ಸೋಮವಾರ, ಸೆಪ್ಟೆಂಬರ್ 27, 2021
25 °C

ಬೊಮ್ಮಶೆಟ್ಟಿಹಳ್ಳಿಯಲ್ಲಿ ಸೌಹಾರ್ದತೆಯ ಊರ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಪ್ರತಿ ಮನೆಗಳ ಮುಂದೆ ಹೂ ಮತ್ತು ಬಣ್ಣಗಳಿಂದ ಅರಳಿದ ರಂಗೋಲಿ, ಮುತೈದೆಯರ ಸಡಗರದ ಓಡಾಟ, ಮಾವಿನ ತೋರಣ ಕಟ್ಟುವ ಸಂಭ್ರಮ... ಇವೆಲ್ಲವು ದಾಸನಪುರ ಹೋಬಳಿಯ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಊರಹಬ್ಬ ಮತ್ತು ಮಾರಮ್ಮ ಜಾತ್ರೆಯ ಮಹೋತ್ಸವದಲ್ಲಿ ಅನಾವರಣವಾದವು.  

ನಾಲ್ಕು ದಿನಗಳ ಕಾಲ ನಡೆದ ಮಾರಮ್ಮ ದೇವಿಯ ಜಾತ್ರಾಮಹೋತ್ಸವದಲ್ಲಿ ಕೊಂಡೋತ್ಸವ, ತಂಬಿಟ್ಟಿನ ಆರತಿ, ಮೆರವಣಿಗೆ ಮತ್ತು ಮಡಿಲಕ್ಕಿ ತುಂಬುವ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು. 

ಮಾರಮ್ಮ ದೇವಿಗೆ ಗ್ರಾಮಸ್ಥರು ಅಕ್ಕಿ, ಬೆಲ್ಲ, ಹಸಿರು ವಸ್ತ್ರ, ಕಪ್ಪು ಬಳೆ, ಹೂ, ತೆಂಗಿನಕಾಯಿ, ಬಾಳೆಹಣ್ಣುಗಳನ್ನು ಮೊರದಲ್ಲಿ ಇಟ್ಟು ಮಡಿಲಕ್ಕಿ ತುಂಬಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಮೆರವಣಿಗೆ ಮಾಡಿದರು. ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಪ್ರಾರ್ಥಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು