ಭಾನುವಾರ, ಸೆಪ್ಟೆಂಬರ್ 19, 2021
30 °C

ಬಿಡೆನ್‌ ಅಧಿಕಾರಕ್ಕೆ ಬರುವ ಕನಸಲ್ಲಿ ಚೀನಾ ನಿಯಮ ಉಲ್ಲಂಘನೆ: ಟ್ರಂಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಚೀನಾ, ವ್ಯಾಪಾರ ಒಪ್ಪಂದದ ಕರಡನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. 

ಚೀನಾ ವಿರುದ್ಧದ ತಮ್ಮ ನಿಲುವಿನ ಬಗ್ಗೆ ಟ್ರಂಪ್‌ ಸರಣಿ ಟ್ವೀಟ್‌ ಮಾಡಿದ್ದಾರೆ. 

ಅಮೆರಿಕವನ್ನು ಸುಲಿಗೆ ಮಾಡುವುದೆಂದರೆ ಚೀನಾಕ್ಕೆ ಪ್ರೀತಿ. 2020 ಚುನಾವಣೆಯ ನಂತರ ಡೆಮಾಕ್ರೆಟಿಕ್‌ ಪಕ್ಷದ ಜೋ ಬಿಡೆನ್‌ ಅಥವಾ ಇನ್ಯಾರೋ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಚೀನಾ ಇದೆ. ಈ ಕಾರಣಕ್ಕೆ ಅದು, ಹಠಾತ್‌ ವ್ಯಾಪಾರ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿದ್ದಾರೆ. 

ವಾಣಿಜ್ಯ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ವಾರ ಚೀನಾದೊಂದಿಗೆ ನಡೆದ ಮಾತುಕತೆ ಯಾವುದೇ ಫಲ ನೀಡಿರಲಿಲ್ಲ.

ಚೀನಾದಿಂದ ಆಮದಾಗುತ್ತಿರುವ ₹ 140 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸರಕುಗಳ ಮೇಲಿನ ಆಮದು ಸುಂಕವನ್ನು ಶೇ 10 ರಿಂದ ಶೇ 25ಕ್ಕೆ ಹೆಚ್ಚಿಸುವಂತೆ ಟ್ರಂಪ್‌ ಆದೇಶಿಸಿದ್ದರು. ಇದಲ್ಲದೆ ಇನ್ನುಳಿದ ₹ 2.10 ಲಕ್ಷ ಕೋಟಿ ಮೌಲ್ಯದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಪ್ರಕ್ರಿಯೆ ಆರಂಭಿಸುವಂತೆಯೂ ಆದೇಶಿಸಿದ್ದರು. 

ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಂಪ್‌, ಚೀನಾ ಸರಕುಗಳ ಮೇಲೆ ವಿಧಿಸಿರುವ ಹೊಸ ಸುಂಕದಿಂದ ಅಮೆರಿಕದ ಆದಾಯ ಅಧಿಕವಾಗಲಿದೆ ಎಂದಿದ್ದಾರೆ. 

‘ಸುಂಕ ಹೆಚ್ಚಳದಿಂದಾಗಿ, ಖರೀದಿದಾರರು ಉತ್ಪನ್ನಗಳನ್ನು ಅಮೆರಿಕದಲ್ಲಿಯೇ ತಯಾರಿಸುತ್ತಾರೆ. ಇಲ್ಲವೇ ಸುಂಕ ರಹಿತ ದೇಶಗಳಿಂದ ಖರೀದಿಸುತ್ತಾರೆ’ ಎಂದು ತಿಳಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು