ಮಂಗಳವಾರ, ಸೆಪ್ಟೆಂಬರ್ 28, 2021
21 °C

ರತ್ನಖಚಿತ ಸಿಖ್‌ ಪೇಟಾ 3.16 ಕೋಟಿಗೆ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌: ಇಲ್ಲಿನ ಸೊದೆಬಿ ಹರಾಜು ಸಂಸ್ಥೆಯಲ್ಲಿ ಇಸ್ಲಾಮಿಕ್‌ ವರ್ಲ್ಡ್ ಕಲಾ ಸಂಸ್ಥೆ ಬುಧವಾರ ಆಯೋಜಿಸಿದ್ದ ಹರಾಜಿನಲ್ಲಿ ಸಿಖ್‌ ಖಾಲ್ಸಾ ಕಮಾಂಡರ್‌ ಹರಿ ಸಿಂಗ್‌ ನಲ್ವಾಗೆ ಸೇರಿದ್ದ 19ನೇ ಶತಮಾನದ ರತ್ನದ ಆಭರಣ ಹೊಂದಿದ್ದ ಪೇಟಾ ಪ್ರಮುಖ ಆಕರ್ಷಣೆಯಾಗಿತ್ತು. ಈ ಆಭರಣವು ₹3.16 ಕೋಟಿಗೆ (3.50 ಲಕ್ಷ ಪೌಂಡ್‌) ಮಾರಾಟವಾಯಿತು.

ಹರಾಜಿನಲ್ಲಿ ಈ ಪೇಟಾಕ್ಕೆ ₹1.63 ಕೋಟಿ ದರ ನಿಗದಿಪಡಿಸಲಾಗಿತ್ತು. ಹರಾಜಿನಲ್ಲಿ ದುಪ್ಪಟ್ಟು ದರ ದೊರೆತಿದೆ. ಭಾರತದ ಸಂತಕವಿ ಸೂರ್‌ ದಾಸ್‌ ಅವರಿಗೆ ಸಮರ್ಪಿಸಲಾದ 17ನೇ ಶತಮಾನದ ಮೊಘಲರ ಕಾಲದ ಯುದ್ಧದ ವರ್ಣಚಿತ್ರ (ಎ ಬ್ಯಾಟಲ್‌ ಔಟ್‌ಸೈಡ್‌ ಎ ವಾಲ್ಡ್ ಫೋರ್ಟ್ರೆಸ್‌) ₹1.30 ಕೋಟಿಗೆ, ‘ಎ ಡ್ರಾಯಿಂಗ್‌ ಆಫ್‌ ಫ್ರೆಡ್ರಿಕ್ ದಿ ವೈಸ್‌’ ಎಂಬ ರೇಖಾಚಿತ್ರ ₹92.70 ಲಕ್ಷಕ್ಕೆ ಹರಾಜಾದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು