ಮಂಗಳವಾರ, ಸೆಪ್ಟೆಂಬರ್ 21, 2021
25 °C

ಬರ ಪರಿಶೀಲನೆಗೆ ಬಂದ ಸಚಿವರ ಕಾರುಗಳಿಗೆ ‘ಖಾತ್ರಿ’ ಕಾರ್ಮಿಕರಿಂದ ಘೇರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ವಿವಿಧೆಡೆ ಬರಗಾಲ ಪರಿಸ್ಥಿತಿ ಪರಿಶೀಲಿಸಲು ಬಂದಿದ್ದ ರಾಜ್ಯ ಸಚಿವ ಸಂಪುಟದ ಉಪಸಮಿತಿಯಲ್ಲಿರುವ ಸಚಿವರ ಕಾರುಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರು ಘೇರಾವ್‌ ಹಾಕಿದ ಪ್ರಸಂಗ ಸಿಂಧನೂರು ತಾಲ್ಲೂಕಿನ ತುರ್ವಿಹಾಳದಲ್ಲಿ ಗುರುವಾರ ನಡೆಯಿತು.

ಕೂಡಲೇ ಕಾರಿನಿಂದ ಹೊರಬಂದ ಸಚಿವ ಬಂಡೆಪ್ಪ ಕಾಶೆಂಪುರ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ, ಶಾಸಕ ಪ್ರತಾಪಗೌಡ ಪಾಟೀಲ ಅವರು ಕಾರ್ಮಿಕರ ಅಹವಾಲು ಆಲಿಸಿದರು.

‘ಕೂಲಿ ಕೆಲಸಕ್ಕಾಗಿ ದಿನಕ್ಕೆ ₹ 250 ಬದಲಿಗೆ ₹ 80 ಕೂಲಿ ಹಣ ಪಾವತಿಸುತ್ತಿದ್ದಾರೆ. ಕೆಲಸ ಮಾಡಿದ್ದರೂ ಅಧಿಕಾರಿಗಳು ಕೂಲಿಯನ್ನು ಸರಿಯಾಗಿ ನೀಡುತ್ತಿಲ್ಲ. ಬೆಂಗಳೂರುನಂತಹ ಪ್ರದೇಶಗಳಲ್ಲಿ ಖಾಸಗಿಯವರು ಕೆಲಸ ಕೊಟ್ಟು ಸರಿಯಾಗಿ ಕೂಲಿ ನೀಡುತ್ತಾರೆ. ಆದರೆ, ಗ್ರಾಮದಲ್ಲಿ ದುಡಿದವರಿಗೆ ಅಧಿಕಾರಿಗಳೇ ಮೋಸ ಮಾಡಿದರೆ ಜೀವನ ಹೇಗೆ ನಡೆಸಬೇಕು’ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ  ಕೂಡಲೇ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಬಿ.ಶರತ್‌ ಅವರಿಗೆ ಸೂಚನೆ ನೀಡಿದ ಸಚಿವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯ ಅಮಾನತಿಗೆ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್‌ಗೆ ನಿರ್ದೇಶನ ನೀಡಿದರು.

ಬರ ವೀಕ್ಷಿಸಲು ಬಂದಿದ್ದ ಸಂಪುಟ ಉಪಸಮಿತಿಯಲ್ಲಿ ಸಚಿವರಾದ ರಾಜಶೇಖರ್‌ ಪಾಟೀಲ ಹಾಗೂ ಇ. ತುಕಾರಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು