ಶುಕ್ರವಾರ, ಮೇ 27, 2022
22 °C

ಭಜನಾಮಂಡಳಿಗಳಿಗೆ ಸ್ಪರ್ಧೆ: ಪಲಿಮಾರು ಮಠಾಧೀಶರ ಶ್ಲಾಘನೆ. ಜ್ಞಾನವೃದ್ಧಿ, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ನಿರಂತರ ಭಜನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಜನಾ ಮಂಡಳಿಗಳು ಸಾಧನೆಯ ಹಾದಿಯಲ್ಲಿ ಸಾಗಿವೆ ಎಂದು ಶ್ಲಾಘಿಸಿದ ಉಡುಪಿಯ ಪಲಿಮಾರು ಮಠದ ಪೀಠಾಧಿಪತಿ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಗಳು, ಇಲ್ಲಿನ ವಿದ್ವಾಂಸರು, ವಿಪ್ರ ಸಮಾಜ ಹಾಗೂ ಭಜನಾ ಮಂಡಳಿಗಳು ಇಂಥ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದು ನುಡಿದರು.ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ವಿಪ್ರ ಸಮಾಜದ ಜಂಟಿ ಆಶ್ರಯದಲ್ಲಿ ಗುಲ್ಬರ್ಗದ ಕೃಷ್ಣಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ಭಜನಾಮಂಡಳಿಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಭಜನಾ ಮಂಡಳಿಗಳಿಗೆ ಸ್ಪರ್ಧೆ ಆಯೋಜಿಸುವ ಮೂಲಕ ಎಲ್ಲರ ಜ್ಞಾನವೃದ್ಧಿ, ಪ್ರತಿಭಾ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿರುವುದು ಸ್ವಾಗತಾರ್ಹ. ತಿರುಪತಿ ತಿರುಮಲ ದೇವಸ್ಥಾನ ಇಂಥ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದು ಶ್ರೀಗಳು ನುಡಿದರು.ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ನವಲಿ ಕೃಷ್ಣಾಚಾರ್ಯ, ದಾಸ ಸಾಹಿತ್ಯ ಪ್ರಾಜಕ್ಟ್‌ನ ಜಿಲ್ಲಾ ಮಾರ್ಗದರ್ಶಕ ಡಾ. ಶ್ರೀನಿವಾಸ ಪದಕಿ, ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಪಂ. ಗೋಪಾಲಾಚಾರ್ಯ ಅಕಮಂಚಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ದಾಸ ಸಾಹಿತ್ಯ ಪ್ರೊಜೆಕ್ಟ್‌ನ ವಿಶೇಷಾಧಿಕಾರಿ ಪಿ.ಆರ್.ಆನಂದತೀರ್ಥಾಚಾರ್ಯ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಯಿತು.ಸಂಯೋಜಕ ರಾಮರಾವ ಯಲಬುರ್ಗ ಸಂಯೋಜಿಸಿದ್ದರು. ವಲಯ ಸಂಯೋಜಕ ಟಿ. ವಾದಿರಾಜ ನಿರೂಪಣೆ ಮಾಡಿದರು. ಟಿಟಿಡಿ’ಯ ದಾಸ ಸಾಹಿತ್ಯ ಪ್ರಾಜಕ್ಟ್‌ನ 30ನೇ ವರ್ಷಾಚರಣೆ ಅಂಗವಾಗಿ ನಗರದ ಜಯತೀರ್ಥ ವಿದ್ಯಾರ್ಥಿನಿಲಯದ ಶ್ರೀಕೃಷ್ಣ ಮಂದಿರದ ಆವರಣದಲ್ಲಿ ಭಜನಾ ಮಂಡಳಿಗಳಿಗಾಗಿ ಈ ಸ್ಪರ್ಧೆ ನಡೆಯಿತು. ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ 40 ಮಹಿಳಾ ಭಜನಾ ಮಂಡಳಿಗಳ ಸುಮಾರು 800 ಸದಸ್ಯೆಯರು ಇದರಲ್ಲಿ ಪಾಲ್ಗೊಂಡಿದ್ದರು. ಸಂಜೆ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು.ಗುಲ್ಬರ್ಗ:
ನಗರದಲ್ಲಿ ನಿರಂತರ ಭಜನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಜನಾ ಮಂಡಳಿಗಳು ಸಾಧನೆಯ ಹಾದಿಯಲ್ಲಿ ಸಾಗಿವೆ ಎಂದು ಶ್ಲಾಘಿಸಿದ ಉಡುಪಿಯ ಪಲಿಮಾರು ಮಠದ ಪೀಠಾಧಿಪತಿ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಗಳು, ಇಲ್ಲಿನ ವಿದ್ವಾಂಸರು, ವಿಪ್ರ ಸಮಾಜ ಹಾಗೂ ಭಜನಾ ಮಂಡಳಿಗಳು ಇಂಥ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದು ನುಡಿದರು.ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ವಿಪ್ರ ಸಮಾಜದ ಜಂಟಿ ಆಶ್ರಯದಲ್ಲಿ ಗುಲ್ಬರ್ಗದ ಕೃಷ್ಣಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ಭಜನಾಮಂಡಳಿಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಭಜನಾ ಮಂಡಳಿಗಳಿಗೆ ಸ್ಪರ್ಧೆ ಆಯೋಜಿಸುವ ಮೂಲಕ ಎಲ್ಲರ ಜ್ಞಾನವೃದ್ಧಿ, ಪ್ರತಿಭಾ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿರುವುದು ಸ್ವಾಗತಾರ್ಹ. ತಿರುಪತಿ ತಿರುಮಲ ದೇವಸ್ಥಾನ ಇಂಥ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದು ಶ್ರೀಗಳು ನುಡಿದರು.ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ನವಲಿ ಕೃಷ್ಣಾಚಾರ್ಯ, ದಾಸ ಸಾಹಿತ್ಯ ಪ್ರಾಜಕ್ಟ್‌ನ ಜಿಲ್ಲಾ ಮಾರ್ಗದರ್ಶಕ ಡಾ. ಶ್ರೀನಿವಾಸ ಪದಕಿ, ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಪಂ. ಗೋಪಾಲಾಚಾರ್ಯ ಅಕಮಂಚಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ದಾಸ ಸಾಹಿತ್ಯ ಪ್ರೊಜೆಕ್ಟ್‌ನ ವಿಶೇಷಾಧಿಕಾರಿ ಪಿ.ಆರ್.ಆನಂದತೀರ್ಥಾಚಾರ್ಯ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಯಿತು. ಸಂಯೋಜಕ ರಾಮರಾವ ಯಲಬುರ್ಗ ಸಂಯೋಜಿಸಿದ್ದರು. ವಲಯ ಸಂಯೋಜಕ ಟಿ. ವಾದಿರಾಜ ನಿರೂಪಣೆ ಮಾಡಿದರು.‘ಟಿಟಿಡಿ’ಯ ದಾಸ ಸಾಹಿತ್ಯ ಪ್ರಾಜಕ್ಟ್‌ನ 30ನೇ ವರ್ಷಾಚರಣೆ ಅಂಗವಾಗಿ ನಗರದ ಜಯತೀರ್ಥ ವಿದ್ಯಾರ್ಥಿನಿಲಯದ ಶ್ರೀಕೃಷ್ಣ ಮಂದಿರದ ಆವರಣದಲ್ಲಿ ಭಜನಾ ಮಂಡಳಿಗಳಿಗಾಗಿ ಈ ಸ್ಪರ್ಧೆ ನಡೆಯಿತು. ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ 40 ಮಹಿಳಾ ಭಜನಾ ಮಂಡಳಿಗಳ ಸುಮಾರು 800 ಸದಸ್ಯೆಯರು ಇದರಲ್ಲಿ ಪಾಲ್ಗೊಂಡಿದ್ದರು. ಸಂಜೆ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.