ಆಪರೇಷನ್‌ ಕಮಲ ಗೊತ್ತಿಲ್ಲ– ರಮೇಶ್‌ಕುಮಾರ್‌

7

ಆಪರೇಷನ್‌ ಕಮಲ ಗೊತ್ತಿಲ್ಲ– ರಮೇಶ್‌ಕುಮಾರ್‌

Published:
Updated:

ಕೋಲಾರ: ‘ಯಾರಿಗೆ ಎಲ್ಲಿ ಯಾವ ಆಪರೇಷನ್ ನಡೆಯುತ್ತಿದೆಯೋ ನನಗೆ ಗೊತ್ತಿಲ್ಲ. ಆಪರೇಷನ್‌ ಕಮಲನೂ ಗೊತ್ತಿಲ್ಲ, ಸಂಪಿಗೆಯೂ ತಿಳಿದಿಲ್ಲ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್‌ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾರಿಗೆ ಏನು ಕಾಯಿಲೆಯೋ, ಅದೆಂತಹ ಆಪರೇಷನ್ನೋ ಗೊತ್ತಿಲ್ಲ. ಆಪರೇಷನ್‌ ಕೆಳಗೆ ಮಾಡಿದ್ದಾರೋ ಅಥವಾ ಮೇಲೆ ಮಾಡಿದ್ದಾರೋ ಒಂದೂ ತಿಳಿದಿಲ್ಲ’ ಎಂದರು.

‘ನನಗೆ ಪಕ್ಷವಿಲ್ಲ, ರಾಜಕೀಯವಾಗಿ ಯಾವ ಬೆಳವಣಿಗೆಯೂ ಗಮನಕ್ಕೆ ಬಂದಿಲ್ಲ. ಸಭಾಧ್ಯಕ್ಷ ಸ್ಥಾನದ ಘನತೆಗೆ ಕುತ್ತು ಬಾರದಂತೆ ಪ್ರಜ್ಞಾಪೂರ್ವಕವಾಗಿ ಆತ್ಮಸಾಕ್ಷಿಯಂತೆ ಕರ್ತವ್ಯ ನಿರ್ವಹಿಸುತ್ತೇನೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನಾನು ಪ್ರತಿ ಕ್ಷಣವೂ ಆ ಸ್ಥಾನದ ಗೌರವ ಕಾಪಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ನಾನು ದೇಶ ಬಿಟ್ಟು ಹೋಗಿಲ್ಲ, ಚುನಾವಣೆ ಸಂದರ್ಭದಲ್ಲಿ ನೀಡಿರುವ ನನ್ನ ಊರಿನ ವಿಳಾಸದಲ್ಲೇ ಇದ್ದೇನೆ. ನನಗೆ ಮೊಬೈಲ್ ಮತ್ತು ಸ್ಥಿರ ದೂರವಾಣಿಯಿದೆ. ರಾಜೀನಾಮೆ ನೀಡುವ ವಿಚಾರವಾಗಿ ಯಾವುದೇ ಶಾಸಕರು ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ ಮತ್ತು ಸಮಯಾವಕಾಶ ಸಹ ಕೇಳಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ನ ಕೆಲ ಶಾಸಕರು ಮುಂಬೈಗೆ ಹೋಗಿದ್ದಾರಲ್ಲಾ ಎಂದು ಸುದ್ದಿಗಾರರು ಕೇಳಿದಾಗ, ‘ಅವರು ಎಲ್ಲಾದರೂ ಹೋಗಲಿ, ನನಗೂ ಅದಕ್ಕೂ ಸಂಬಂಧವಿಲ್ಲ. ಸಾರ್ವಜನಿಕ ಜೀವನದಲ್ಲಿ ಮರ್ಯಾದೆಯಿಂದ ಬದುಕುತ್ತಿದ್ದೇನೆ. ಸ್ಪೀಕರ್ ಶಾಸಕರ ಕೈಗೆ ಸಿಗುತ್ತಿಲ್ಲ ಎಂಬುದು ಮಾಧ್ಯಮದವರ ಸೃಷ್ಟಿ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !