ಶುಕ್ರವಾರ, ಸೆಪ್ಟೆಂಬರ್ 17, 2021
25 °C
ಟಿಎಂಸಿ ಕಾರ್ಯಕರ್ತರಿಗೆ ಬೆದರಿಕೆ

ಟಿಎಂಸಿ ಕಾರ್ಯಕರ್ತರನ್ನು ನಾಯಿಗಳಂತೆ ಸಾಯಿಸುತ್ತೇನೆ: ಬಿಜೆಪಿ ಅಭ್ಯರ್ಥಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕೊತ್ತ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಅನ್ನು ಬೀದಿಗೆಳೆಯುತ್ತೇನೆ ಎಂದು ಘಾತ್ಕಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರು ಟಿಎಂಸಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿರುವ ವಿಡಿಯೊ ಒಂದು ವೈರಲ್‌ ಆಗಿದ್ದು ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಆನಂದಪುರ ಲೋಕಸಭಾ ಕ್ಷೇತ್ರದ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ವಿಡಿಯೊ ಇದಾಗಿದೆ. 

‘ನಿಮ್ಮನ್ನು (ಟಿಎಂಸಿ ಕಾರ್ಯಕರ್ತರು) ಮನೆಯಿಂದ ಎಳೆತಂದು ನಾಯಿಗಳಂತೆ ಸಾಯಿಸುತ್ತೇನೆ. ಉತ್ತರ ಪ್ರದೇಶದಿಂದ ಸಾವಿರ ಜನರನ್ನು ಕರೆತರುತ್ತೇನೆ. ನೀವು ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ರಕ್ಷಣೆ ಪಡೆಯಿರಿ’ ಎಂದು ಘೋಷ್‌ ಹೇಳಿರುವುದು ವಿಡಿಯೊದಲ್ಲಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ‘ಆಕೆಯ ವಿರುದ್ಧ  ಅನೇಕ ಪ್ರಕರಣಗಳಿವೆ. ನಾವು ಆಕೆಯನ್ನು ಬಂಧಿಸಬಹುದು. ಆದರೆ, ಹಾಗೆ ಮಾಡುತ್ತಿಲ್ಲ. ಆದರೆ ಮಿತಿ ಮೀರಿ ವರ್ತಿಸದಿರುವುದು ಆಕೆಗೆ ಕ್ಷೇಮಕರ’ ಎಂದಿದ್ದಾರೆ.

ಘೋಷ್‌ ಅವರು ನಕ್ಸಲ್‌ ಪೀಡಿತ ಜಿಲ್ಲೆಗಳಾದ ಮೇದಿನಿಪುರ್‌ ಮತ್ತು ಜರ್‌ಗ್ರಾಮ್‌ನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆಗಿ ಹಿಂದೆ ಕೆಲಸ ಮಾಡಿದ್ದರು. ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿ ಗಮನಸೆಳೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು