಕಗಳನ್ನು ರೇಡಿಂಗ್‌ನಲ್ಲಿ ಗಳಿಸಿದರು. ಫಜಲ್ ಅತ್ರಾಚಲಿ ಅವರು ಟ್ಯಾಕಲ್‌ನಲ್ಲಿ ಮಿಂಚಿದರು. ಒಟ್ಟು ಐದು ಅಂಕಗಳನ್ನು ಗಳಿಸಿದರು. ಸುರೀಂದರ್ ಸಿಂಗ್ ನಾಲ್ಕು ಪಾಯಿಂಟ್ಸ್‌ ಪಡೆದರು.

 ದಬಂಗ್ ತಂಡದ ಶಬೀರ್ ಬಾಪು ರೇಡಿಂಗ್‌ನಲ್ಲಿ ಐದು; ಸತ್ಪಾಲ್ ಟ್ಯಾಕಲ್‌ನಲ್ಲಿ ಐದು ಅಂಕ ಬಾಚಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು