ಗುರುವಾರ , ಸೆಪ್ಟೆಂಬರ್ 23, 2021
27 °C
ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಬಡ ರೈತ

ರಕ್ತದ ಕ್ಯಾನ್ಸರ್‌ಗೆ ತುತ್ತಾದ ಕರುಳಿನ ಕುಡಿ ಉಳಿಸಿಕೊಳ್ಳಲು ಹೆತ್ತವರ ಸೆಣಸಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಜ್ಜವಾರದ ರೈತ ಆನಂದ್ –ಅಕ್ಷತಾ ದಂಪತಿಯ ಏಕೈಕ ಪುತ್ರ 11 ವರ್ಷದ ವಿಷ್ಣು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಬಡ ಕುಟುಂಬ ಇದೀಗ ದಾನಿಗಳ ನೆರವು ಎದುರು ನೋಡುತ್ತಿದೆ.

ರಕ್ತದ ಕ್ಯಾನ್ಸರ್‌ನಿಂದಾಗಿ ವಿಷ್ಣುವಿನ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆ ಕುಂಠಿತಗೊಂಡಿದ್ದು, ಪರಿಣಾಮ ಆಗಾಗ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಾನೆ. ಕಳೆದ ಐದು ತಿಂಗಳಿಂದ ಮಗನನ್ನು ಹಿಂಡಿ ಹಿಪ್ಪೆ ಮಾಡಿದ ಕ್ಯಾನ್ಸರ್‌ ವಿರುದ್ಧ ಸೆಣಸುತ್ತಿರುವ ಈ ಬಡ ದಂಪತಿ, ಈಗಾಗಲೇ ಮಗನ ಚಿಕಿತ್ಸೆಗಾಗಿ ತಮ್ಮ 30 ಗುಂಟೆ ಜಮೀನು ಮಾರಾಟ ಮಾಡಿದ್ದು, ಪರಿಚಯದ ಅನೇಕರ ಬಳಿ ಸಾಲ ಮಾಡಿ ₹17 ಲಕ್ಷ ಖರ್ಚು ಮಾಡಿದ್ದಾರೆ.

ವಿಷ್ಣುವಿನ ಕಾಯಿಲೆಗೆ ದೇಹದಲ್ಲಿರುವ ರೋಗ ಪೀಡಿತ ಅಸ್ಥಿಮಜ್ಜೆಯನ್ನು ತೆಗೆದು ಹಾಕಿ, ಆರೋಗ್ಯವಂತ ಮತ್ತು ರೋಗಿಗೆ ಸರಿ ಹೊಂದುವ ಅಸ್ಥಿಮಜ್ಜೆಯನ್ನು ಕಸಿ ಮಾಡುವ ಶಸ್ತ್ರಚಿಕಿತ್ಸೆ ನಡೆಸಬೇಕು. ಆನಂದ್‌ ಅವರ ಅಸ್ಥಿಮಜ್ಜೆ ಮಗನಿಗೆ ನೀಡಲು ಹೊಂದಾಣಿಕೆ ಆಗಿದೆ. ಆದರೆ ಆ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯರು ಸುಮಾರು ₹30 ಲಕ್ಷದ ಖರ್ಚಿನ ಅಂದಾಜು ಮಾಡಿದ್ದಾರೆ.

ಈಗಾಗಲೇ ಮಗನ ಚಿಕಿತ್ಸೆಗೆ ಲಕ್ಷಗಟ್ಟಲೇ ದುಡ್ಡು ಕಳೆದುಕೊಂಡಿರುವ ಆನಂದ್ ಅವರ ಕುಟುಂಬ ಇದೀಗ ತಮ್ಮ ಕರುಳಿನ ಏಕೈಕ ಕುಡಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

ಇವರ ಪರಿಸ್ಥಿತಿ ಅರಿತ ರಾಮಯ್ಯ ಆಸ್ಪತ್ರೆಯ ಸಿಬ್ಬಂದಿ ಸಹ ವಿಷ್ಣುವಿನ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ದಾನಿಗಳ ನೆರವು ಕೋರಿ ಮಾನವಿಯತೆ ಮೆರೆದಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತರು ವಿಷ್ಣುವಿನ ಚಿಕಿತ್ಸೆಗಾಗಿ ಆರ್ಥಿಕವಾಗಿ ನೆರವಾದರೆ ಬಡ ರೈತನ ಕುಟುಂಬದ ಕಣ್ಣೀರು ಒರೆಸಿದಂತಾಗುತ್ತದೆ.

ಕೈಲಾದ ಸಹಾಯ ಮಾಡಿ 
ವಿಷ್ಣುವಿನ ಚಿಕಿತ್ಸೆಗೆ ಸಹಾಯ ಮಾಡಬಯಸುವರು ಆನಂದ್‌ ಅವರ ಯೆಸ್ ಬ್ಯಾಂಕ್‌ (8080811056591) (ಐಎಫ್‌ಎಸ್‌ಸಿ ಕೋಡ್‌: YESB0CMSNOC) ಖಾತೆಗೆ ಹಣ ಸಂದಾಯ ಮಾಡಬಹುದು. ಮೊಬೈಲ್ ಆ್ಯಪ್‌ಗಳ ಮೂಲಕ ಸಹಾಯ ಮಾಡುವವರು givetoanandfund2@yesbankltd ಈ ವಿಳಾಸಕ್ಕೆ ಹಣ ಕಳುಹಿಸಬಹುದು. ರಮೇಶ್ ಅವರ ಸಂಪರ್ಕ ಸಂಖ್ಯೆ: 9945026976.

**

ಈ ಎರಡು ಲಿಂಕ್ ಮೂಲಕ ನೆರವಾಗಿ:

https://milaap.org/fundraisers/VijayNarasimha?utm_source=whatsapp&utm_medium=fundraisers-title

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು