ಭಾನುವಾರ, ಸೆಪ್ಟೆಂಬರ್ 19, 2021
24 °C
ಹೊಂಬಾಳಮ್ಮ ದೇವಿಯವರ ದೇವಾಲಯ ಪ್ರಾರಂಭೋತ್ಸವ

ಮನುಷ್ಯರ ಸದಾಚಾರಿಗಳನ್ನಾಗಿಸುವ ಭಕ್ತಿ: ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಧರ್ಮ, ಆಚರಣೆ ಹಾಗೂ ಭಕ್ತಿ ಮನುಷ್ಯನನ್ನು ಸನ್ನಡತೆ, ಸಚ್ಚಾರಿತ್ರ್ಯ ಹಾಗೂ ಸದಾಚಾರಿಗಳನ್ನಾಗಿ ಮಾಡುತ್ತವೆ ಎಂದು ಕುಪ್ಪೂರು ಗದ್ದುಗೆ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊಂಬಾಳಮ್ಮ ದೇವಿಯವರ ದೇವಾಲಯ ಪ್ರಾರಂಭೋತ್ಸವ, ಶಿಲಾ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ನೂತನ ಗೋಪುರ ಕಲಶ ಸ್ಥಾಪನಾ ಮಹೋತ್ಸವದ ಬಳಿಕ ನಡೆದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ಹಾಗೂ ಕುಪ್ಪೂರು ಮಠದ ದಿವ್ಯ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಹೊಂಬಾಳಮ್ಮ ದೇವಿಯನ್ನು ಪುಣ್ಯಕ್ಷೇತ್ರ ತೀರ್ಥರಾಮೇಶ್ವರ ವಜ್ರಕ್ಕೆ ಕರೆದೊಯ್ದು ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದಲ್ಲಿ ಹೊಂಬಾಳಮ್ಮನವರು, ಬನಶಂಕರಿ ಅಮ್ಮನವರ ಹಾಗೂ ರೇವಣಸಿದ್ದೇಶ್ವರ ಉತ್ಸವದ ಜೊತೆಗೆ ದೇವಾಲಯಕ್ಕೆ ಹೊಂಬಾಳಮ್ಮ ದೇವಿಯನ್ನು ಕರೆತರಲಾಯಿತು.

ದೇವಾಲಯದಲ್ಲಿ ಗಣಪತಿ ಪೂಜೆ ಸ್ವಸ್ತಿವಾಚನ, ಪುಣ್ಯಾಹ, ದೇವನಂದಿ, ಕಲಶ ಸ್ಥಾಪನೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ವಾಸ್ತುಹೋಮ, ರಾಕ್ಷೊಘ್ನ ಹೋಮ ಹಾಗೂ ನೂತನ ವಿಗ್ರಹಗಳಿಗೆ ಜಲಾಧಿವಾಸ ಕ್ಷೀರಾಧಿವಾಸ, ವಸ್ತ್ರಾಧಿವಾಸ, ಫಲಾಧಿವಾಸ, ಧಾನ್ಯಧಿವಾಸ, ರತ್ನಾಧಿವಾಸ, ಶಯ್ಯಾಧಿವಾಸ, ನೆರವೇರಿತು.

ನೂತನ ದೇವಾಲಯದ ಕಳಶ ಪ್ರತಿಷ್ಠಾಪನೆಯನ್ನು ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ನೆರವೇರಿಸಿದರು. ನಂತರ ಅಮ್ಮನವರಿಗೆ ನೇತ್ರೋನ್ಮಿಲನ ಪ್ರಾಣ ಪ್ರತಿಷ್ಠಾಪನೆ, ಪಂಚಾಮೃತ ಅಭೀಷೇಕ, ಮಹಾಭೀಷೇಕ, ಅಷ್ಠೋತ್ತರ, ಶತನಾಮಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಧಾರ್ಮಿಕ ಸಮಾರಂಭದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ, ಪುರಸಭಾ ಸದಸ್ಯೆ ಲಕ್ಷ್ಮಿ ಪಾಂಡುರಂಗ, ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಸಿ.ಎಸ್.ಬಸಪ್ಪಭಾಗವತ್, ಗೌರವಾಧ್ಯಕ್ಷ ಗಾಯತ್ರಿ ಧೃವಕುಮಾರ್, ಬಿ.ಕೆ.ರಮೇಶ್, ಸಿ.ಜಿ.ನಟರಾಜ್, ಈಶ್ವರ್‌ಭಾಗವತ್, ಸಿ.ಜಿ.ನಟರಾಜ್, ದೇವಾಂಗ ಸಂಘದ ಅಧ್ಯಕ್ಷ ಸಿ.ಕೆ.ಕೃಷ್ಣಯ್ಯ, ಕಾರ್ಯದರ್ಶಿ ಸಿ.ಎಸ್.ಧನರಾಜು, ನಿರ್ದೇಶಕ ಸಿ.ಎನ್.ಅರವಿಂದ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.