ಸುಳ್ಳು ಹೇಳುವವರನ್ನು ನಂಬಬೇಡಿ: ಶಾಸಕ ಡಾ.ಕೆ.ಸುಧಾಕರ್

ಶನಿವಾರ, ಏಪ್ರಿಲ್ 20, 2019
31 °C
ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಸುಳ್ಳು ಹೇಳುವವರನ್ನು ನಂಬಬೇಡಿ: ಶಾಸಕ ಡಾ.ಕೆ.ಸುಧಾಕರ್

Published:
Updated:
Prajavani

ಚಿಕ್ಕಬಳ್ಳಾಪುರ: ‘ಲೋಕಸಭಾ ಚುನಾವಣೆ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಹೀಗಾಗಿ ಮತದಾರರು ತಮ್ಮ ಮತವನ್ನು ತುಲನೆ ಮಾಡಿ ಯೋಗ್ಯರಿಗೆ ಚಲಾಯಿಸಬೇಕು’ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿ, ನಂದಿ, ಕುಪ್ಪಹಳ್ಳಿ, ಅಗಲಗುರ್ಕಿ, ಮುದ್ದೇನಹಳ್ಳಿ, ಕೋಡೇನಹಳ್ಳಿ, ದೊಡ್ಡಮರಳಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗಳಲ್ಲಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ ಶೇ 65 ರಷ್ಟು ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಆದರೆ 2 ಕೋಟಿ ಉದ್ಯೋಗ ಕಳೆದುಕೊಳ್ಳಲಾಗುತ್ತಿದೆ. ಬಿಜೆಪಿಯವರ ಭರವಸೆಗಳು ಬರೀ ಸುಳ್ಳಿನ ಕಂತೆ. ಆದ್ದರಿಂದ ಯಾವುದೇ ಕಾರಣಕ್ಕೂ ಸುಳ್ಳು ಹೇಳುವವರನ್ನು ನಂಬಬೇಡಿ’ ಎಂದು ಹೇಳಿದರು.

‘ಕೆ.ಎಚ್ ಮುನಿಯಪ್ಪ ಮತ್ತು ಎಂ.ವೀರಪ್ಪ ಮೊಯಿಲಿ ಅವರು ನಮಗೆ ಎರಡು ಕಣ್ಣುಗಳು ಇದ್ದಂತೆ. ಈ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಕಡಿಮೆ ಮತಗಳು ಬಂದರೆ ನಮ್ಮ ಗೌರವ ಹೋಗುತ್ತದೆ. ಯಾರು ಏನೇ ಹೇಳಿದರೂ ಕೇಳಬೇಡಿ. ನಾನು ನಿಮ್ಮ ಜತೆ ಇದ್ದೇನೆ. ಏನೇ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಈಗಲೇ ಮರೆತು ಬಿಡಿ. ಇದರಿಂದ ನಾನು ತಲೆ ತಗ್ಗಿಸುವಂತಹ ಕೆಲಸ ಮಾಡಬೇಡಿ’ ಎಂದು ಮುಖಂಡರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಕೆಪಿಸಿಸಿ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಟಿಎಪಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಜಿ.ಆರ್.ಶ್ರೀನಿವಾಸ್, ಯಲುವಳ್ಳಿ ಎನ್.ರಮೇಶ್, ಸು.ಧಾ.ವೆಂಕಟೇಶ್, ರಾಜಣ್ಣ, ನಾರಾಯಣಸ್ವಾಮಿ, ಗಂಗಾಧರ್, ಮಂಜು, ರಾಮಾಂಜಿ, ಶ್ರೀಧರ್, ಕೃಷ್ಣಮೂರ್ತಿ, ಚನ್ನಕೇಶವ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !