ಅವತ್ತು ಸಿಕ್ಸರ್‌ ಹೊಡೆಯುತ್ತೇನೆ ಎಂಬ ಆತ್ವವಿಶ್ವಾಸ ಇತ್ತು: ದಿನೇಶ್ ಕಾರ್ತಿಕ್

7
ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸಿಂಗಲ್ ನಿರಾಕರಣೆಗೆ ಕಾರಣ ಹೇಳಿದ ಕ್ರಿಕೆಟಿಗ

ಅವತ್ತು ಸಿಕ್ಸರ್‌ ಹೊಡೆಯುತ್ತೇನೆ ಎಂಬ ಆತ್ವವಿಶ್ವಾಸ ಇತ್ತು: ದಿನೇಶ್ ಕಾರ್ತಿಕ್

Published:
Updated:
Prajavani

ನವದೆಹಲಿ: ‘ಅವತ್ತು ನಾನು ಸಿಕ್ಸರ್‌ ಹೊಡೆಯುತ್ತೇನೆ ಎಂಬ ಆತ್ವವಿಶ್ವಾಸ ಇತ್ತು. ಆದ್ದರಿಂದ ಸಿಂಗಲ್ ರನ್ ಪಡೆಯಲು ನಿರಾಕರಿಸಿ, ಕೃಣಾಲ್ ಅವರನ್ನು ಕ್ರೀಸ್‌ಗೆ ಮರಳಿ ಕಳಿಸಿದ್ದೆ’ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಹ್ಯಾಮಿಲ್ಟನ್‌ನಲ್ಲಿ  ಹೋದ ಭಾನುವಾರ ನಡೆದಿದ್ದ ಟ್ವೆಂಟಿ–20 ಪಂದ್ಯದ ಕೊನೆಯ ಓವರ್‌ನಲ್ಲಿ  16 ರನ್‌ಗಳ ಅಗತ್ಯವಿತ್ತು. ಆಗ ದಿನೆಶ್ ಮತ್ತು ಕೃಣಾಲ್ ಬ್ಯಾಟಿಂಗ್ ಮಾಡುತ್ತಿದ್ದರು. ದಿನೇಶ್ ಉತ್ರಮವಾಗಿಯೇ ಆಡಿದ್ದರು. ಆದರೆ, ಆ ಓವರ್‌ನ ಒಂದು ಎಸೆತದಲ್ಲಿ ಒಂಟಿ ರನ್ ಪಡೆಯುವ ಅವಕಾಶವನ್ನು ದಿನೇಶ್ ಬಿಟ್ಟಿದ್ದರು. ಭಾರತ ಸೋತಿತ್ತು. ಅದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ದಿನೇಶ್ ಅವರನ್ನು ಟೀಕಿಸಿದ್ದರು. ಈ ಕುರಿತು ದಿನೇಶ್ ಬುಧವಾರ ಮಾತನಾಡಿದರು.

‘ಕೆಲವು ಬಾರಿ ನಾವು ಅಂದುಕೊಂಡಂತೆ ಬೌಂಡರಿ, ಸಿಕ್ಸರ್‌ ಹೊಡೆಯುತ್ತೇವೆ. ಕೆಲವು ಬಾರಿ ಬೌಲರ್‌ಗಳು ಮೇಲುಗೈ ಸಾಧಿಸುತ್ತಾರೆ. ಅಲ್ಲಿ ಆಗಿದ್ದು ಹಾಗೆಯೇ ನ್ಯೂಜಿಲೆಂಡ್‌ನ ಟಿಮ್ ಸೌಥಿ ಮೇಲುಗೈ ಸಾಧಿಸಿದರು’ ಎಂದು ದಿನೇಶ್ ಹೇಳಿದರು.

ಬರಹ ಇಷ್ಟವಾಯಿತೆ?

 • 28

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !