ಆದಾಯಕ್ಕಾಗಿ ಕತ್ತೆಗಳ ಮೊರೆ ಹೋದ ಪಾಕಿಸ್ತಾನ!

7
ಮೂರು ವರ್ಷಗಳಲ್ಲಿ 80 ಸಾವಿರ ಕತ್ತೆಗಳನ್ನು ಚೀನಾಗೆ ರಫ್ತು ಮಾಡುವ ಗುರಿ

ಆದಾಯಕ್ಕಾಗಿ ಕತ್ತೆಗಳ ಮೊರೆ ಹೋದ ಪಾಕಿಸ್ತಾನ!

Published:
Updated:
Prajavani

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಈಗ ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾಗಿದೆ.

ಕತ್ತೆಗಳ ವ್ಯಾಪಾರದಿಂದ ದೊರೆಯುವ ವಿದೇಶಿ ವಿನಿಯಮದ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಉದ್ದೇಶವಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ ಮೂರನೇ ರಾಷ್ಟ್ರ ಪಾಕಿಸ್ತಾನ. ಅಂದಾಜು 50 ಲಕ್ಷ ಕತ್ತೆಗಳು ಈ ದೇಶದಲ್ಲಿವೆ ಎಂದು ಅಂದಾಜಿಸಲಾಗಿದೆ.  ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನ ಪಡೆದಿದೆ.

ಮೊದಲ ಮೂರು ವರ್ಷಗಳಲ್ಲಿ ಸುಮಾರು 80 ಸಾವಿರ ಕತ್ತೆಗಳನ್ನು ಚೀನಾಗೆ ರಫ್ತು ಮಾಡಲು ಪಾಕಿಸ್ತಾನ ಉದ್ದೇಶಿಸಿದೆ.

ಚೀನಾದಲ್ಲಿ ಕತ್ತೆಗಳ ಚರ್ಮಕ್ಕೆ ಅಪಾರ ಬೇಡಿಕೆ ಇದೆ. ಕತ್ತೆಗಳ ಚರ್ಮದಿಂದ ತಯಾರಿಸುವ ‘ಜೆಲಿಟಿನ್‌’ ಅನ್ನು  ಸಾಂಪ್ರದಾಯಿಕ ಔಷಧಗಳ ತಯಾರಿಕೆಗೆ ಬಳಸಲಾಗುತ್ತಿದೆ. ಜೆಲಿಟಿನ್‌ನಲ್ಲಿ ಔಷಧೀಯ ಗುಣಗಳಿದ್ದು, ರಕ್ತ ಸಂಚಾರ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗಿದೆ.

 ಚೀನಾ ಕಂಪನಿಗಳು ಪಾಕಿಸ್ತಾನದಲ್ಲಿ ಕತ್ತೆಗಳಿಗೆ ಸಂಬಂಧಿಸಿದ ಫಾರ್ಮ್‌ಗಳನ್ನು ಆರಂಭಿಸಲು ಆಸಕ್ತಿವಹಿಸಿವೆ ಮತ್ತು ವಿದೇಶಿ ಕಂಪನಿಗಳು 3 ಬಿಲಿಯನ್‌ ಡಾಲರ್‌ (₹21438.51 ಕೋಟಿ) ಬಂಡವಾಳ ಹೂಡಲು ಸಿದ್ಧವಾಗಿವೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಕತ್ತೆಗಳ ರಫ್ತು ಹೆಚ್ಚಿಸಲು ಸರ್ಕಾರ ಕತ್ತೆಗಳ ಫಾರ್ಮ್‌ಗಳ ಆರಂಭಿಸಲು ಆದ್ಯತೆ ನೀಡುತ್ತಿದೆ. ಇದು ದೇಶದಲ್ಲಿ ಪ್ರಥಮ ಪ್ರಯೋಗವಾಗಿದೆ. ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ದೆರಾ ಇಸ್ಮಾಯಿಲ್‌ ಖಾನ್‌ ಮತ್ತು ಮನ್ಸೆಹ್ರಾನಲ್ಲಿ ಕತ್ತೆಗಳ ಫಾರ್ಮ್‌ಗಳನ್ನು ಆರಂಭಿಸಲು ಈಗಾಗಲೇ ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !