ಶನಿವಾರ, ಮಾರ್ಚ್ 6, 2021
28 °C
ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ

ಮತ ಹಾಕದಿದ್ದರೆ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ! ಜಿಲ್ಲಾಡಳಿತದಿಂದ ವಿನೂತನ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ಮತದಾನದ ದಿನವಾದ ಗುರುವಾರ (ಏ.18) ನೀವು ಮತ ಚಲಾಯಿಸುವುದು ಬಿಟ್ಟು ರಜೆ ಕಳೆಯಲು ಎಂದು ನಂದಿಬೆಟ್ಟಕ್ಕೆ ಹೋದಿರಿ ಜೋಕೆ! ಬೆರಳಿನ ಮೇಲೆ ಹಾಕಿದ ಅಳಿಸದ ಶಾಹಿ ತೋರಿಸಿದ ಹೊರತು ನಿಮಗೆ ಬೆಟ್ಟದ ಮೇಲೆ ಪ್ರವೇಶ ಸಿಗುವುದಿಲ್ಲ.

ಕೇಳಲು ತುಸು ಆಶ್ಚರ್ಯವಾದರೂ ಇದು ಸತ್ಯ. ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಮತ ಚಲಾಯಿಸುವ ಅರ್ಹತೆ ಇದ್ದರೂ ಮತದಾನ ಮಾಡದೆ ಬೆಟ್ಟಕ್ಕೆ ಬರುವವರಿಗೆ ಗುರುವಾರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್‌ ಅವರನ್ನು ವಿಚಾರಿಸಿದರೆ, ‘ಚುನಾವಣೆ ಎನ್ನುವುದು ಐದು ವರ್ಷಕ್ಕೊಮ್ಮೆ ನಡೆಯುವ ಪ್ರಜಾಪ್ರಭುತ್ವ ಹಬ್ಬ. ಅದರ ಸಿದ್ಧತೆಗಾಗಿ ಎಷ್ಟೊಂದು ಜನರು ಶ್ರಮಿಸುತ್ತಾರೆ. ಅದಕ್ಕಾಗಿಯೇ ಸರ್ಕಾರಗಳು ಸಾರ್ವತ್ರಿಕ ರಜೆ ಘೋಷಿಸುತ್ತವೆ. ಅದನ್ನು ಗಮನದಲ್ಲಿಟ್ಟುಕೊಂಡು ನಾವು ಮೊದಲು ಪ್ರಜ್ಞಾವಂತ ನಾಗರಿಕರಾಗಿ ನೈತಿಕವಾಗಿ ಮತ ಚಲಾಯಿಸಬೇಕು. ಬಳಿಕ ಉಳಿದ ಸಮಯವನ್ನು ಕುಟುಂಬದೊಂದಿಗೆ ಕಳೆಯಬೇಕು’ ಎಂದು ಹೇಳಿದರು.

‘ಮತದಾನ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ನೀಡಿದ ರಜೆಯನ್ನು ಮತದಾರರು ತಮ್ಮ ಖಾಸಗಿ ಕಾರ್ಯಗಳಿಗೆ, ಮೋಜಿಗಾಗಿ ಬಳಸಿಕೊಳ್ಳಲು ಮುಂದಾದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಮತ ಚಲಾಯಿಸದ ಮತದಾರರಿಗೆ ಗುರುವಾರ ನಂದಿಬೆಟ್ಟದ ಪ್ರವೇಶ ನಿಷೇಧಿಸಿದ್ದೇವೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಐಪಿಸಿಯ ಸೆಕ್ಷನ್ 188ರ ಅಡಿ ಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು