ದುರ್ಗಂಧ ಶ್ವಾಸ ತಡೆಗೆ ಆಸನಗಳು

ಶನಿವಾರ, ಮೇ 25, 2019
22 °C

ದುರ್ಗಂಧ ಶ್ವಾಸ ತಡೆಗೆ ಆಸನಗಳು

Published:
Updated:
Prajavani

ನಿತ್ಯ ಹಲ್ಲುಜ್ಜಿ, ಬಾಯಿ ತೊಳೆಯುತ್ತೇವೆ. ಆದರೂ, ಕೆಲವರು ಬಾಯಿ ಬಿಟ್ಟರೆ ಸಾಕು ಅಕ್ಕ-ಪಕ್ಕ ಬೇರೆಯವರು ನಿಂತು ಮಾತನಾಡುವುದೇ ಕಷ್ಟ, ಅಷ್ಟರ ಮಟ್ಟಿಗೆ ದುರ್ಗಂಧ ಬರುತ್ತಿರುತ್ತದೆ. ಅವರು ಬಾಯಿ ತೊಳೆದಿದ್ದಾರೊ ಇಲ್ಲವೊ, ಅದೆಷ್ಟು ದಿನವಾಯ್ತೊ ಏನು ಕಥೆಯೊ ಎಂದು ಯೋಚಿಸುತ್ತೇವೆ!

ಬಾಯಿಂದ ದುರ್ಗಂಧ ಹೊರ ಬರುವುದು ಅವರು ಬಾಯಿ ತೊಳೆದಿಲ್ಲವೆಂದಲ್ಲ; ಅವರು ತೊಳೆಯುವಾಗ ಸರಿಯಾದ ಕ್ರಮ ಅನುಸರಿಸಿಲ್ಲ ಎಂದರ್ಥ.

ಇನ್ನು ಮಕ್ಕಳು ತರಗತಿಯಲ್ಲಿ ಜತೆಗೆ ಕುಳಿತವರ ಬಾಯಿಯಿಂದ ದುರ್ವಾಸನೆ ಬಂದರೆ ಮುಜುಗರ ಅನುಭವಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಅಕ್ಕ-ಪಕ್ಕ ಕುಳಿತು, ಪರಸ್ಪರ ಆಟ-ಪಾಠಗಳಲ್ಲಿ ಬೆರೆತು, ಕಾಲ ಕಳೆಯುವುದು ಅನಿವಾರ್ಯ. ಬಾಯಿ ವಾಸನೆಯಿಂದಲೇ ಕೆಲವರ ಜತೆಗೆ ಸೇರಿಸದಿರುವ ಪ್ರಸಂಗಗಳು ಎದುರಾಗುತ್ತವೆ.

ಉಪ್ಪು ಮತ್ತು ನಿಂಬೆ, ಹುಣಸೆ ಹುಳಿ ರಸ ಬಳಸಿ ಬಾಯಿ ಸ್ವಚ್ಛಗೊಳಿಸಿಕೊಳ್ಳಬಹುದು. ಜತೆಗೆ, ಬಾಯಿ ವಾಸನೆ ತೊಡೆಯಲು ನೆರವಾಗುವ ಆಸನಗಳ ಪಟ್ಟಿ ಇಲ್ಲಿದೆ.

* ಉತ್ತಾನಾಸನ

* ಜಠರ ಪರಿವರ್ತನಾಸನ

* ಸಿಂಹಾಸನ -ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಆಸನವಾಗಿದೆ

* ಪಶ್ಚಿಮೋತ್ತಾನಾಸನ

* ಶೀರ್ಷಾಸನ ಹಾಗೂ ಮುಂದುವರಿದ ಹಂತಗಳು

* ಸರ್ವಾಂಗಾಸ ಮತ್ತು ಮುಂದುವರಿದ ಹಂತಗಳು

* ನಾಡಿಶೋಧನ ಹಾಗೂ ಉಜ್ಜಾಯಿ ಹಾಗೂ ಶೀತಳೀ ಪ್ರಾಣಾಯಾಮ ಅಭ್ಯಾಸ

* ಉಡ್ಡಿಯಾನ ಬಂಧ(ಇದು ಆಸನವಲ್ಲ) 

ಹೀಗೆ ಮಾಡಿ
ಬಾಯಿಯನ್ನು ದೊಡ್ಡದಾಗಿ ತೆರೆದು ನಾಲಿಗೆಯನ್ನು ಹೊರಚಾಚಿ, ಸುರುಳಿ ಮಾಡಿ ಮೂಗಿನ ತುದಿಯತ್ತ ಮೇಲಕ್ಕೆ ತನ್ನಿ. ನಾಲಿಗೆಯ ಸುರಳಿ ಮಧ್ಯೆ ಉಸಿರನ್ನು ಹೊರ ಹಾಕಿ. ಈ ಅಭ್ಯಾಸದಿಂದ ಬಾಯಿ ದುರ್ಗಂಧ ನಿವಾರಣೆಯಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !