ಮಂಡ್ಯ: ಜೆಡಿಎಸ್‌ ಪರ ಪ್ರಚಾರಕ್ಕೆ ತಲೆಗೆ ₹ 500; ಶಿವರಾಮೇಗೌಡರ ಆಡಿಯೊ ವೈರಲ್‌

ಬುಧವಾರ, ಏಪ್ರಿಲ್ 24, 2019
23 °C

ಮಂಡ್ಯ: ಜೆಡಿಎಸ್‌ ಪರ ಪ್ರಚಾರಕ್ಕೆ ತಲೆಗೆ ₹ 500; ಶಿವರಾಮೇಗೌಡರ ಆಡಿಯೊ ವೈರಲ್‌

Published:
Updated:

ಮಂಡ್ಯ: ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಲು ಬೆಂಗಳೂರಿನಿಂದ ಹುಡುಗರನ್ನು ಕರೆತರುವಂತೆ ಸಂಸದ ಎಲ್‌.ಆರ್‌.ಶಿವರಾಮೇಗೌಡ ಜೆಡಿಎಸ್‌ ಕಾರ್ಯಕರ್ತ ಡಾನ್‌ ರಮೇಶ್‌ಗೆ ಸೂಚನೆ ನೀಡುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರಿನಿಂದ ಬರುವ ಹುಡುಗರಿಗೆ ತಲೆಗೆ ₹ 500 ನೀಡಲಾಗುವುದು. ವಾಹನ ಮಾಡಿಕೊಂಡು ಕರೆದುಕೊಂಡು ಬರಲು ತಿಳಿಸುವ 43 ಸೆಕೆಂಡ್‌ಗಳ ಸಂಭಾಷಣೆ ಆಡಿಯೊದಲ್ಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಎಲ್‌.ಆರ್‌.ಶಿವರಾಮೇಗೌಡ ‘ಆಡಿಯೊ ನನ್ನದೇ. ನಾಲ್ಕೈದು ಕುಟುಂಬಗಳ ಸದಸ್ಯರು ಬೆಂಗಳೂರಿಂದ ಬರುತ್ತಿದ್ದರು. ಅವರು ಕಾರ್‌ ಮಾಡಿಕೊಂಡು ಬಂದರೆ ತಲೆಗೆ ₹ 500 ನೀಡುವುದಾಗಿ ತಿಳಿಸಿದೆ’ ಎಂದರು.

ಸಂಭಾಷಣೆ ಏನಿದೆ?

ಡಾನ್‌ ರಮೇಶ್‌: ಅಣ್ಣ ನಾವು ಕ್ಯಾನ್ವಾಸ್‌ಗೆ ಯಾವಾಗ ಬರಬೇಕಣ್ಣಾ?

ಎಲ್‌.ಆರ್‌.ಶಿವರಾಮೇಗೌಡ: ಯಾರು ಮಾತನಾಡುತ್ತಿರುವುದು?

ಡಾನ್‌ ರಮೇಶ್‌: ನಾನು ರಮೇಶ್

ಎಲ್‌.ಆರ್‌.ಶಿವರಾಮೇಗೌಡ: ಓ ಡಾನ್‌, ಬನ್ನಿ, ನಾಳೆಯಿಂದಲೇ ಬನ್ನಿ

ಡಾನ್‌ ರಮೇಶ್‌: ಬೆಂಗಳೂರಿನ ಎಲ್ಲರನ್ನೂ ಕರೆದುಕೊಂಡು ಬರಬೇಕು

ಎಲ್‌.ಆರ್‌.ಶಿವರಾಮೇಗೌಡ: ತಲೆಗೆ ₹ 500 ಕೊಡುತ್ತೇವೆ, ಎಲ್ಲರನ್ನೂ ಕರೆದುಕೊಂಡು ಬಾ

ಡಾನ್‌ ರಮೇಶ್‌: ತುಂಬಾ ಜನರ ಬರುತ್ತಾರೆ, ಬಸ್‌ ವ್ಯವಸ್ಥೆ ನಾವೇ ಮಾಡಿಕೊಳ್ಳಿಬೇಕಾ?

ಎಲ್‌.ಆರ್‌.ಶಿವರಾಮೇಗೌಡ: ನೀವೆ ಮಾಡಿಕೊಂಡು ಬನ್ನಿ, ತಲೆಗೆ ₹ 500, ಅಪ್ಪಾಜಿಗೌಡ (ವಿಧಾನ ಪರಿಷತ್ ಸದಸ್ಯ) ಅವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 17

  Angry

Comments:

0 comments

Write the first review for this !